ದೆಹಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು

|

Updated on: Oct 15, 2023 | 4:43 PM

ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾನುವಾರ ಭೂಕಂಪನದ ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು ಆಗಿದೆ. ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್​ನಲ್ಲಿ ಭೂಕಂಪನ ಉಂಟಾಗಿದೆ. 

ದೆಹಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Image Credit source: India.com
Follow us on

ನವದೆಹಲಿ, ಅಕ್ಟೋಬರ್​​ 15: ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾನುವಾರ ಭೂಕಂಪನದ (Earthquake) ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು ಆಗಿದೆ. ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್​ನಲ್ಲಿ ಭೂಕಂಪನ ಉಂಟಾಗಿದ್ದು, ಜನರು ತಮ್ಮ ಬಹುಮಹಡಿ ಕಟ್ಟಡಗಳು ಮತ್ತು ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಭೂಕಂಪನದಿಂದ ಅದೃಷ್ಟವಶಾತ್​ ಯಾವುದೇ ರೀತಿಯ ಪ್ರಾಣಹಾನಿಗಳು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಹರಿಯಾಣದ ಫರಿದಾಬಾದ್ನಲ್ಲಿ ಸಂಜೆ 4.08 ಕ್ಕೆ ಭೂಕಂಪನ ಸಂಭವಿಸಿದೆ.

ಅಕ್ಟೋಬರ್ 3 ರಂದು ನೆರೆಯ ನೇಪಾಳದಲ್ಲಿ 4.6, 6.2, 3.8 ಮತ್ತು 3.1 ತೀವ್ರತೆಯಲ್ಲಿ ನಾಲ್ಕು ಭಾರೀ ಭೂಕಂಪಗಳು ಸಂಭವಿಸಿತ್ತು. ಸುಮಾರು ಎರಡು ವಾರಗಳ ನಂತರ ಇದೀಗ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲವಾದ ಭೂಕಂಪನದ ಅನುಭವವಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್​​

ಭಯದಲ್ಲಿ ಜನರು ಹೊರಗೆ ಓಡಿಹೋಗುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದ್ದವು. ಬಳಿಕ ದೆಹಲಿ ಪೊಲೀಸರು ಭಯಪಡಬೇಡಿ ನಿಮ್ಮ ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬರುವಂತೆ ಮತ್ತು ಲಿಫ್ಟ್ ಬಳಸಬೇಡಿ ಎಂದು ಸಲಹೆ ನೀಡಿದ್ದರು.

ಇದನ್ನೂ ಓದಿ: Afghanistan Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, 4.6 ತೀವ್ರತೆ ದಾಖಲು

ನೇಪಾಳವು ವಿಶ್ವದ ಅತ್ಯಂತ ಸಕ್ರಿಯ ಟೆಕ್ಟೋನಿಕ್ ವಲಯಗಳಲ್ಲಿ ಒಂದಾದ ಕಾರಣ ಆಗಾಗ ಭೂಕಂಪನಕ್ಕೆ ತುತ್ತಾಗುತ್ತದೆ. 2015 ರಲ್ಲಿ, ನೆರೆಯ ದೇಶವು 7.8 ತೀವ್ರತೆಯ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಆ ವೇಳೆ ಸುಮಾರು 9,000 ಜನರು ಸಾವನ್ನಪ್ಪಿದ್ದು, 2,000 ಜನರು ಗಾಯಗೊಂಡಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:28 pm, Sun, 15 October 23