Kargil Earthquake: ಲಡಾಖ್​ನ ಕಾರ್ಗಿಲ್​ನಲ್ಲಿ ಇಂದು ಬೆಳಗ್ಗೆ 4.3 ತೀವ್ರತೆಯ ಭೂಕಂಪ

| Updated By: ಸುಷ್ಮಾ ಚಕ್ರೆ

Updated on: Nov 22, 2022 | 1:51 PM

ಲಡಾಖ್​​ನ ಕಾರ್ಗಿಲ್ ನಗರದಲ್ಲಿ ಇಂದು ಭೂಕಂಪನ ವರದಿಯಾಗುತ್ತಿದ್ದಂತೆ ಭಾರತದಲ್ಲಿ ಭೂಕಂಪಗಳ ಅಲೆ ಮುಂದುವರೆದಿದೆ. ಭೂಕಂಪದ ತೀವ್ರತೆ 4.3ರಷ್ಟಿದ್ದು, ಕಾರ್ಗಿಲ್​ನಲ್ಲಿ ಭೂ ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ.

Kargil Earthquake: ಲಡಾಖ್​ನ ಕಾರ್ಗಿಲ್​ನಲ್ಲಿ ಇಂದು ಬೆಳಗ್ಗೆ 4.3 ತೀವ್ರತೆಯ ಭೂಕಂಪ
ಭೂಕಂಪ
Follow us on

ಲೇಹ್: ಲಡಾಖ್‌ನ ಕಾರ್ಗಿಲ್‌ (Kargil) ಬಳಿ ಇಂದು (ಮಂಗಳವಾರ) ಬೆಳಗ್ಗೆ 10.05ಕ್ಕೆ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಆದರೆ, ಈ ಭೂಕಂಪದಿಂದ ಯಾವುದೇ ಹಾನಿಗಳು ಸಂಭವಿಸಿಲ್ಲ ಎನ್ನಲಾಗಿದೆ.

ಲಡಾಖ್​​ನ ಕಾರ್ಗಿಲ್ ನಗರದಲ್ಲಿ ಇಂದು ಭೂಕಂಪನ ವರದಿಯಾಗುತ್ತಿದ್ದಂತೆ ಭಾರತದಲ್ಲಿ ಭೂಕಂಪಗಳ ಅಲೆ ಮುಂದುವರೆದಿದೆ. ಭೂಕಂಪದ ತೀವ್ರತೆ 4.3ರಷ್ಟಿದ್ದು, ಕಾರ್ಗಿಲ್​ನಲ್ಲಿ ಭೂ ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪನದ ರಾಷ್ಟ್ರೀಯ ಕೇಂದ್ರವು ಲಡಾಖ್‌ನಲ್ಲಿ ಭೂಕಂಪನದ ಬಗ್ಗೆ ಎಚ್ಚರಿಕೆಯನ್ನು ಕಳುಹಿಸಿದೆ. ಭೂಕಂಪನ ಇಲಾಖೆಯ ಪ್ರಕಾರ, ಇಂದು ಬೆಳಿಗ್ಗೆ 10.05ರ ಸುಮಾರಿಗೆ ಭೂಕಂಪನ ವರದಿಯಾಗಿದೆ.

ಇದನ್ನೂ ಓದಿ: Solomon Islands Tsunami: ಸೊಲೊಮನ್ ದ್ವೀಪಗಳಲ್ಲಿ 7.3ರ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಘೋಷಣೆ

ಇಂದು ಮಧ್ಯಾಹ್ನ ಸೊಲೊಮನ್ ದ್ವೀಪಗಳಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಈ ಭೂಕಂಪದಿಂದ ಕಿಟಕಿ, ಟೇಬಲ್‌ಗಳು ಜಖಂ ಆಗಿದ್ದವು. ಇದರಿಂದಾಗಿ ಜನರು ಎತ್ತರದ ಸುರಕ್ಷಿತ ಪ್ರದೇಶಕ್ಕೆ ಓಡಿದರು. ಆದರೆ, ಇದರಿಂದ ವ್ಯಾಪಕ ಹಾನಿ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಈ ತಿಂಗಳ ಆರಂಭದಲ್ಲಿ ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಭಾರತದ ಇತರ ಉತ್ತರದ ರಾಜ್ಯಗಳು ನೆರೆಯ ರಾಷ್ಟ್ರ ನೇಪಾಳದಿಂದ ಉಂಟಾದ ಪ್ರಬಲ ಭೂಕಂಪಗಳಿಂದ ತತ್ತರಿಸಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Tue, 22 November 22