Cyclone Yaas ಯಾಸ್ ಚಂಡಮಾರುತದಿಂದಾಗಿ 25 ರೈಲು ರದ್ದುಗೊಳಿಸಿದ ಪೂರ್ವ ರೈಲ್ವೆ

|

Updated on: May 24, 2021 | 3:32 PM

Eastern railway: ತೀವ್ರ ಚಂಡಮಾರುತ ಯಾಸ್, ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ದೇಶದ ಪೂರ್ವ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಇದು ಮೇ 26 ರ ಸಂಜೆ ಒಡಿಶಾದ ಪರದೀಪ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪಗಳ ನಡುವೆ ಅಪ್ಪಳಿಸಲಿದೆ.

Cyclone Yaas ಯಾಸ್ ಚಂಡಮಾರುತದಿಂದಾಗಿ 25 ರೈಲು ರದ್ದುಗೊಳಿಸಿದ ಪೂರ್ವ ರೈಲ್ವೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಯಾಸ್ ಚಂಡಮಾರುತದ ಮುನ್ಸೂಚನೆಯಿಂದಾಗಿ ಪೂರ್ವ ರೈಲ್ವೆ ಮೇ 24 ರಿಂದ ಮೇ 29 ರವರೆಗೆ ದೇಶದ ಪೂರ್ವ ಕರಾವಳಿಯ ಸಮೀಪ ಚಲಿಸುವ 25 ರೈಲುಗಳನ್ನು ರದ್ದುಗೊಳಿಸಿದೆ. ರದ್ದಾದ ರೈಲುಗಳ ಪಟ್ಟಿಯಲ್ಲಿ ಗುವಾಹಟಿ-ಬೆಂಗಳೂರು ಕಂಟೋನ್ಮೆಂಟ್, ಮುಜಾಫರ್​ಪುರ್-ಯಶವಂತಪುರ, ಎರ್ನಾಕುಲಂ-ಪಾಟ್ನಾ ರೈಲು, ನ್ಯೂ ಟಿನ್ಸುಕಿಯಾ-ತಾಂಬರಂ , ಭಾಗಲ್ಪುರ್-ಯಶವಂತಪುರ ರೈಲು ಸೇರಿದೆ ಪೂರ್ವ ರೈಲ್ವೆ ಪೂರ್ಣ ಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ತೀವ್ರ ಚಂಡಮಾರುತ ಯಾಸ್, ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ನಡುವೆ ದೇಶದ ಪೂರ್ವ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಇದು ಮೇ 26 ರ ಸಂಜೆ ಒಡಿಶಾದ ಪರದೀಪ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪಗಳ ನಡುವೆ ಅಪ್ಪಳಿಸಲಿದೆ. ಹತ್ತಿರದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.


ಇದು ಮೇ 26 ರ ಸಂಜೆ ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾ ತೀರಗಳನ್ನು ದಾಟಲಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಆ ಚಂಡಮಾರುತ ಗಂಟೆಗೆ ಸುಮಾರು 155-165 ಕಿ.ಮೀಯಿಂದ ಗಂಟೆಗೆ 185 ಕಿ.ಮೀವರೆಗೆ ವೇಗ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಐಎಮ್‌ಡಿಯ ಹವಾಮಾನ ಮಹಾನಿರ್ದೇಶಕ ಡಾ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಇದು ಬೃಹತ್ ಪ್ರಮಾಣದ ಮತ್ತು ಹಾನಿಕಾರಕವಾದ ಗಾಳಿಯ ವೇಗವಾಗಿದೆ. ಇದು ತೌಕ್ತೆ ಚಂಡಮಾರುತದ ಗಾಳಿಯ ವೇಗವನ್ನು ಹೋಲುತ್ತದೆ. ಕಳೆದ ವರ್ಷ ಭೂಕುಸಿತವನ್ನು ಉಂಟುಮಾಡಿದ ಆಂಫಾನ್ ಚಂಡಮಾರುತವೂ ಸಹ ಇದೇ ರೀತಿಯ ಗಾಳಿಯ ವೇಗವನ್ನು ಹೊಂದಿದೆ ಎಂದು ಡಾ ಮೊಹಾಪಾತ್ರ ಸಹ ಹೇಳಿದ್ದಾರೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಂಡಮಾರುತದಿಂದ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಏತನ್ಮಧ್ಯೆ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸುಮಾರು 1,000 ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ನೌಕಾಪಡೆ ಮತ್ತು ವಾಯುಪಡೆಯು ಡಜನ್ ಗಟ್ಟಲೆ ವಿಮಾನಗಳನ್ನು ಸ್ಟ್ಯಾಂಡ್-ಬೈನಲ್ಲಿ ಇರಿಸಿದೆ.

ಇದನ್ನೂ ಓದಿ: Cyclone Yaas: 4 ದಿನ ಮುಂಚೆಯೇ ಕರ್ನಾಟಕಕ್ಕೆ ಮುಂಗಾರು ಪ್ರವೇಶ; ಇದು ಪ್ರಚಂಡ ಮಾರುತ ಯಾಸ್​ ಪರಿಣಾಮ: ಏನಿದರ ಪ್ರಕೋಪ?

Cyclone Yaas: ಯಾಸ್ ಚಂಡಮಾರುತ ಎದುರಿಸಲು ಕೈಗೊಂಡ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ