Hotels to hike food price: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್, ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ

ಮುಂದಿನ ವಾರದಿಂದಲೇ ಶೇ.10 ರಿಂದ 15ರಷ್ಟು ಹೆಚ್ಚಳಕ್ಕೆ ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧಾರ ಮಾಡಿದೆ. ಊಟ, ತಿಂಡಿ ಬೆಲೆ ಏರಿಕೆಗೆ ಕಾರಣಗಳೇನು?

Hotels to hike food price: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್, ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ
ದರ ದರನೇ ಏರುತ್ತಿರುವ ಗ್ಯಾಸ್​ ರೇಟ್​; ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 04, 2021 | 1:13 PM

ಬೆಂಗಳೂರು: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್​, ಪೆಟ್ರೋಲ್​- ಡೀಸೆಲ್​ ಬೆಲೆ ಹೆಚ್ಚಳ, ಕೊರೊನಾದಿಂದ ವ್ಯಾಪಾರ ಕುಸಿತದಿಂದ ಕಂಗೆಟ್ಟಿರುವ ಹೋಟೆಲ್ ಮಾಲೀಕರು ಇದರಿಂದ ಹೊರಬರುವ ಪ್ರಯತ್ನದಲ್ಲಿ ಗ್ರಾಹಕನಿಗೆ ಬರೆ ಎಳೆಯಲು​ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕೊರೊನಾ ಲಾಕ್​ಡೌನ್​ ಮುಗಿದ ಮೇಲೆ ಕಾಫಿ-ಟೀ ಬೆಲೆ ಹೆಚ್ಚಳ ಸೇರಿದಂತೆ ಅನೇಕ ವಸ್ತುಗಳ ಬೆಲೆಗಳು ಸದ್ದಿಲ್ಲದೆ ಏರಿವೆ. ಪರಿಸ್ಥಿತಿ ಹೀಗಿರುವಾಗ ಸದ್ಯದಲ್ಲೇ ತಿಂಡಿ ತಿನಿಸುಗಳ ಬೆಲೆಗಳನ್ನು ಹೆಚ್ಚಿಸಲು ಹೋಟೆಲ್ ಮಾಲೀಕರು ಸಜ್ಜಾಗುತ್ತಿದ್ದಾರೆ. ಒಂದೊಮ್ಮೆ ಹೋಟೆಲ್ ಮಾಲೀಕರು ತಮ್ಮ ಆಲೋಚನೆಯಂತೆ ತಿಂಡಿಗಳ ಬೆಲೆ ಹೆಚ್ಚಿಸ್ದದೇ ಆದರೆ ಅದು ಯಾವ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂಬುದರ ಸ್ಥೂಲ ಚಿತ್ರಣ ಇಲ್ಲಿ ನೀಡಲಾಗಿದೆ.

ಮುಂದಿನ ವಾರದಿಂದಲೇ ಶೇ.10 ರಿಂದ 15ರಷ್ಟು ಹೆಚ್ಚಳಕ್ಕೆ ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧಾರ ಮಾಡಿದೆ. ಊಟ, ತಿಂಡಿ ಬೆಲೆ ಏರಿಕೆಗೆ ಕಾರಣಗಳೇನು? ಎಂದು ನೋಡುವುದಾದರೆ ನಿರಂತರವಾಗಿ ಏರಿಕೆಯಾಗ್ತಿರೊ ವಾಣಿಜ್ಯ ಅಡುಗೆ ಅನಿಲ ಬೆಲೆ. ದಿನಸಿ ಸಾಮಾಗ್ರಿಗಳ ಏರಿಕೆಯಿಂದ ಹೋಟೆಲ್ ಮಾಲೀಕರು ಕಂಗಾಲು. ಅಡುಗೆ ಎಣ್ಣೆಯ ಬೆಲೆಯೂ ದುಬಾರಿಯಾಗಿದೆ. 1794 ರೂಪಾಯಿಗೆ ಸಿಗಬೇಕಿದ್ದ 19 ಕೆ.ಜಿ. ತೂಕದ ವಾಣಿಜ್ಯ ಸಿಲೆಂಡರ್ ದರ 2 ಸಾವಿರ ರೂ. ಗಡಿ ‌ದಾಟಿದೆ.

ತೈಲ​, ಗ್ಯಾಸ್, ಅಗತ್ಯ ವಸ್ತುಗಳ​ ದರ ಭಾರಿ ಏರಿಕೆ ಹಿನ್ನೆಲೆ ಎಲ್ಲ ಆಹಾರ ಪದಾರ್ಥಗಳು ಸುಮಾರು 5 ರೂ. ಏರಿಕೆಯಾಗಲಿವೆ. ಹಬ್ಬದ ಬಳಿಕ ಹಂತ ಹಂತವಾಗಿ ಬೆಲೆ ಏರಿಕೆ ಮಾಡುತ್ತೇವೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಟಿವಿ9 ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ತೈಲ ಬೆಲೆ ದರ ಇಳಿಕೆ ಬೆನ್ನಲ್ಲೇ ಗ್ರಾಹಕರಿಗೆ ಹೊಸ ಶಾಕ್: ಯಾವ ಯಾವ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ? ಹಿಂದಿನ ದರ ಹಾಗೂ ಈಗ ಏರಿಕೆಯಾದ್ರೆ ಬೆಲೆ ಎಷ್ಟಿರುತ್ತೆ? ತುಲನಾತ್ಮಕ ಚಿತ್ರಣ ಇಲ್ಲಿದೆ.

Thanks to eruption in gas and other goods rate hoteliers in karnataka decides to increase hotel items prices

ತೈಲ ಬೆಲೆ ದರ ಇಳಿಕೆ ಬೆನ್ನಲ್ಲೇ ಗ್ರಾಹಕರಿಗೆ ಹೊಸ ಶಾಕ್:

ಮಸಾಲೆ ದೋಸೆ 65 ರಿಂದ 75ರೂ.ಗೆ ಏರಿಕೆ – ಇಡ್ಲಿ, ವಡೆ 35 ರಿಂದ 40ರೂ.ಗೆ ಏರಿಕೆ – ಕಾಫೀ, ಟೀ ಬೆಲೆ 15 ರಿಂದ 20 ರೂ.ಗೆ ಏರಿಕೆ – ಚೌಚೌ ಬಾತ್ 60 ರಿಂದ 70ರೂ.ಗೆ ಏರಿಕೆ – ಸೌಥ್ ಇಂಡಿಯನ್ ಊಟ 85 ರಿಂದ 95 ರೂ. ಗೆ ಏರಿಕೆ – ರೈಸ್ ಬಾತ್ 40 ರಿಂದ 50 ರೂ.ಗೆ ಹೆಚ್ಚಳ – ರವಾ ಇಡ್ಲಿ 40 ರಿಂದ 45 ರೂ.ಗೆ ಏರಿಕೆ – ಅಕ್ಕಿ ರೊಟ್ಟಿ 45 ರಿಂದ 50 ರೂ.ಗೆ ಏರಿಕೆ – ಫ್ರೈಡ್ ರೈಸ್ 100 ರಿಂದ 110 ರೂ.ಗೆ ಏರಿಕೆ – ಗೋಬಿ ಮಂಚೂರಿ 100 ರಿಂದ 110 ರೂ.ಗೆ ಏರಿಕೆ – ಪನ್ನೀರ್ ಮಂಚೂರಿ 110 ರಿಂದ 120 ರೂ.ಗೆ ಹೆಚ್ಚಳ – ಒಂದು ಪ್ಲೇಟ್ ಪೂರಿ 65 ರಿಂದ 70 ರೂ.ಗೆ ಏರಿಕೆ

Petrol Diesal Price Down : ತಿನಿಸುಗಳ ಬೆಲೆ ಏರಿಕೆಗೆ ಹೊಟೇಲ್ ಮಾಲೀಕರ ನಿರ್ಧಾರ|Tv9 kannada

(Thanks to eruption in gas and other goods rate hoteliers in karnataka decides to increase hotel items prices)

Published On - 12:31 pm, Thu, 4 November 21