ದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan)ಅವರು ಮಂಗಳವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಇಂಧನ ಬೆಲೆಗಳ ಏರಿಕೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದು ಅವರನ್ನು (ಬಿಜೆಪಿ) ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 73ರ ಹರೆಯದ ನಟಿ-ರಾಜಕಾರಣಿಯು ಬೆಲೆ ಏರಿಕೆಯನ್ನು ಐದು ರಾಜ್ಯಗಳ ಚುನಾವಣೆಗಳಿಗೆ ಲಿಂಕ್ ಮಾಡಿದ್ದಾರೆ. ಸರ್ಕಾರ ಹೀಗೆಯೇ ಮಾಡುತ್ತದೆ, ಅಖಿಲೇಶ್ ಯಾದವ್ (Akhilesh Yadav) ತಮ್ಮ ಪ್ರಚಾರದಲ್ಲಿ ಪದೇ ಪದೇ ಹೇಳುತ್ತಿದ್ದಾರೆ, ಜನರೇ ಎಚ್ಚರವಾಗಿರಿ, ಚುನಾವಣೆ ನಂತರ ಬೆಲೆ ಹೆಚ್ಚಾಗಲಿದೆ. ಅವರನ್ನು (BJP) ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲಎಂದು ಜಯಾ ಬಚ್ಚನ್ ಹೇಳಿದ್ದಾರೆ . ಫೆಬ್ರವರಿ 26 ರಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜ್ಯ ಚುನಾವಣೆಗಳು ಮುಗಿದ ನಂತರ ಕೇಂದ್ರವು ಇಂಧನ ಬೆಲೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದರು. ರೈತರಿಗೆ ಟ್ರ್ಯಾಕ್ಟರ್ ಓಡಿಸಲು ಸಾಧ್ಯವಾಗುತ್ತಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ, ಚುನಾವಣೆ ಮುಗಿದ ತಕ್ಷಣ ಬಿಜೆಪಿಯವರು ಪೆಟ್ರೋಲ್ ಬೆಲೆ ₹ 200ಕ್ಕೆ ಏರಿಸುತ್ತಾರೆ ಎಂದು ಪತ್ರಿಕೆಗಳೂ ಬರೆಯಲಾರಂಭಿಸಿವೆ’ ಎಂದಿದ್ದರು. ಅಖಿಲೇಶ್ ಯಾದವ್ ಮತ್ತೊಮ್ಮೆ ಗೃಹ ಅಡುಗೆ ಅನಿಲದ ಬೆಲೆ ಏರಿಕೆಯ ಬಗ್ಗೆ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಇದು ರಾಜ್ಯ ಚುನಾವಣೆಯ ನಂತರ ಜನರಿಗೆ “ಹಣದುಬ್ಬರದ ಮತ್ತೊಂದು ಕೊಡುಗೆ” ಎಂದು ಬಣ್ಣಿಸಿದರು.
जनता को दिया भाजपा सरकार ने महंगाई का एक और उपहार… लखनऊ में रसोई गैस सिलेंडर हुआ हज़ार के पास और पटना में हज़ार के पार!
चुनाव ख़त्म, महंगाई शुरू… pic.twitter.com/JUROJtgwTr
— Akhilesh Yadav (@yadavakhilesh) March 22, 2022
ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 80 ಪೈಸೆ ಏರಿಕೆಯಾಗಿದ್ದು, ಗೃಹಬಳಕೆಯ ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ ₹ 50 ಏರಿಕೆಯಾಗಿದೆ. ನವೆಂಬರ್‌ನಲ್ಲಿ ದೇಶವು ಕೊನೆಯ ಬಾರಿ ಇಂಧನ ಬೆಲೆ ಏರಿಕೆಯನ್ನು ಕಂಡಿತು.
ಅಖಿಲೇಶ್ ಯಾದವ್, ಜಯಾ ಬಚ್ಚನ್ ಅಲ್ಲದೆ ರಾಹುಲ್ ಗಾಂಧಿ ಕೂಡ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ. “ನೀವು ಪ್ರಧಾನಿಯನ್ನು ಕೇಳಿದರೆ, ಅವರು ತಟ್ಟೆಗಳನ್ನು ಬಡಿಯುವಂತೆ ಹೇಳುತ್ತಾರೆ ಎಂದಿದ್ದಾರೆ ರಾಹುಲ್ .
“ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಮೇಲೆ ವಿಧಿಸಲಾದ ‘ಲಾಕ್‌ಡೌನ್’ ಅನ್ನು ತೆಗೆದುಹಾಕಲಾಗಿದೆ. ಈಗ ಸರ್ಕಾರವು ನಿರಂತರವಾಗಿ ಬೆಲೆಗಳನ್ನು ‘ಅಭಿವೃದ್ಧಿಪಡಿಸುತ್ತದೆ’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾರ್ಚ್ 28ರಂದು ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣ ವಚನ ಸ್ವೀಕಾರ