Punjab: ಬಟಿಂಡಾದಲ್ಲಿ ಮತ್ತೊಬ್ಬ ಸೈನಿಕ ಸಾವು

ಬಟಿಂಡಾದಲ್ಲಿ ಮತ್ತೊಬ್ಬ ಸೈನಿಕ ಸಾವುನ್ನಪ್ಪಿರುವ ಘಟನೆ ಇಂದು ನಡೆದಿದೆ. ಯೋಧನೊಬ್ಬ ಗುಂಡೇಟಿನ ಗಾಯದಿಂದ ಸಾವನ್ನಪ್ಪಿದ್ದಾನೆ ಎಂದು ಸೇನೆ ತಿಳಿಸಿದೆ.

Punjab: ಬಟಿಂಡಾದಲ್ಲಿ ಮತ್ತೊಬ್ಬ ಸೈನಿಕ ಸಾವು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 13, 2023 | 11:34 AM

ಪಂಜಾಬ್: ಬಟಿಂಡಾದಲ್ಲಿ ಮತ್ತೊಬ್ಬ ಸೈನಿಕ ಸಾವುನ್ನಪ್ಪಿರುವ ಘಟನೆ ಇಂದು ನಡೆದಿದೆ. ಯೋಧನೊಬ್ಬ ಗುಂಡೇಟಿನ ಗಾಯದಿಂದ ಸಾವನ್ನಪ್ಪಿದ್ದಾನೆ ಎಂದು ಸೇನೆ ತಿಳಿಸಿದೆ. ನಿನ್ನೆ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಸಾವಿಗೆ ಕಾರಣವಾದ ಗುಂಡಿನ ದಾಳಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸೇನೆ ತಿಳಿಸಿದೆ. 20ರ ಹರೆಯದ ಯೋಧ ಆತ್ಮಹತ್ಯೆ ಮಾಡಿಕೊಂಡಿರುವಂತೆ ತೋರುತ್ತಿದೆ ಎಂದು ಹೇಳಲಾಗಿದೆ. ಅವರು ಬಟಿಂಡಾ ಮಿಲಿಟರಿ ನಿಲ್ದಾಣದಲ್ಲಿ ನೆಲೆಸಿರುವ ಸೇನೆಯ ಯೋಧರಾಗಿದ್ದರು. ಭಟಿಂಡಾ ಮಿಲಿಟರಿ ನಿಲ್ದಾಣದಲ್ಲಿ 12 ಏಪ್ರಿಲ್ 2023 ರಂದು ಸುಮಾರು 4:30 ಸಂಜೆ ಒಬ್ಬ ಯೋಧ ಗುಂಡಿನ ಗಾಯದಿಂದ ಸಾವನ್ನಪ್ಪಿದ್ದಾರೆ. ಈ ಯೋಧ ತನ್ನ ಸೇವಾ ಶಸ್ತ್ರಾಸ್ತ್ರದೊಂದಿಗೆ ಸೆಂಟ್ರಿ ಡ್ಯೂಟಿಯಲ್ಲಿದ್ದರು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಯೋಧ ಶಸ್ತ್ರಾಸ್ತ್ರ ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ತಕ್ಷಣವೇ ಆತನನ್ನು ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಗಾಯದ ನೋವಿನಿಂದ ಮರಣಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಸೈನಿಕ 11 ಏಪ್ರಿಲ್ ರಜೆ ಮುಗಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಂತಿದೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೂ ನಿನ್ನೆ ನಡೆದ ಬಟಿಂಡಾ ಮಿಲಿಟರಿ ಠಾಣೆಯ ಮೇಲೆ ನಡೆದ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ಸೇನಾ ಠಾಣೆಯಲ್ಲಿ ಸಾವನ್ನಪ್ಪಿದ ಐದನೇ ಸಿಬ್ಬಂದಿ ಯೋಧ. ಬುಧವಾರ ಬೆಳಗ್ಗೆ ಸೇನಾ ಠಾಣೆಯೊಳಗೆ ನಡೆದ ಗುಂಡಿನ ದಾಳಿಯಲ್ಲಿ ಫಿರಂಗಿ ಘಟಕದ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಘಟನೆ ನಡೆದಾಗ 20ರ ಮಧ್ಯ ವಯಸ್ಸಿನ ಸೈನಿಕರು ನಿದ್ರೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: Punjab: ಪಂಜಾಬ್​​ನ ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ, ನಾಲ್ಕು ಸಾವು

ಈ ಮೊದಲ ಘಟನೆಗೆ ಸಂಬಂಧಿಸಿದಂತೆ ಸೇನೆಯು ದಾಖಲಿಸಿದ ಎಫ್‌ಐಆರ್‌ನಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ದಾಳಿಯ ಸ್ಥಳದ ಬಳಿ ಕುರ್ತಾ ಪೈಜಾಮ ಧರಿಸಿದ್ದ ಅಪರಿಚಿತ ವ್ಯಕ್ತಿಗಳನ್ನು ಗುರುತಿಸಿದ್ದಾರೆ ಎಂದು ಹೇಳಲಾಗಿದೆ. ಪತ್ತೆಯಾದ ವ್ಯಕ್ತಿಗಳಲ್ಲಿ ಒಬ್ಬರು INSAS ರೈಫಲ್ ಹೊಂದಿದ್ದರೆ, ಇನ್ನೊಬ್ಬರ ಕೈಯಲ್ಲಿ ಕೊಡಲಿ ಇತ್ತು ಎಂದು ಹೇಳಿದ್ದಾರೆ. ಈ ಮೊದಲ ಘಟನೆ ನಡೆದು 24 ಗಂಟೆಗಳು ಕಳೆದರೂ ದಾಳಿಕೋರರನ್ನು ಇನ್ನೂ ಬಂಧಿಸಲಾಗಿಲ್ಲ.

Published On - 9:58 am, Thu, 13 April 23