ಕೊರೊನಾ ಕಂಟಕದ ಮಧ್ಯೆ ರಾಜಧಾನಿ ದೆಹಲಿಯಲ್ಲಿ ಭೂಕಂಪ!

|

Updated on: May 10, 2020 | 2:55 PM

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪವಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ದೆಹಲಿಯ ಉತ್ತರ ಭಾಗ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಕಂಪನಕ್ಕೆ‌ ಭಯದಿಂದ‌ ಮನೆಯೊಳಗಿದ್ದ ಜನ ಹೊರಕ್ಕೆ ಓಡಿ‌ ಬಂದಿದ್ದಾರೆ. ಇದೇ ವೇಳೆ‌ ದೆಹಲಿ‌, ಉತ್ತರ ಭಾಗದಲ್ಲಿ ‌ಭಾರಿ ಬಿರುಗಾಳಿ ಬೀಸಿದ ಅನುಭವ ಕೂಡ ಆಗಿದೆ. ಭೂಕಂಪ ಪ್ರಮಾಣ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿಯ ಉತ್ತರಕ್ಕೆ 9 ಕಿ.ಮೀ ದೂರ ಹಾಗೂ 5 ಕಿ.ಮೀ ಆಳಕ್ಕೆ ಕಂಪನದ ತೀವ್ರತೆ […]

ಕೊರೊನಾ ಕಂಟಕದ ಮಧ್ಯೆ ರಾಜಧಾನಿ ದೆಹಲಿಯಲ್ಲಿ ಭೂಕಂಪ!
Follow us on

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಘು ಭೂಕಂಪವಾಗಿದೆ. ಮಧ್ಯಾಹ್ನ 1.45ರ ಸುಮಾರಿಗೆ ದೆಹಲಿಯ ಉತ್ತರ ಭಾಗ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಕಂಪನಕ್ಕೆ‌ ಭಯದಿಂದ‌ ಮನೆಯೊಳಗಿದ್ದ ಜನ ಹೊರಕ್ಕೆ ಓಡಿ‌ ಬಂದಿದ್ದಾರೆ.

ಇದೇ ವೇಳೆ‌ ದೆಹಲಿ‌, ಉತ್ತರ ಭಾಗದಲ್ಲಿ ‌ಭಾರಿ ಬಿರುಗಾಳಿ ಬೀಸಿದ ಅನುಭವ ಕೂಡ ಆಗಿದೆ. ಭೂಕಂಪ ಪ್ರಮಾಣ ರಿಕ್ಟರ್ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ದೆಹಲಿಯ ಉತ್ತರಕ್ಕೆ 9 ಕಿ.ಮೀ ದೂರ ಹಾಗೂ 5 ಕಿ.ಮೀ ಆಳಕ್ಕೆ ಕಂಪನದ ತೀವ್ರತೆ ಇತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಕಳೆದ ಎರಡು ತಿಂಗಳಲ್ಲಿ ಇದು ಮೂರನೆ ಬಾರಿ ರಾಷ್ಟ್ರ ರಾಜಧಾನಿ ಮತ್ತು ನೆರೆಯ ಪ್ರದೇಶಗಳಲ್ಲಿ ಭೂಕಂಪನ ಸಂಭವಿಸಿದೆ.

Published On - 2:36 pm, Sun, 10 May 20