ದೇಶದಲ್ಲಿ ಕಳೆದ 11 ದಿನಗಳಿಂದ ಪತ್ತೆಯಾಗುವ ಹೊಸ ಕೊವಿಡ್ ಸೋಂಕಿತರಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ: ಲವ್ ಅಗರ್ವಾಲ್

ಕೊರೊನಾ ವೈರಸ್ ಸೋರಿಕೆ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಲೇ ಇವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ತನಿಖೆ ನಡೆಸುತ್ತಿದೆ. ಈಗಲೇ ಭಾರತ ಯಾವ ನಿಲುವನ್ನೂ ತಳೆಯುವುದಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ಕಳೆದ 11 ದಿನಗಳಿಂದ ಪತ್ತೆಯಾಗುವ ಹೊಸ ಕೊವಿಡ್ ಸೋಂಕಿತರಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ: ಲವ್ ಅಗರ್ವಾಲ್
ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್
Follow us
guruganesh bhat
|

Updated on: May 24, 2021 | 5:14 PM

ದೆಹಲಿ: ದೇಶದಲ್ಲಿ ಕಳೆದ 11 ದಿನಗಳಿಂದ ಹೊಸ ಕೊವಿಡ್ ಪ್ರಕರಣಗಳಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ 22 ದಿನಗಳಿಂದ ದೇಶದಲ್ಲಿ ಸಕ್ರಿಯ ಕೊವಿಡ್ ಸೋಂಕಿತರ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ. ಕೊವಿಡ್​ನ ಮುಂದಿನ ಅಲೆಗಳನ್ನು ಭಾರತ ಸಶಕ್ತವಾಗಿ ತಡೆಯಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದರು.

ಫೈಜರ್ , ಮಾಡೆರ್ನಾ ಕಂಪನಿಗಳ ಲಸಿಕೆಗಳನ್ನು ಈಗಾಗಲೇ ಬೇರೆ ದೇಶಗಳಿಂದ ಕಾಯ್ದಿರಿಸಿವೆ. ಹೀಗಾಗಿ ಅವು ರಾಜ್ಯಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಆದರೆ ಕೇಂದ್ರ ಸರ್ಕಾರ ಈ ಕಂಪನಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಎರಡೂ ಕಂಪನಿಗಳಿಗೆ ಲಸಿಕೆಯನ್ನು ಭಾರತಕ್ಕೆ ತರಲು ಸಹಕಾರ ನೀಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯ ತಿಂಗಳಿಗೆ 6.4 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದನೆಯಾಗುತ್ತಿದೆ. ಆದರೆ ಲಸಿಕೆ ಉತ್ಪಾದನೆ ಆದ ತಕ್ಷಣವೇ ಬಳಕೆಗೆ ಸಿಗುವುದಿಲ್ಲ. ಲಸಿಕೆಯನ್ನು ಕೆಲವೊಂದು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಪರೀಕ್ಷೆಗಳನ್ನು ಹಿಮಾಚಲ ಪ್ರದೇಶದ ಕಸೂಲಿ ಲ್ಯಾಬ್​ನಲ್ಲಿ ನಡೆಸಲಾಗುತ್ತದೆ. ಹೀಗಾಗಿ ಉತ್ಪಾದನೆಯಾದ ಬಳಿಕ‌ ಲಸಿಕೆ ಜನರಿಗೆ ತಲುಪಲು 8 ರಿಂದ9 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದು ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದರು.

ಅಂತರಾಷ್ಟ್ರೀಯ ನಿಯತಕಾಲಿಕವೊಂದರಲ್ಲಿ ಪ್ರಕಟವಾದಂತೆ ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಚೀನಾದ ಕೈವಾಡ ಇದೆ ಎಂಬ ಆರೋಪವಿದೆ. ಈ ಬಗ್ಗೆ ಭಾರದತ ನಿಲುವೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಕೊರೊನಾ ವೈರಸ್ ಸೋರಿಕೆ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಲೇ ಇವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ತನಿಖೆ ನಡೆಸುತ್ತಿದೆ. ಈಗಲೇ ಭಾರತ ಯಾವ ನಿಲುವನ್ನೂ ತಳೆಯುವುದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ರಣದೀಪ್ ಗುಲೇರಿಯಾ, ಇದುವರೆಗೂ ಕಲಿತ ಪಾಠಗಳಿಂದ ನಾವು ಮುಂದಿನ ಕೊರೊನಾ ಅಲೆ ಬರದಂತೆ ತಡೆಯಬೇಕು. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಕೊರೊನಾ ಇದ್ದಾಗಲೇ ಚಿಕಿತ್ಸೆ ನೀಡಬೇಕು. ಬ್ಲ್ಯಾಕ್ ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲ್ಲ ಎಂಬುದು ಸಮಾಧಾನಕರ ಸಂಗತಿ. ಬ್ಲ್ಯಾಕ್ ಫಂಗಸ್ ಶೇ.90 ರಷ್ಟು ಡಯಾಬಿಟಿಸ್, ಸ್ಟೀರಾಯ್ಡ್ ತೆಗೆದುಕೊಂಡವರಲ್ಲಿ ಮಾತ್ರ ಪತ್ತೆಯಾಗಿದೆ. ಮನೆಯಲ್ಲಿದ್ದು ಸ್ಟೀರಾಯ್ಡ್ ತೆಗೆದುಕೊಂಡವರು, ಡಯಾಬಿಟಿಸ್ ಇರುವವರಿಗೆ ಬಂದಿದೆ. ಆಸ್ಪತ್ರೆಗೆ ದಾಖಲಾಗಿ ಮೆಡಿಕಲ್ ಆಕ್ಸಿಜನ್ ಬಳಸದೇ ಇರುವವರಿಗೂ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಆಕ್ಸಿಜನ್ ಬಳಸುವವರು ಸಾಮಗ್ರಿಗಳು ಸ್ವಚ್ಚವಾಗಿರುವಂತೆ ನೋಡಿಕೊಳ್ಳಬೇಕು. ಕೊರೊನಾ ಇದ್ದವರು ಮತ್ತು, ಕೊರೊನಾ ಗುಣವಾದವರಿಗೆ ಪ್ರತ್ಯೇಕ ವಾರ್ಡ್​ಗಳಲ್ಲಿ ಚಿಕಿತ್ಸೆ ನೀಡಬೇಕು. ಈ ರೀತಿ ಚಿಕಿತ್ಸೆ ನೀಡುವುದು ಸದ್ಯ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಕೊವಿಡ್ ಕಂಡುಬಂದರೂ ಹೆಚ್ಚಿನ ಗುಣಲಕ್ಷಣಗಳು ಕಂಡುಬಂದಿಲ್ಲ. ಆದರೆ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಕೊವಿಡ್ ತೊಂದರೆ ನೀಡು ಸಾಧ್ಯತೆಯಿದೆ. ಟೆಕ್ ಸ್ಯಾವಿ ಮಕ್ಕಳು ಮಾನಸಿಕವಾಗಿ ದುರ್ಬಲಗೊಳ್ಳುವ ಸಾಧ್ಯತೆಯೂ ಇದೆ. ಹೀಗಾಗಿ ಪಾಲಕರು, ಆಶಾ ಕಾರ್ಯಕರ್ತೆಯರು,ನೆರೆಹೊರೆಯವರು ಗೆಳೆಯರು ಎಲ್ಲರೂ ಸೇರಿ ಮಕ್ಕಳ ಆರೋಗ್ಯದ ಮೇಲೆ ಗಮನವಿರಿಸಬೇಕು ಎಂದು ಡಾ.ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಿಮಾನದಲ್ಲಿ ಮದುವೆಯಾದರೂ ಕೊವಿಡ್​ ನಿಯಮ ಉಲ್ಲಂಘಿಸಿದ್ದಕ್ಕೆ ಶುರುವಾಯ್ತು ತನಿಖೆ 

ಉಸಿರಿನಿಂದ ಕೊವಿಡ್ ಪರೀಕ್ಷೆ; ಕ್ಷಣ ಮಾತ್ರದಲ್ಲಿ ಫಲಿತಾಂಶ ಸಿಗುವ ಈ ಪರೀಕ್ಷೆಗೆ ಸಿಂಗಾಪುರ್ ಅನುಮೋದನೆ

(From last 11 days discharge numbers are more than new covid cases in India says Luv Agarwal)