ಉಸಿರಿನಿಂದ ಕೊವಿಡ್ ಪರೀಕ್ಷೆ; ಕ್ಷಣ ಮಾತ್ರದಲ್ಲಿ ಫಲಿತಾಂಶ ಸಿಗುವ ಈ ಪರೀಕ್ಷೆಗೆ ಸಿಂಗಾಪುರ್ ಅನುಮೋದನೆ
Breath Test: ಸಿಂಗಾಪುರವು ಮಲೇಷ್ಯಾದಿಂದ ಒಳಬರುವ ಪ್ರಯಾಣಿಕರನ್ನು ದ್ವೀಪದ ಪಶ್ಚಿಮ ಭಾಗದಲ್ಲಿರುವ ಟುವಾಸ್ ಚೆಕ್‌ಪಾಯಿಂಟ್‌ನಲ್ಲಿ ಬ್ರೀಥಲೈಜರ್‌ಗಳನ್ನಿರಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ
ಸಿಂಗಾಪುರ್: ಕೊವಿಡ್ -19 ಅನ್ನು ಪತ್ತೆಹಚ್ಚಲು ಮತ್ತು ಒಂದು ನಿಮಿಷದೊಳಗೆ ನಿಖರ ಫಲಿತಾಂಶಗಳನ್ನು ನೀಡಲು ವಿನ್ಯಾಸಗೊಳಿಸಲಾದ ಉಸಿರಾಟದ ಪರೀಕ್ಷೆಯನ್ನು (breath test) ಸಿಂಗಾಪುರದಲ್ಲಿ ಬಳಸಲು ಅನುಮೋದಿಸಲಾಗಿದೆ ಎಂದು ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಎನ್‌ಯುಎಸ್ ಸ್ಪಿನ್-ಆಫ್ ಸ್ಟಾರ್ಟ್ಅಪ್ ಬ್ರೀಥೋನಿಕ್ಸ್ ಅಭಿವೃದ್ಧಿಪಡಿಸಿದ ಈ ಪರೀಕ್ಷೆಯು ಸ್ಟ್ಯಾಂಡರ್ಡ್ ಬ್ರೀಥಲೈಜರ್ ಪರೀಕ್ಷೆಯಂತೆ ಕಾರ್ಯನಿರ್ವಹಿಸುತ್ತದೆ. ಇದು ಚಾಲಕ ಮದ್ಯ ಸೇವಿಸಿದ್ದಾನೆಯೇ ಎಂದು ಪತ್ತೆ ಹಚ್ಚಲು ಬಳಸುವ ಸಾಧನದಂತೆ ಕಾರ್ಯವೆಸಗುತ್ತದೆ. ಒಬ್ಬ ವ್ಯಕ್ತಿಯು ಏಕಮುಖ ಕವಾಟದಕ್ಕೆ ಊದಿದಾಗ ವ್ಯಕ್ತಿಯ ಉಸಿರಾಟದಲ್ಲಿನ ಕಣಗಳನ್ನು ಮೆಷೀನ್ ಲರ್ನಿಂಗ್ ಸಾಫ್ಟ್‌ವೇರ್‌ನಿಂದ ಹೋಲಿಸಲಾಗುತ್ತದೆ. ಇದನ್ನು ಬ್ರೀಥ್ ಸಿಗ್ನೇಚರ್ ಎನ್ನಲಾಗಿದೆ. ಸಾಮಾನ್ಯ ಬ್ರೀಥ್ ಸಿಗ್ನೆಚರ್ ಗಿಂತ ಇದು ಭಿನ್ನವಾಗಿದ್ದರೆ ಆ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಇದೆ ಎಂದರ್ಥ.
ಸಿಂಗಾಪುರವು ಮಲೇಷ್ಯಾದಿಂದ ಒಳಬರುವ ಪ್ರಯಾಣಿಕರನ್ನು ದ್ವೀಪದ ಪಶ್ಚಿಮ ಭಾಗದಲ್ಲಿರುವ ಟುವಾಸ್ ಚೆಕ್‌ಪಾಯಿಂಟ್‌ನಲ್ಲಿ ಬ್ರೀಥಲೈಜರ್‌ಗಳನ್ನಿರಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ಉಸಿರಾಟದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ವ್ಯಕ್ತಿಯನ್ನು ಪಿಸಿಆರ್ ಸ್ವ್ಯಾಬ್ ಪರೀಕ್ಷೆಗೊಳಪಡಿಸಲಾಗುತ್ತದೆ. ಸಿಂಗಾಪುರ್ ಪ್ರಸ್ತುತ ಆಂಟಿಜೆನ್ ಕ್ಷಿಪ್ರ ಪರೀಕ್ಷೆಗಳನ್ನು ನಡೆಸಿದ ನಂತರವೇ ಪ್ರವೇಶ ಅನುಮತಿಸುತ್ತಿದ್ದು ಅದರ ಜತೆಯಲ್ಲಿಯೇ ಬ್ರೀಥಲೈಜರ್‌ಗಳ ಪರೀಕ್ಷೆ ಮಾಡಲಾಗುತ್ತದೆ.
ಸಾಂಕ್ರಾಮಿಕ ಸಮಯದಲ್ಲಿ ಕ್ರಾಲ್ ಮಾಡಲು, ನಿಧಾನವಾಗಿ ಪ್ರಯಾಣ ವಲಯವನ್ನು ಅನ್ ಲಾಕ್ ಮಾಡಲು ಸಹಾಯ ಮಾಡುವ ವೇಗ ಮತ್ತು ನಿಖರವಾದ ಕೊವಿಡ್ ಪರೀಕ್ಷೆಗಳು ಮುಖ್ಯ ಪಾತ್ರ ವಹಿಸುತ್ತದೆ. ಅಮೆರಿಕ ಮತ್ತು ಯುರೋಪಿನ ಕೆಲವು ಭಾಗಗಳು ಹೆಚ್ಚಿನ ಪ್ರಕರಣಗಳೊಂದಿಗೆ ಮತ್ತೆ ತೆರೆಯಲು ಪ್ರಾರಂಭಿಸಿದರೂ ಸಹ, ಸಿಂಗಾಪುರ ಮತ್ತು ಏಷ್ಯಾದ ಇತರ “ಕೊವಿಡ್- ಜೀರೊ” ದೇಶಗಳು ಗಡಿಗಳನ್ನು ತೆರೆಯಲು ಹಿಂಜರಿಯುತ್ತಿವೆ. ಬ್ರೀಥೋನಿಕ್ಸ್ ಪರೀಕ್ಷೆಯು ಇಲ್ಲಿಯವರೆಗೆ ಮೂರು ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದೆ.
ಸಿಂಗಾಪುರದಲ್ಲಿ ಎರಡು ಮತ್ತು ಇನ್ನೊಂದು ದುಬೈನಲ್ಲಿ ಈ ಕ್ಲಿನಿಕಲ್ ಪ್ರಯೋಗ ನಡೆದಿತ್ತು. 180 ರೋಗಿಗಳನ್ನು ಒಳಗೊಂಡ ಒಂದು ಆರಂಭಿಕ ಅಧ್ಯಯನದಲ್ಲಿ ಇದು 93% ನಷ್ಟು ಸೂಕ್ಷ್ಮತೆಯನ್ನು ಮತ್ತು 95% ನಷ್ಟು ನಿಖರತೆಯನ್ನು ಸಾಧಿಸಿದೆ.
Published On - 4:36 pm, Mon, 24 May 21