
ಅಮೃತಸರ (ನವೆಂಬರ್ 8): ಪಂಜಾಬ್ನಲ್ಲಿ ಮಂಗಳವಾರ ತಡರಾತ್ರಿ ಮತ್ತೆ ಭೂಮಿ ಕಂಪಿಸಿದೆ. ಮೊದಲು ತಡರಾತ್ರಿ ಪಂಜಾಬ್ನ ರೂಪ್ನಗರ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದ್ದು, 3.2ರಷ್ಟು ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ (National Center for Seismology) ಪ್ರಕಾರ, ಭೂಕಂಪದ ಕೇಂದ್ರಬಿಂದು ನೆಲದಿಂದ 10 ಕಿಮೀ ಕಿ.ಮೀ ಆಳದಲ್ಲಿದೆ.