ಅಸ್ಸಾಂನ ಗುವಾಹಟಿ ಮತ್ತು ತೇಜ್ಪುರ್ಗಳಲ್ಲಿ ಇಂದು ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7ರಷ್ಟು ತೀವ್ರತೆ ದಾಖಲಾಗಿದೆ. ತೇಜ್ಪುರದ ಪಶ್ಚಿಮ-ನೈಋತ್ಯಕ್ಕೆ 35 ಕಿಮೀ ದೂರದಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಬೆಳಗ್ಗೆ ಸುಮಾರು 10.19ರ ಹೊತ್ತಿಗೆ ಭೂಮಿ ನಡುಗಿದ್ದು, ಯಾರದ್ದೂ ಪ್ರಾಣ ಹೋದ ಬಗ್ಗೆ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Earthquake of Magnitude:3.7, Occurred on 04-11-2021, 10:19:08 IST, Lat: 26.59 & Long: 92.44, Depth: 25 Km ,Location: 35km WSW of Tezpur, Assam, India for more information download the BhooKamp App https://t.co/sfm7tUwYNx pic.twitter.com/YLPRFSUBdG
— National Center for Seismology (@NCS_Earthquake) November 4, 2021
ಅಸ್ಸಾಂನಲ್ಲಿ ಕಳೆದ ತಿಂಗಳು ಕೂಡ ಭೂಕಂಪನ ಉಂಟಾಗಿತ್ತು. ಅಕ್ಟೋಬರ್ 3ರಂದು ಕೂಡ ಭೂಮಿ ನಡುಗಿತ್ತು. ಆಗ ರಿಕ್ಟರ್ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿತ್ತು. ಆಗ ಮಧ್ಯಾಹ್ನ 2.40ರ ಹೊತ್ತಿಗೆ ಭೂಕಂಪನ ಉಂಟಾಗಿತ್ತು. ಆಗಲೂ ಕೂಡ ಯಾವುದೇ ಹಾನಿಯಾಗಿರಲಿಲ್ಲ. ಹಾಗೇ, ಕಳೆದ ಎರಡು ದಿನಗಳ ಹಿಂದೆ ಅಂದರೆ ನವೆಂಬರ್ 2ರಂದು ಜಮ್ಮು-ಕಾಶ್ಮೀರದಲ್ಲೂ ಭೂಕಂಪ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿತ್ತು. ಇದನ್ನು ಹೊರತುಪಡಿಸಿದರೆ ಅಕ್ಟೋಬರ್ 24ರಂದು ಲಡಾಖ್ನಲ್ಲಿ 4.2 ರಷ್ಟು ತೀವ್ರತೆಯ ಭೂಕಂಪನ ಉಂಟಾಗಿತ್ತು. ಕಾರ್ಗಿಲ್ ಪ್ರದೇಶದಲ್ಲಿ ಬೆಳಗ್ಗೆ ರಾತ್ರಿ 11.29ರ ಹೊತ್ತಿಗೆ ಭೂಮಿ ನಡುಗಿತ್ತು ಮತ್ತು ಭೂ ಮೇಲ್ಮೈನಿಂದ 140 ಕಿಮೀ ಆಳದಲ್ಲಿ ಭೂಕಂಪ ಉಂಟಾಗಿತ್ತು ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು. ಇತ್ತೀಚೆಗೆ ಹಲವು ಪ್ರದೇಶಗಳಲ್ಲಿ ಸಣ್ಣಮಟ್ಟದ ಭೂಕಂಪನ ಆಗುತ್ತಲೇ ಇದೆ. ಅದೃಷ್ಟವಶಾತ್ ಯಾರಿಗೂ ಜೀವಕ್ಕೆ ಹಾನಿಯಾಗುತ್ತಿಲ್ಲ. ಆಸ್ತಿಪಾಸ್ತಿ ನಾಶ ಉಂಟಾಗಿಲ್ಲ.
ಇದನ್ನೂ ಓದಿ: ಪ್ರತಿಭಟನಾಕಾರರು ಉಂಟು ಮಾಡಿದ ನಾಶನಷ್ಟವನ್ನು ಅವರೇ ಭರಿಸುವಂತೆ ಮಾಡಲು ಮಧ್ಯಪ್ರದೇಶ ಸರ್ಕಾರ ಸಿದ್ಧತೆ