ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕರೊಬ್ಬರು ಮದ್ಯದ ಅಮಲಿನಲ್ಲಿ ವೃದ್ಧ ದಂಪತಿ ಮೇಲೆ ಮೂತ್ರ ವಿಸರ್ಜಿಸಿರುವ ಘಟನೆ ವರದಿಯಾಗಿದೆ. 20 ವರ್ಷದ ಯುವಕ ಕುಡಿದ ಮತ್ತಿನಲ್ಲಿ ವೃದ್ಧ ದಂಪತಿ ಮೇಲೆ ಮೂತ್ರ ವಿಸರ್ಜಿಸಿದ್ದಾನೆ, ಬುಧವಾರ ಬಿ3 ಕೋಚ್ನಲ್ಲಿ ಘಟನೆ ನಡೆದಿದೆ.ರೈಲು ವಿರಂಗನ ಲಕ್ಷ್ಮೀಬಾಯಿ ಝಾನ್ಸಿ ಜಂಕ್ಷನ್ ಕಡೆಗೆ ಪ್ರಯಾಣಿಸುತ್ತಿದ್ದಾಗ ಮಲಗಿದ್ದ ವೃದ್ಧ ದಂಪತಿ ಹಾಗೂ ಅವರ ಲಗೇಜ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವೃದ್ಧ ದಂಪತಿ ಇದರಿಂದ ಆಘಾತಕ್ಕೊಳಗಾಗಿದ್ದರು.
ನಾವು ದೆಹಲಿಗೆ ಹೋಗುತ್ತಿದ್ದೆವು ಪ್ರಯಾಣ ಶಾಂತಿಯುತವಾಗಿರುತ್ತದೆ ಎಂದುಕೊಂಡಿದ್ದೆವು ಈ ರೀತಿಯಾಗುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ದಂಪತಿ ಹೇಳಿದ್ದಾರೆ.
ಯುವಕನನ್ನು ರಿತೇಶ್ ಎಂದು ಗುರುತಿಸಲಾಗಿದೆ, ಆತ ಸಂಪೂರ್ಣ ಮದ್ಯದ ಅಮಲಿನಲ್ಲಿದ್ದ, ಘಟನೆ ನಡೆದ ತಕ್ಷಣ ಕೋಚ್ ಅಟೆಂಡೆಂಟ್ ಹಾಗೂ ಟಿಟಿಇಗೆ ಮಾಹಿತಿ ನೀಡಲಾಯಿತು. ಬಟ್ಟೆ ಎಲ್ಲವೂ ಒದ್ದೆಯಾಗಿ ದುರ್ವಾಸನೆಯಿಂದ ಕೂಡಿತ್ತು. ಆರೋಪಿಯನ್ನು ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ಇಳಿಸಲಾಯಿತು.
ಮತ್ತಷ್ಟು ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
ಟಿಟಿಇ ತಕ್ಷಣವೇ ಕೋಚ್ ಅನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು, ರಿತೇಶ್ನನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರ ಬಳಿ ಕಳುಹಿಸಲಾಗಿದೆ. ರಿತೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ