ಇಂದಿನಿಂದ ವಿಶ್ವ ಸಭೆ: ಸಂಕಷ್ಟಗಳ ಸಮ್ಮುಖದಲ್ಲಿ WHO ತನ್ನ ಇರುವನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ..

Covid Crisis WHO International Meet: ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ಸಂಕಷ್ಟ, ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು ಮತ್ತು ಭವಿಷ್ಯದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗಿದೆ ಎಂಬುದರ ಸುತ್ತಾ ಇಂದಿನ WHO ಅಂತಾರಾಷ್ಟ್ರೀಯ ಸಭೆಯಲ್ಲಿ ಪ್ರಮುಖ ವಿಷಯಸೂಚಿಗಳಾಗಿವೆ. ಸದಸ್ಯ ರಾಷ್ಟ್ರಗಳು ಇಂದಿನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು ಮುಂದೆ ಭವಿಷ್ಯದಲ್ಲಿ ಇಂತಹ ಮಹಾವಿಪತ್ತನ್ನು ತಪ್ಪಿಸುವುದು ಹೇಗೆ ಎಂಬುದೇ ಚರ್ಚೆಯ ಪ್ರಧಾನ ಅಂಶವಾಗಲಿದೆ.

ಇಂದಿನಿಂದ ವಿಶ್ವ ಸಭೆ: ಸಂಕಷ್ಟಗಳ ಸಮ್ಮುಖದಲ್ಲಿ WHO ತನ್ನ ಇರುವನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ..
ಇಂದಿನಿಂದ ವಿಶ್ವ ಸಭೆ: ಸಂಕಷ್ಟಗಳ ಸಮ್ಮುಖದಲ್ಲಿ WHO ತನ್ನ ಇರುವನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ..
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on: May 24, 2021 | 1:15 PM

ಜಿನೆವಾ (ಸ್ವಿಟ್ಸರ್ಲೆಂಡ್​): ಇಂದಿನಿಂದ ವಿಶ್ವ ಆರೋಗ್ಯ ಸಂಸ್ಥೆಯ (WHO) ಅಂತಾರಾಷ್ಟ್ರೀಯ ಸಭೆ ನಡೆಯಲಿದೆ. ಹಾಗಾದರೆ ಏನೆಲ್ಲಾ ವಿಷಯಗಳು ಚರ್ಚೆಗೆ ಬರಲಿದೆ ಎಂದು ಪ್ರಶ್ನಿಸಿದಾಗ ಇಲ್ಲಿ ಪ್ರಶ್ನೆ ಹಾಕುವ ಪ್ರಮೇಯವೇ ಇಲ್ಲ. ಇಡೀ ಜಗತ್ತು ಈಗ ಕೊರೊನಾ ಆರ್ಭಟದಲ್ಲಿ ಮಕಾಗಿ ಕುಳಿತುಬಿಟ್ಟಿದೆ. ಹಾಗಾಗಿ ಕೊರೊನಾ ಸುತ್ತಲೇ WHO ಕಾರ್ಯಸೂಚಿ ಲಂಗರು ಹಾಕಬೇಕಿದೆ.

ಕೊರೊನಾ ಸೋಂಕಿನಿಂದ ಸೃಷ್ಟಿಯಾಗಿರುವ ಸಂಕಷ್ಟ, ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು ಮತ್ತು ಭವಿಷ್ಯದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾಗಿದೆ ಎಂಬುದರ ಸುತ್ತಾ ಇಂದಿನ WHO ಅಂತಾರಾಷ್ಟ್ರೀಯ ಸಭೆಯಲ್ಲಿ ಪ್ರಮುಖ ವಿಷಯಸೂಚಿಗಳಾಗಿವೆ. ಸದಸ್ಯ ರಾಷ್ಟ್ರಗಳು ಇಂದಿನ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು ಮುಂದೆ ಭವಿಷ್ಯದಲ್ಲಿ ಇಂತಹ ಮಹಾವಿಪತ್ತನ್ನು ತಪ್ಪಿಸುವುದು ಹೇಗೆ ಎಂಬುದೇ ಚರ್ಚೆಯ ಪ್ರಧಾನ ಅಂಶವಾಗಲಿದೆ.

ಕೊರೊನಾ ಮಹಾವಿಪತ್ತು ಇನ್ನೂ ಜಗತ್ತಲ್ಲಿ ತಾಂಡವವಾಡುತ್ತಿರುವಾಗ ಧನಿಕ ರಾಷ್ಟ್ರಗಳು ಇದ್ದಬದ್ದ ಜೀವರಕ್ಷಕ ಕೋವಿಡ್ ವ್ಯಾಕ್ಸಿನ್​ಅನ್ನು ತಾನೇ ಗುಡ್ಡೆಹಾಕಿಕೊಂಡಿರುವಾಗ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ನಿರ್ಣಾಯಕ ಮಂಡಳಿ ಇಂದು ಇಂತಹುದೇ ಅನೇಕ ವಿಷಯಗಳ ಬಗ್ಗೆ ಸ್ಪಷ್ಟ ನಿರ್ಣಯಗಳನ್ನು ಕೈಗೊಳ್ಳಬೇಕಿದೆ. ವಿಶ್ವ ಆರೋಗ್ಯ ಅಸೆಂಬ್ಲಿಯ 74ನೇ ಸಭೆ (74th World Health Assembly -WHA) ಇದಾಗಿದೆ. ಜೂನ್​ 1ರ ವರೆಗೂ ಈ ಮಹಾಸಭೆ ಜರುಗಲಿದೆ. ಈ 74ನೇ ಸಭೆ ಅತ್ಯಂತ ಮುಖ್ಯವಾದ ಸಭೆಯಾಗಲಿದೆ.ಇದರಲ್ಲಿ 70 ವಿಷಯಸೂಚಿಗಳು ಇವೆ ಎಂದು WHO ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ (Tedros Adhanom Ghebreyesus) ಕಳೆದ ವಾರವೇ ಹೇಳುವ ಮೂಲಕ ಮೇ ಕೊನೆಯ ವಾರದಲ್ಲಿ ನಡೆಯುತ್ತಿರುವ ಈ ಸಭೆಯ ಪ್ರಾಮುಖ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ಮಹಾಸಾಂಕ್ರಾಮಿಕ ಕೊರೊನಾ ಪರಿಸ್ಥಿತಿಯ ಬಗ್ಗೆ ಮೂರು ಸ್ವತಂತ್ರ ಸಮಿತಿಗಳು ತನ್ನ ವರದಿಗಳನ್ನು ಸಲ್ಲಿಸಿದ್ದು WHA ಉನ್ನತ ಸಮಿತಿ ನಾಳೆ ಮಂಗಳವಾರ ಸವಿಸ್ತಾರವಾಗಿ ಚರ್ಚೆಗೆ ತೆಗೆದುಕೊಳ್ಳಲಿದೆ. ಇದೇ ವೇಳೆ ಸ್ವತಂತ್ರತೆ, ಪಾರದರ್ಶಕತೆ ಮತ್ತು ದೇಣಿಗೆ ಬಳಕೆ ವಿಷಯಗಳಲ್ಲಿ WHO ಮಹತ್ವವನ್ನು ಎತ್ತಿಹಿಡಿಯಲು ಕೈಗೊಳ್ಳಬೇಕಾದ ಸುಧಾರಣೆಗಳ ಬಗ್ಗೆಯೂ ಈ ವಾರ ಚರ್ಚೆಗಳು ನಡೆಯಲಿದೆ. ಈ ಕುರಿತಾದ ಕರಡು ನೀತಿಯೊಂದು ಅದಾಗಲೇ ಸಿದ್ಧವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಮಹಾ ವಿಪತ್ತುಗಳು ಎದುರಾದಾಗ ಸಂಬಂಧಪಟ್ಟ ಸದಸ್ಯ ರಾಷ್ಟ್ರದ ಆಹ್ವಾನಕ್ಕೆ ಕಾದುಕುಳಿತುಕೊಳ್ಳದೆ ನೇರವಾಗಿ ಸ್ಥಳಕ್ಕೆ ತೆರಳಲು WHO ಗೆ ಸ್ಪಷ್ಟ ಅಧಿಕಾರ ನೀಡುವ ಬಗ್ಗೆಯೂ ಪ್ರಸ್ತಾವನೆ ಸಿದ್ಧವಾಗಿದೆ.

ಸಂಕಷ್ಟಗಳ ಸಮ್ಮುಖದಲ್ಲಿ WHO ತನ್ನ ಇರುವನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ:

WHO International Meet Starting Today Covid Crisis and Future Pandemics High on Agenda

ಇಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಸಭೆ; ಏನೆಲ್ಲಾ ವಿಷಯಗಳು ಚರ್ಚೆಗೆ ಬರಲಿವೆ

ಮಹಾ ವಿಪತ್ತು ಕಾಲದಲ್ಲಿ WHO ಮಧ್ಯ ಪ್ರವೇಶಕ್ಕೆ ಆಯಾ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆಯೊದಗುತ್ತದೆ ಎಂಬ ವಾದವನ್ನು ಒಪ್ಪಲಾಗದು. ಇಂತಹ ವಿಪತ್ತಿನ ಸಂದರ್ಭಗಳಲ್ಲಿ ಜಾಗತಿಕ ಐಕ್ಯತೆಯಷ್ಟೇ ಪ್ರಧಾನವಾಗುತ್ತದೆ ಎಂಬುದನ್ನು ಮನಗಾಣಬೇಕು ಎಂಬ ಮಾತೂ ಕೇಳಿಬಂದಿದೆ.

ಇದೇ ಸಂದರ್ಭದಲ್ಲಿ ಈ ಬಾರಿಯೂ ತೈವಾನ್​ಗೆ WHA ಉನ್ನತ ಸಮಿತಿ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಪಾಲ್ಗೊಳ್ಳುವುದಕ್ಕೆ ಅನುಮತಿ ನೀಡಬೇಕು ಎಂಬ ಮಾತು ರಿಂಗಣಿಸುತ್ತಿದೆ. ಚೀನಾದ ಒತ್ತಡದಿಂದಾಗಿ ಪುಟ್ಟ ಸ್ವತಂತ್ರ ರಾಷ್ಟ್ರ ತೈವಾನ್ ಅನ್ನು ಅನೇಕ ವರ್ಷಗಳಿಂದ WHO ದಿಂದ ಹೊರಗಿಡಲಾಗುತ್ತಿದೆ. ಆದರೆ ಈ ಬಾರಿ ವಿಶ್ವ ಮಹಾವಿಪತ್ತಿನ ಸಂದರ್ಭದಲ್ಲಿ ಇದಕ್ಕೆ ಸೊಪ್ಪುಹಾಕದೆ ತೈವಾನ್​ಗೆ ಮಣೆ ಹಾಕಬೇಕು ಎಂಬ ಆತು ಬಲವಾಗಿ ಕೇಳಿಬಂದಿದೆ. ಈ ಸಂಕಷ್ಟಗಳ ಸಮ್ಮುಖದಲ್ಲಿ WHO ತನ್ನ ಇರುವನ್ನು ಗಟ್ಟಿ ಮಾಡಿಕೊಳ್ಳುವ ಸಂದರ್ಭ ಒದಗಿಬಂದಿದೆ.

(WHO International Meet Starts Today Covid Crisis and Future Pandemics High on Agenda)

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ