ದೆಹಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು
ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾನುವಾರ ಭೂಕಂಪನದ ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು ಆಗಿದೆ. ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್ನಲ್ಲಿ ಭೂಕಂಪನ ಉಂಟಾಗಿದೆ.
ನವದೆಹಲಿ, ಅಕ್ಟೋಬರ್ 15: ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭಾನುವಾರ ಭೂಕಂಪನದ (Earthquake) ಅನುಭವ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲು ಆಗಿದೆ. ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಗಾಜಿಯಾಬಾದ್ನಲ್ಲಿ ಭೂಕಂಪನ ಉಂಟಾಗಿದ್ದು, ಜನರು ತಮ್ಮ ಬಹುಮಹಡಿ ಕಟ್ಟಡಗಳು ಮತ್ತು ಕಚೇರಿಗಳಿಂದ ಹೊರ ಓಡಿ ಬಂದಿದ್ದಾರೆ. ಭೂಕಂಪನದಿಂದ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿಗಳು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಹರಿಯಾಣದ ಫರಿದಾಬಾದ್ನಲ್ಲಿ ಸಂಜೆ 4.08 ಕ್ಕೆ ಭೂಕಂಪನ ಸಂಭವಿಸಿದೆ.
ಅಕ್ಟೋಬರ್ 3 ರಂದು ನೆರೆಯ ನೇಪಾಳದಲ್ಲಿ 4.6, 6.2, 3.8 ಮತ್ತು 3.1 ತೀವ್ರತೆಯಲ್ಲಿ ನಾಲ್ಕು ಭಾರೀ ಭೂಕಂಪಗಳು ಸಂಭವಿಸಿತ್ತು. ಸುಮಾರು ಎರಡು ವಾರಗಳ ನಂತರ ಇದೀಗ ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲವಾದ ಭೂಕಂಪನದ ಅನುಭವವಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್
Earthquake of Magnitude:3.1, Occurred on 15-10-2023, 16:08:16 IST, Lat: 28.41 & Long: 77.41, Depth: 10 Km ,Location: 9km E of Faridabad, Haryana, India for more information Download the BhooKamp App https://t.co/bTcjyWm0IA @KirenRijiju @Dr_Mishra1966 @moesgoi @Ravi_MoES pic.twitter.com/gG5B4j3oBs
— National Center for Seismology (@NCS_Earthquake) October 15, 2023
ಭಯದಲ್ಲಿ ಜನರು ಹೊರಗೆ ಓಡಿಹೋಗುತ್ತಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಬಳಿಕ ದೆಹಲಿ ಪೊಲೀಸರು ಭಯಪಡಬೇಡಿ ನಿಮ್ಮ ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಕ್ಕೆ ಬರುವಂತೆ ಮತ್ತು ಲಿಫ್ಟ್ ಬಳಸಬೇಡಿ ಎಂದು ಸಲಹೆ ನೀಡಿದ್ದರು.
ಇದನ್ನೂ ಓದಿ: Afghanistan Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, 4.6 ತೀವ್ರತೆ ದಾಖಲು
ನೇಪಾಳವು ವಿಶ್ವದ ಅತ್ಯಂತ ಸಕ್ರಿಯ ಟೆಕ್ಟೋನಿಕ್ ವಲಯಗಳಲ್ಲಿ ಒಂದಾದ ಕಾರಣ ಆಗಾಗ ಭೂಕಂಪನಕ್ಕೆ ತುತ್ತಾಗುತ್ತದೆ. 2015 ರಲ್ಲಿ, ನೆರೆಯ ದೇಶವು 7.8 ತೀವ್ರತೆಯ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಆ ವೇಳೆ ಸುಮಾರು 9,000 ಜನರು ಸಾವನ್ನಪ್ಪಿದ್ದು, 2,000 ಜನರು ಗಾಯಗೊಂಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:28 pm, Sun, 15 October 23