ದೆಹಲಿ: Thanks to Coronavirus ಭಾರತ ಸೇರಿದಂತೆ ಜಗತ್ತಿನಾದ್ಯಂತ ವಾಯುಮಾಲಿನ್ಯ ಕುಸಿಯುತ್ತಾ ಬಂದಿದೆ. ಹೀಗಾಗಿ ಸಾವಿನ ಪ್ರಮಾಣವೂ ಸಹ ಇಳಿಕೆಯಾಗಿದೆ ಎಂದು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವರದಿ ಮಾಡಿದೆ. ಮತ್ತು ಚೀನಾದ 2 ವಿಶ್ವವಿದ್ಯಾಲಯಗಳ ವರದಿಯಿಂದ ಈ ಸಂಗತಿ ಬಹಿರಂಗವಾಗಿದೆ.
ಕೊರೊನಾ ವಿರುದ್ಧದ ಹೋರಾಟ ಎಂದು ಭಾರತವು ಮಾರ್ಚ್ 24 ರಂದು ಮೂರು ವಾರಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿತು. ನಂತರ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 15 ಮತ್ತು ಮೇ 3 ರ ನಡುವೆ 19 ದಿನಗಳವರೆಗೆ ಮತ್ತು ಮೇ 4 ಮತ್ತು ಮೇ 17 ರ ನಡುವೆ 14 ದಿನಗಳವರೆಗೆ ಲಾಕ್‌ಡೌನ್ ವಿಸ್ತರಿಸಿದ್ದಾರೆ. ಇದರಿಂದ ಕೊರೊನಾ ಸೋಂಕು ಕಡಿಮೆಯಾಗದಿದ್ದರು. ದೇಶದಲ್ಲಿನ ವಾಯುಮಾಲಿನ್ಯದ ಮಟ್ಟ ಕುಸಿದಿದೆ.
ಲಾಕ್‌ಡೌನ್‌ನಿಂದ ಆರೋಗ್ಯದ ಆರೋಗ್ಯದ ಮೇಲೆ ಶೇಕಡಾ 52ರಷ್ಟು ಅಪಾಯ ಕಡಿಮೆಯಾಗಿದೆ. ಭಾರತದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ತಲುಪಿರುವ ಕಡಿಮೆ ಮಟ್ಟದ ವಾಯುಮಾಲಿನ್ಯವನ್ನು ಕಾಪಾಡಿಕೊಂಡರೆ ಭಾರತದಲ್ಲಿ ವಾರ್ಷಿಕವಾಗಿ 6.5 ಲಕ್ಷ ಸಾವಿನ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ದಶಕಗಳ ನಂತರ ಇದೇ ಮೊದಲ ಬಾರಿಗೆ ಇಂಡೋ-ನೇಪಾಳ ಗಡಿಗೆ ಹತ್ತಿರದಲ್ಲಿರುವ ಬಿಹಾರಿನ ಹಳ್ಳಿಯಿಂದ ಮೌಂಟ್ ಎವರೆಸ್ಟ್ ಗೋಚರಿಸಿದೆ. ಇದು ಸದ್ಯವಾಗಿದ್ದು, ಕೊರೊನಾ ಲಾಕ್‌ಡೌನ್‌ನಿಂದ.