ಉತ್ತರಾಖಂಡದ ಪಿಥೋರಗಢ್​​ದಲ್ಲಿ 4.0 ತೀವ್ರತೆಯ ಭೂಕಂಪ

ಉತ್ತರಾಖಂಡದ ಪಿಥೋರಗಢ್ ಬಳಿ ಇಂದು (ಅ.16) 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಿಥೋರಘರ್‌ನಿಂದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ.

ಉತ್ತರಾಖಂಡದ ಪಿಥೋರಗಢ್​​ದಲ್ಲಿ 4.0 ತೀವ್ರತೆಯ ಭೂಕಂಪ
ಪ್ರಾತಿನಿಧಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Oct 16, 2023 | 10:35 AM

ಪಿಥೋರಗಢ್: ಉತ್ತರಾಖಂಡದ ಪಿಥೋರಗಢ್ ಬಳಿ ಇಂದು (ಅ.16) 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ಪಿಥೋರಘರ್‌ನಿಂದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ. 5 ಕಿ.ಮೀ ಆಳದಲ್ಲಿ ಪಿಥೋರಗಢದಲ್ಲಿ ಭೂಕಂಪ ಸಂಭವಿಸಿದೆ. ಇನ್ನು ಭೂಕಂಪನ ರಾಷ್ಟ್ರೀಯ ಕೇಂದ್ರವು ಭೂಕಂಪ ತೀವ್ರತೆ ಬಗ್ಗೆ ತಿಳಿಸಿದೆ. 16-10-2023 ರಂದು 4.0 ತೀವ್ರತೆ ಇತ್ತು. 09:11:40 IST, ಲ್ಯಾಟ್: 29.86 & ಉದ್ದ: 80.61, ಆಳ: 5 ಕಿಮೀ, ಸ್ಥಳ: 48 ಕಿಮೀ NE ಆಫ್ ಪಿಥೋರಗಢ್, ಉತ್ತರಾಖಂಡ್ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್​​ (ಈ ಹಿಂದಿನ ಟ್ವಿಟರ್​​) ಪೋಸ್ಟ್​ ಮಾಡಿದ್ದಾರೆ.

ನೆನ್ನೆ (ಅ.15) ಹರಿಯಾಣದಲ್ಲಿ ಮತ್ತು ದೆಹಲಿಯಲ್ಲೂ ಪ್ರಬಲವಾದ ಕಂಪನ ಉಂಟಾಗಿದೆ. ಸಂಜೆ 4.8ಕ್ಕೆ 3.1ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್​​ಸಿಎಸ್ ಹೇಳಿದೆ. ಅ.4ರಂದು ನೇಪಾಳದಲ್ಲೂ 6.2 ತೀವ್ರತೆ ಭೂಕಂಪ ಉಂಟಾಗಿದೆ. ಇದರ ಪರಿಣಾಮವಾಗಿ ದೆಹಲಿ, ಬಿಹಾರ, ಉತ್ತರಪ್ರದೇಶಗಳಲ್ಲಿಯೂ ಮಧ್ಯಾಹ್ನ 3.00ಕ್ಕೆ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ: ದೆಹಲಿ-ಎನ್​ಸಿಆರ್​ನಲ್ಲಿ ಭೂಕಂಪ

ಭೂಕಂಪನ ರಾಷ್ಟ್ರೀಯ ಕೇಂದ್ರದ ಟ್ವೀಟ್​​​

ಈ ಸಮಯದಲ್ಲಿ ಎತ್ತರ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು ಒಂದು ಬಾರಿ ಗಾಬರಿಗೊಂಡು ಕೆಳಕ್ಕೆ ಬಂದಿದ್ದಾರೆ.

Published On - 10:33 am, Mon, 16 October 23