4.3 ತೀವ್ರತೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕಂಪಿಸಿದ ಭೂಮಿ

|

Updated on: Jun 14, 2023 | 7:04 AM

ಜಮ್ಮು ಮತ್ತ ಕಾಶ್ಮೀರದಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವಾಗಿದೆ. ಕಟ್ರಾ ಪ್ರದೇಶದಲ್ಲಿ ಮಧ್ಯರಾತ್ರಿ 2.20ಕ್ಕೆ ಭೂಮಿ ಕಂಪಿಸಿದೆ.

4.3 ತೀವ್ರತೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕಂಪಿಸಿದ ಭೂಮಿ
ಭೂಕಂಪನ
Follow us on

ಶ್ರೀನಗರ: ಜಮ್ಮು ಮತ್ತ ಕಾಶ್ಮೀರದಲ್ಲಿ (Jammu and Kashmir) ಮತ್ತೆ ಭೂಮಿ ಕಂಪಿಸಿದ (Earthquake) ಅನುಭವಾಗಿದೆ. ಕಟ್ರಾ ಪ್ರದೇಶದಲ್ಲಿ ಮಧ್ಯರಾತ್ರಿ 2.20ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್​​ ಮಾಪಕದಲ್ಲಿ ಕಂಪನದ ತೀವ್ರತೆ 4.3 ದಾಖಲಾಗಿದೆ. ಕಟ್ರಾ ಪ್ರದೇಶದಿಂದ 81 ಕಿ.ಮೀ. ದೂರದಲ್ಲಿ ಭೂಕಂಪನವಾಗಿದೆ. ಮಂಗಳವಾರ (ಜೂ.13) ಮಧ್ಯಾಹ್ನ ಕೂಡ ಭೂಮಿ ಕಂಪಿಸಿತ್ತು.  ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ 5.4 ತೀವ್ರತೆಯ ಭೂಕಂಪನವಾಗಿತ್ತು. ಇದರಲ್ಲಿ  ನಾಲ್ವರು ಗಾಯಗೊಂಡಿದ್ದರು. ಮತ್ತು ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ಹಲವಾರು ಕಟ್ಟಡಗಳು ಬಿರುಕು ಬಿಟ್ಟಿವೆ.

ಹವಾಮಾನ ಇಲಾಖೆಯ ಶ್ರೀನಗರ ಪ್ರತಿನಿಧಿಗಳ ಪ್ರಕಾರ, ಭೂಕಂಪವು ಮಧ್ಯಾಹ್ನ 1.33 ಕ್ಕೆ ಭೂಮಿಯ 21 ಕಿಮೀ ಆಳದಲ್ಲಿ ಸಂಭವಿಸಿದೆ. ಅಲ್ಲದೇ ದೆಹಲಿಯ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಲಘು ಕಂಪನವಾಗಿರುವುದು ವರದಿಯಾಗಿದೆ.

ಶ್ರೀನಗರದ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿ, ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದರು. ಅಂಗಡಿಗಳಲ್ಲಿದ್ದ ಜನರು ಹೊರಗೆ ಧಾವಿಸಿದರು. ಇದು ಭಯಭೀತವಾಗಿತ್ತು. ಇದು ಕಳೆದ ವಾರದ ಕಂಪನಗಳಿಗಿಂತ ಹೆಚ್ಚು ತೀವ್ರವಾಗಿತ್ತು’ ಎಂದಿದ್ದಾರೆ.

ಇದಕ್ಕೂ ಮುನ್ನ ಜೂನ್ 11 ರಂದು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಜೂನ್ 9 ರಂದು, ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಬೆಳಿಗ್ಗೆ 3.9 ತೀವ್ರತೆಯ ಭೂಕಂಪ ಸಂಭವಿಸಿತ್ತು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 am, Wed, 14 June 23