ಡಿಆರ್​​ಡಿಒ, ಭಾರತೀಯ ನೌಕಾಪಡೆಯಿಂದ ಒಡಿಶಾ ಕರಾವಳಿಯಲ್ಲಿ VL-SRSAM ಕ್ಷಿಪಣಿ ಯಶಸ್ವಿ ಪರೀಕ್ಷೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 23, 2022 | 6:01 PM

ವರ್ಟಿಕಲ್ ಲಾಂಚ್ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಹೆಚ್ಚಿನ ವೇಗದ ಮಾನವರಹಿತ ವೈಮಾನಿಕ ಗುರಿಯ ಮೇಲೆ ಭಾರತೀಯ ನೌಕಾದಳದ ನೌಕೆಯಿಂದ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು.

ಡಿಆರ್​​ಡಿಒ, ಭಾರತೀಯ ನೌಕಾಪಡೆಯಿಂದ ಒಡಿಶಾ ಕರಾವಳಿಯಲ್ಲಿ VL-SRSAM ಕ್ಷಿಪಣಿ ಯಶಸ್ವಿ ಪರೀಕ್ಷೆ
ಕ್ಷಿಪಣಿ
Follow us on

ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಮಂಗಳವಾರ ಒಡಿಶಾದ ಕರಾವಳಿಯ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR) ನಿಂದ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿ (VL-SRSAM) ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ವರ್ಟಿಕಲ್ ಲಾಂಚ್ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಹೆಚ್ಚಿನ ವೇಗದ ಮಾನವರಹಿತ ವೈಮಾನಿಕ ಗುರಿಯ ಮೇಲೆ ಭಾರತೀಯ ನೌಕಾದಳದ ನೌಕೆಯಿಂದ ಹಾರಾಟ ಪರೀಕ್ಷೆಯನ್ನು ನಡೆಸಲಾಯಿತು.
ಸ್ವದೇಶಿ ರೇಡಿಯೊ ಫ್ರೀಕ್ವೆನ್ಸಿ (RF) ಸೀಕರ್ ಹೊಂದಿರುವ ಕ್ಷಿಪಣಿಗಳು ಹೆಚ್ಚಿನ ನಿಖರತೆಯೊಂದಿಗೆ ಗುರಿಯನ್ನು ತಲುಪಿದವು. VL-SRSAM ವ್ಯವಸ್ಥೆಯನ್ನು DRDO ನಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ.

ಪರೀಕ್ಷಾರ್ಥ ಉಡಾವಣೆ ವೇಳೆ ಐಟಿಆರ್, ಚಂಡೀಪುರದಿಂದ ನಿಯೋಜಿಸಲಾದ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಮತ್ತು ಟೆಲಿಮೆಟ್ರಿ ಸಿಸ್ಟಮ್‌ಗಳಂತಹ ವಿವಿಧ ಶ್ರೇಣಿಯ ಉಪಕರಣಗಳಿಂದ ಸೆರೆಹಿಡಿಯಲಾದ ಫ್ಲೈಟ್ ಡೇಟಾವನ್ನು ಬಳಸಿಕೊಂಡು ಹಾರಾಟದ ಮಾರ್ಗ ಮತ್ತು ವಾಹನದ ಕಾರ್ಯಕ್ಷಮತೆಯ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡಲಾಯಿತು.

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿ (ಡಿಆರ್‌ಡಿಎಲ್), ರಿಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ), ಹೈದರಾಬಾದ್ ಮತ್ತು ಪುಣೆಯ ಆರ್ & ಡಿ ಎಂಜಿನಿಯರ್‌ಗಳಂತಹ ವ್ಯವಸ್ಥೆಯ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ವಿವಿಧ ಡಿಆರ್‌ಡಿಒ ಲ್ಯಾಬ್‌ಗಳ ಹಿರಿಯ ವಿಜ್ಞಾನಿಗಳು ಉಡಾವಣೆಯನ್ನು ಮೇಲ್ವಿಚಾರಣೆ ಮಾಡಿದರು.

Published On - 5:45 pm, Tue, 23 August 22