ಅಸ್ಸಾಂನಲ್ಲಿ 6.4 ತೀವ್ರತೆಯ ಭಾರೀ ಭೂಕಂಪನ, ಹಲವು ಕಟ್ಟಡಗಳು ಬಿರುಕು

|

Updated on: Apr 28, 2021 | 11:41 AM

ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪನವು ಸಂಭವಿಸಿದೆ. ಅಸ್ಸಾಂನ ಸೋನಿತ್ಪುರ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಕಂಪನದ ಅನುಭವ ಆಗುತ್ತಿದ್ದಂತೆ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಅಸ್ಸಾಂನಲ್ಲಿ 6.4 ತೀವ್ರತೆಯ ಭಾರೀ ಭೂಕಂಪನ, ಹಲವು ಕಟ್ಟಡಗಳು ಬಿರುಕು
ಭಾರೀ ಭೂಕಂಪನ ಹಲವು ಕಟ್ಟಡಗಳು ಬಿರುಕು
Follow us on

ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪನವು ಬುಧವಾರ ಬೆಳಿಗ್ಗೆ ಅಸ್ಸಾಂನ ಸೋನಿತ್ಪುರದಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಇಂದು ಬೆಳಗ್ಗೆ 7ಗಂಟೆ 55 ನಿಮಿಷಕ್ಕೆ ಅಸ್ಸಾಂನ ಗುವಾಹಟಿ ಸೇರಿದಂತೆ ಈಶಾನ್ಯ ಭಾಗದಲ್ಲಿ ಭೂಕಂಪನವಾಗಿದೆ.

ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆಯ ಭೂಕಂಪನವು ಸಂಭವಿಸಿದೆ. ಅಸ್ಸಾಂನ ಸೋನಿತ್ಪುರ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಕಂಪನದ ಅನುಭವ ಆಗುತ್ತಿದ್ದಂತೆ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ವರದಿಯಾಗಿದೆ.

“ಅಸ್ಸಾಂನಲ್ಲಿ ಭಾರೀ ಭೂಕಂಪನದ ಅನುಭವವಾಗಿದೆ. ವಿವರಗಳಿಗಾಗಿ ಕಾಯುತ್ತಿದ್ದೇನೆ ಎಂದು ಅಸ್ಸಾಂನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ಭೂಕಂಪನದ ಅನುಭವವಾದ ಕೂಡಲೇ ಟ್ವೀಟ್ ಮಾಡಿದ್ದಾರೆ.

ಘಟನೆ ಬಳಿಕ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನಾಗರಿಕರನ್ನು ಜಾಗರೂಕರಾಗಿರಲು ತಿಳಿಸಿದ್ದಾರೆ. “ದೊಡ್ಡ ಭೂಕಂಪನವು ಅಸ್ಸಾಂಗೆ ಅಪ್ಪಳಿಸಿದೆ. ಎಲ್ಲರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಮತ್ತು ಎಲ್ಲರೂ ಜಾಗರೂಕರಾಗಿರಲು ನಾನು ವಿನಂತಿಸುತ್ತೇನೆ ” ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈಶಾನ್ಯ ರಾಜ್ಯದಲ್ಲಿ ಆದ ಭೂಕಂಪನ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಲ್ಲಿ ಭೂಕಂಪದ ತೀವ್ರತೆ ಕಂಡುಬಂದಿದ್ದು. ಇದರಿಂದ ರಸ್ತೆಗಳು ಬಿರುಕು ಬಿಟ್ಟಿರುವುದನ್ನು ಕಾಣಬಹುದು. ವೀವಿಡಿಯೋವೊಂದರಲ್ಲಿ, ನೋಗಾನ್‌ನಲ್ಲಿ, ಸೋನಿತ್‌ಪುರಕ್ಕೆ ಸಮೀಪವಿರುವ ಒಂದು ಕಟ್ಟಡವು ಭೂಕಂಪನದ ತೀವ್ರತೆಗೆ ಅದರ ಪಕ್ಕದ ಕಟ್ಟಡದತ್ತ ವಾಲುತ್ತಿದೆ.

ಇದನ್ನೂ ಓದಿ: Earthquake: ದೆಹಲಿ, NCR ಸುತ್ತಮುತ್ತ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲು

Published On - 8:47 am, Wed, 28 April 21