ಕಾಸರಗೋಡಿನಲ್ಲಿ ಕೊರೊನಾ ಮಾಯವಾಯ್ತು! ಹೇಗೆ ಸಾಧ್ಯವಾಯ್ತು?

ತಿರುವನಂತಪುರ: ಕೊರೊನಾ ಕ್ರಿಮಿಯಿಂದ ದೇವರನಾಡು ಕೇರಳ ಸಹ ತತ್ತರಿಸಿ ಹೋಗಿದೆ. ಆದ್ರೆ ಇದೀಗ ಸಮಾಧಾನಕರ ಸಂಗತಿಯೊಂದು ಬಂದಿದೆ. ಒಂದು ಸಮಯದಲ್ಲಿ ಕೇರಳ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ. 35ರಷ್ಟು ಕೊರೊನಾ ಸೋಂಕಿತರಿದ್ದ ಕಾಸರಗೋಡು ಜಿಲ್ಲೆ ಇದೀಗ ಡೆಡ್ಲಿ ವೈರಸ್​ನಿಂದ ಮುಕ್ತವಾಗಿದೆ. ಭಾನುವಾರ ಕೊನೆಯ ಸೋಂಕಿತನ ವರದಿ ಸಹ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿಲ್ಲ: ಕಾಸರಗೋಡು ಒಂದು ಕಾಲದಲ್ಲಿ ಕೊರೊನಾ ಹಾಟ್​ಸ್ಪಾಟ್ ಕೇಂದ್ರ. 178 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. […]

ಕಾಸರಗೋಡಿನಲ್ಲಿ ಕೊರೊನಾ ಮಾಯವಾಯ್ತು! ಹೇಗೆ ಸಾಧ್ಯವಾಯ್ತು?
Follow us
ಸಾಧು ಶ್ರೀನಾಥ್​
|

Updated on:May 11, 2020 | 12:59 PM

ತಿರುವನಂತಪುರ: ಕೊರೊನಾ ಕ್ರಿಮಿಯಿಂದ ದೇವರನಾಡು ಕೇರಳ ಸಹ ತತ್ತರಿಸಿ ಹೋಗಿದೆ. ಆದ್ರೆ ಇದೀಗ ಸಮಾಧಾನಕರ ಸಂಗತಿಯೊಂದು ಬಂದಿದೆ. ಒಂದು ಸಮಯದಲ್ಲಿ ಕೇರಳ ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಶೇ. 35ರಷ್ಟು ಕೊರೊನಾ ಸೋಂಕಿತರಿದ್ದ ಕಾಸರಗೋಡು ಜಿಲ್ಲೆ ಇದೀಗ ಡೆಡ್ಲಿ ವೈರಸ್​ನಿಂದ ಮುಕ್ತವಾಗಿದೆ. ಭಾನುವಾರ ಕೊನೆಯ ಸೋಂಕಿತನ ವರದಿ ಸಹ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

ಸೋಂಕಿನಿಂದ ಯಾರೊಬ್ಬರೂ ಮೃತಪಟ್ಟಿಲ್ಲ: ಕಾಸರಗೋಡು ಒಂದು ಕಾಲದಲ್ಲಿ ಕೊರೊನಾ ಹಾಟ್​ಸ್ಪಾಟ್ ಕೇಂದ್ರ. 178 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಅವರೆಲ್ಲಾ ಶೇ.100ರಷ್ಟು ಗುಣಮುಖರಾಗಿದ್ದಾರೆ. ಈಗ ಕಾಸರಗೋಡಿನಲ್ಲಿ ಕೊವಿಡ್​ 19 ಸೋಂಕಿತರೇ ಇಲ್ಲ. ಅಲ್ಲದೆ, ಇದುವರೆಗೂ ಸೋಂಕಿನಿಂದ ಯಾರೊಬ್ಬರೂ ಇಲ್ಲಿ ಮೃತಪಟ್ಟಿಲ್ಲ.

ಫೆ.3ರಂದು ಮೊದಲ ಕೇಸ್ ಪತ್ತೆ: ಫೆ.3ರಂದು ಕಾಸರಗೋಡಿನಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಆ ಸೋಂಕಿತ ಕೊರೊನಾ ತವರೂರು ಚೀನಾದ ವೂಹಾನ್​ನಿಂದ ಆಗಮಿಸಿದ್ದ. ತಕ್ಷಣ ಎಚ್ಚೆತ್ತ ಜಿಲ್ಲಾಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು. ಇದರಿಂದ ಸೋಂಕಿತ ಫೆ.16ರಂದು ಸಂಪೂರ್ಣವಾಗಿ ಗುಣಮುಖರಾದ. ನಂತರ ಮಾ.24ರಂದು ಕಾಸರಗೋಡಿನಲ್ಲಿ ಕೇವಲ 6 ಕೇಸ್​ಗಳಿವೆ ಎಂದು ವರದಿ ನೀಡಿತ್ತು. ಆದಾಗ್ಯೂ ಬೇರೆ ಬೇರೆ ಕಡೆಯಿಂದ ಪ್ರವಾಸಿಗರ ಆಗಮನದಿಂದ ಕಾಸರಗೋಡು ಕೇರಳದ ಕೊರೊನಾ ಕೇಂದ್ರಬಿಂದುವಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಜಿಲ್ಲೆಗಳಿಗೆ ಆಗಮಿಸುತ್ತಿದ್ದರು. ಫೆಬ್ರವರಿ 20 ರ ನಂತರ ಜಿಲ್ಲೆಗೆ ಪ್ರವೇಶಿಸಿದವರು ಯಾವುದೇ ಸಾರ್ವಜನಿಕ ಸಮಾರಂಭಗಳಿಗೆ ಹಾಜರಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶಿಸಿದ್ದರು. ಅಲ್ಲದೆ, ದೇಶಾದ್ಯಂತ ನಿರ್ಬಂಧಗಳನ್ನ ವಿಧಿಸುವ ಮೊದಲೇ ಇಲ್ಲಿ ಕಠಿಣ ಲಾಕ್‌ಡೌನ್ ವಿಧಿಸಿದರು.

ಅಗತ್ಯ ವಸ್ತು ಖರೀದಿಗೆ 6 ಗಂಟೆ ಮಾತ್ರ ಅವಕಾಶ: ಕಾಸರಗೋಡು ಜಿಲ್ಲೆಯ ಎಲ್ಲಾ ಹಾಟ್‌ಸ್ಪಾಟ್ ಕೇಂದ್ರಗಳನ್ನು ಸೀಲ್​ಡೌನ್ ಮಾಡಲಾಯಿತು. ಮಾರ್ಚ್ 17 ರಿಂದ ನೆರೆಯ ಜಿಲ್ಲೆಗಳಿಂದ ವಾಹನಗಳ ಪ್ರವೇಶವನ್ನು ಸ್ಥಗಿತಗೊಳಿಸಲಾಯಿತು. ದೇಶಾದ್ಯಂತ ಜನತಾ ಕರ್ಫ್ಯೂಗೂ ಮೊದಲೇ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದರು. ಅಗತ್ಯ ವಸ್ತುಗಳನ್ನು ಖರೀದಿಸಲು ದಿನಕ್ಕೆ ಆರು ಗಂಟೆಗಳ ಕಾಲ ಅಂದ್ರೆ ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಮಾತ್ರ ಅನುಮತಿ ನೀಡಲಾಯಿತು. ಕೊರೊನಾ ವೈರಸ್ ಹರಡುವಿಕೆಯನ್ನ ನಿಯಂತ್ರಿಸಲು ಅಧಿಕಾರಿಗಳಿಗೆ ಇದು ಅನುಕೂಲವಾಯಿತು.

55 ದಿನಗಳವರೆಗೆ ಕ್ವಾರಂಟೈನ್ ಕಡ್ಡಾಯ: ವಿದೇಶದಿಂದ ಬಂದವರನ್ನ ಅಥವಾ ಕೊರೊನಾ ಶಂಕಿತರನ್ನು 14 ರಿಂದ 28ದಿನಗಳವರೆಗೆ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಆದ್ರೆ ಕಾಸರಗೋಡಿನಲ್ಲಿ ಫೆ.20ರ ನಂತರ ಮರಳಿದ ಎಲ್ಲರನ್ನೂ ಏ.14ರವರೆಗೆ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಯಿತು. ಕೆಲವೊಂದು ಸಂದರ್ಭದಲ್ಲಿ 55 ದಿನಗಳವರೆಗೂ ಕಡ್ಡಾಯವಾಗಿ ಕ್ವಾರಂಟೈನ್ ಮಾಡಿದ್ದರು. ಇವರು ಕ್ವಾರಂಟೈನ್​ನಲ್ಲಿ ಇದ್ದಾರಾ ಅಥವಾ ಜನರ ಸಂಪರ್ಕವನ್ನು ಹೊಂದಿದ್ದಾರೆಯೇ ಎಂದು ಅಧಿಕಾರಿಗಳು ಆಗಾಗ ಬಂದು ಪರೀಕ್ಷಿಸುತ್ತಿದ್ದರು.

Published On - 12:27 pm, Mon, 11 May 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ