ಅಗ್ನಿವೀರ್ ಅಮೃತ್​ಪಾಲ್​ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಯಮದಂತೆ ಸೇನಾ ಗೌರವ ನೀಡಿಲ್ಲ: ಸೇನೆ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಅಗ್ನಿವೀರ್ ಅಮೃತ್​ಪಾಲ್​ಸಿಂಗ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ನಿಯಮದಂತೆ ಸೇನಾ ಗೌರವ ನೀಡಿಲ್ಲ ಎಂದು ಸೇನೆ ಸ್ಪಷ್ಟೀಕರಣ ನೀಡಿದೆ. ಅಂತ್ಯಕ್ರಿಯೆಯ ಸಮಯದಲ್ಲಿ ಸೈನ್ಯವು ಸೇನಾ ಗೌರವ ನೀಡಲಿಲ್ಲ.  ಇದೀಗ ಈ ಬಗ್ಗೆ ರಾಜಕೀಯ ಗದ್ದಲ ಎದ್ದಿದೆ. ವಾಸ್ತವವಾಗಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಈ ವಿಷಯದಲ್ಲಿ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಯೋಧನ ಮೃತದೇಹವನ್ನು ತರುವಾಗ ಸೇನಾ ತುಕಡಿ ಅವರ ಬಳಿ ಇರಲಿಲ್ಲ ಎಂದರು.

ಅಗ್ನಿವೀರ್ ಅಮೃತ್​ಪಾಲ್​ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಯಮದಂತೆ ಸೇನಾ ಗೌರವ ನೀಡಿಲ್ಲ: ಸೇನೆ
ಅಮೃತ್​ಪಾಲ್Image Credit source: India Today
Follow us
ನಯನಾ ರಾಜೀವ್
|

Updated on: Oct 16, 2023 | 8:56 AM

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಅಗ್ನಿವೀರ್ ಅಮೃತ್​ಪಾಲ್​ಸಿಂಗ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ನಿಯಮದಂತೆ ಸೇನಾ ಗೌರವ ನೀಡಿಲ್ಲ ಎಂದು ಸೇನೆ ಸ್ಪಷ್ಟೀಕರಣ ನೀಡಿದೆ. ಅಂತ್ಯಕ್ರಿಯೆಯ ಸಮಯದಲ್ಲಿ ಸೈನ್ಯವು ಸೇನಾ ಗೌರವ ನೀಡಲಿಲ್ಲ.  ಇದೀಗ ಈ ಬಗ್ಗೆ ರಾಜಕೀಯ ಗದ್ದಲ ಎದ್ದಿದೆ. ವಾಸ್ತವವಾಗಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಈ ವಿಷಯದಲ್ಲಿ ಬಿಜೆಪಿಯನ್ನು ಗುರಿಯಾಗಿಸಿದ್ದಾರೆ. ಯೋಧನ ಮೃತದೇಹವನ್ನು ತರುವಾಗ ಸೇನಾ ತುಕಡಿ ಅವರ ಬಳಿ ಇರಲಿಲ್ಲ ಎಂದರು.

ಅವರ ಪಾರ್ಥಿವ ಶರೀರವನ್ನು ಪಂಜಾಬ್‌ನ ಅಮೃತಪಾಲ್ ಗ್ರಾಮಕ್ಕೆ ತಂದಾಗ, ಅವರಿಗೆ ಮಿಲಿಟರಿ ಗೌರವವನ್ನು ನೀಡಲಿಲ್ಲ. ಇಷ್ಟೇ ಅಲ್ಲ, ಅಗ್ನಿವೀರ್ ಯೋಜನೆಯಿಂದಾಗಿ ಅವರಿಗೆ ಯಾವುದೇ ಪಿಂಚಣಿ ನೀಡಲಾಗುವುದಿಲ್ಲ ಅಥವಾ ಯಾವುದೇ ಹುತಾತ್ಮ ಸ್ಥಾನಮಾನವನ್ನು ನೀಡುವುದಿಲ್ಲ.

ಈ ಹಿಂದೆ ಶಿರೋಮಣಿ ಅಕಾಲಿದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರ್ ಅಮೃತಪಾಲ್ ಸಿಂಗ್ ಅವರನ್ನು ಸೇನೆಯ ಗೌರವವಿಲ್ಲದೆ ಅಂತ್ಯಕ್ರಿಯೆ ಮಾಡಲಾಯಿತು ಎಂಬುದನ್ನು ತಿಳಿದು ನನಗೆ ಆಘಾತವಾಗಿದೆ. ಅವರ ಕುಟುಂಬದ ಪರವಾಗಿ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಸಹ ಅವರ ಪಾರ್ಥಿವ ಶರೀರವನ್ನು ಮಾನ್ಸಾದಲ್ಲಿರುವ ಅವರ ಸ್ಥಳೀಯ ಗ್ರಾಮಕ್ಕೆ ತರಲಾಯಿತು.

ಅಮೃತಪಾಲ್ ಅಗ್ನಿವೀರ್ ಆಗಿದ್ದರಿಂದ ಹೀಗಾಯಿತು ಎಂದರು. ನಮ್ಮ ಎಲ್ಲಾ ಸೈನಿಕರಿಗೆ ನಾವು ಗೌರವವನ್ನು ನೀಡಬೇಕು. ಎಲ್ಲಾ ಹುತಾತ್ಮ ಯೋಧರಿಗೆ ಸೇನಾ ಗೌರವ ಸಲ್ಲಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೂಚನೆಗಳನ್ನು ನೀಡುವಂತೆ ಮನವಿ ಮಾಡಲಾಗಿದೆ.

ಮತ್ತಷ್ಟು ಓದಿ: Punjab: ಬಟಿಂಡಾದಲ್ಲಿ ಮತ್ತೊಬ್ಬ ಸೈನಿಕ ಸಾವು

ಅಗ್ನಿಪಥ್ ಯೋಜನೆಯ ಅನುಷ್ಠಾನದ ಮೊದಲು ಅಥವಾ ನಂತರ ಸೈನ್ಯಕ್ಕೆ ಸೇರಿದ್ದಾರೆಯೇ ಎಂಬುದರ ಆಧಾರದ ಮೇಲೆ ಸೈನಿಕರ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಸೇನೆಯು ಪ್ರತಿಪಾದಿಸಿದೆ.

ಅಗ್ನಿವೀರ್ ಅಮೃತಪಾಲ್ ಸಿಂಗ್ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಕ್ಕೆ ಮತ್ತು ಭಾರತೀಯ ಸೇನೆಗೆ ತೀವ್ರ ನಷ್ಟವಾಗಿದೆ ಎಂದು ಸೇನೆ ಹೇಳಿದೆ.

ಅಂತ್ಯಕ್ರಿಯೆ ನಡೆಸಲು ತಕ್ಷಣದ ಆರ್ಥಿಕ ಪರಿಹಾರ ಸೇರಿದಂತೆ ಅರ್ಹತೆಗೆ ಅನುಗುಣವಾಗಿ ಹಣಕಾಸಿನ ನೆರವು ಮತ್ತು ಪರಿಹಾರ ವಿತರಣೆಗೆ ಆದ್ಯತೆ ನೀಡಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ