AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಕಾಟದ ಮಧ್ಯೆ, ವೈರಸ್​ ಕಟ್ಟಿಹಾಕಲು ನ್ಯೂಯಾರ್ಕ್​ನಲ್ಲಿ ಬಂದಿಳಿದ ವಿದೇಶಾಂಗ ಸಚಿವ ಜೈಶಂಕರ್; ಭೇಟಿಯ ಮಹತ್ವ ಏನು?

EAM Dr S Jaishankar in New York: ಕೊವಿಡ್​ ವ್ಯಾಕ್ಸಿನ್​ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳಿಂದ ಭಾರತಕ್ಕೆ ಕೊವಿಡ್​ ವ್ಯಾಕ್ಸಿನ್​ ಪಡೆಯುವುದು ಈ ಭೇಟಿಯ ಪ್ರಧಾನ ಅಜೆಂಡಾ ಆಗಿದೆ. ತನ್ನ ಬಳಿ 80 ದಶಲಕ್ಷ ವ್ಯಾಕ್ಸಿನ್​​ ಹೆಚ್ಚುವರಿ ದಾಸ್ತಾನು ಇದ್ದು ಕೊರೊನಾ ಬಗ್ಗೆ ಹೆಚ್ಚು ವರಿ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಸರಬರಾಜು ಮಾಡಲು ತಾನು ಸಿದ್ಧವಿರುವುದಾಗಿ ಅಮೆರಿಕಾ ಇತ್ತೀಚೆಗಷ್ಟೇ ಘೋಷಿಸಿರುವುದು ಗಮನಾರ್ಹ.

ಕೊರೊನಾ ಕಾಟದ ಮಧ್ಯೆ, ವೈರಸ್​ ಕಟ್ಟಿಹಾಕಲು ನ್ಯೂಯಾರ್ಕ್​ನಲ್ಲಿ ಬಂದಿಳಿದ ವಿದೇಶಾಂಗ ಸಚಿವ ಜೈಶಂಕರ್; ಭೇಟಿಯ ಮಹತ್ವ ಏನು?
ಕೊರೊನಾ ಕಾಟದ ಮಧ್ಯೆ, ಕೊರೊನಾ ಕಟ್ಟಿಹಾಕಲು ನ್ಯೂಯಾರ್ಕ್​ನಲ್ಲಿ ಬಂದಿಳಿದ ವಿದೇಶಾಂಗ ಸಚಿವ ಜೈಶಂಕರ್; ಭೇಟಿಯ ಮಹತ್ವ ಏನು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on: May 24, 2021 | 9:59 AM

Share

ಇದೇ ವರ್ಷ ಮೊದಲ ದಿನ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಎಂಟ್ರಿ ಕೊಟ್ಟ ಬಳಿಕ ವಿದೇಶಾಂಗ ಸಚಿವ ಡಾ. ಎಸ್​. ಜೈಶಂಕರ್ ಅವರು ಐದು ದಿನಗಳ ಕಾಲ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದು, ಇಂದು ನ್ಯೂಯಾರ್ಕ್​ನಲ್ಲಿ ಬಂದಿಳಿದರು. ಕೊರೊನಾ ಕಾಟದ ಮಧ್ಯೆ, ಕೊರೊನಾ ನಿಯಂತ್ರಣಕ್ಕಾಗಿ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಅವರ ಈ ಸುದೀರ್ಘ ಪ್ರವಾಸ ಮಹತ್ವ ಪಡೆದಿದೆ. ಕೊವಿಡ್​ ನಿಯಂತ್ರಣಕ್ಕಾಗಿ ಅಮೆರಿಕದೊಂದಿಗೆ ಸಹಕಾರ ಪಡೆಯುವುದು ಮತ್ತು ಕೊರೊನಾ ವ್ಯಾಕ್ಸಿನ್​ ಸರಬರಾಜಿಗೆ ಅಂಕಿತ ಹಾಕುವುದು ಭೇಟಿಯ ಪ್ರಧಾನ ಅಜೆಂಡಾ ಆಗಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ರಾಜಭಾರಿಯಾಗಿರುವ ಟಿ ಎಸ್​ ತಿರುಮೂರ್ತಿ ಸಚಿವ ಜೈಶಂಕರ್ ಅವರನ್ನು ಸೋಮವಾರ ಸ್ವಾಗತಿಸಿದರು. ಐದು ದಿನಗಳ ಕಾಲ ಮೇ 24ರಿಂದ ಮೇ 28ರ ವರೆಗೆ (May 24-May 28) ಸಚಿವ ಜೈಶಂಕರ್ ಅಮೆರಿಕ ಪ್ರವಾಸದಲ್ಲಿರುತ್ತಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ತಿರುಮೂರ್ತಿ, ವಿಶ್ವಸಂಸ್ಥೆಯ (United Nations) ಮಹಾ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್​ ಅವರನ್ನು ಸಚಿವ ಜೈಶಂಕರ್ ನ್ಯೂಯಾರ್ಕ್​ನಲ್ಲಿ ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಅದಕ್ಕೂ ಮೊದಲು ವಾಷಿಂಗ್ಟನ್​ ಡಿಸಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ದ್ವಿಪಕ್ಷೀಯ ಚರ್ಚೆಗಳ ಭಾಗವಾಗಿ ಕ್ಯಾಬಿನ್​ ಸಚಿವರು ಮತ್ತಿತರ ಉನ್ನತಾಧಿಕಾರಿಗಳ ಜೊತೆ ಸಚಿವ ಜೈಶಂಕರ್ ಮಾತುಕತೆ ನಡೆಸಲಿದ್ದಾರೆ. ಭಾರತ ಮತ್ತು ಅಮೆರಿಕ ನಡುವಣ ದ್ವಿಪಕ್ಷೀಯ ನಂಟಿನೊಂದಿಗೆ ಕೊವಿಡ್​ ಸಂಬಂಧೀ ವ್ಯವಹಾರಗಳ ಬಗ್ಗೆ ವಿವಿಧ ಔದ್ಯಮಿಕ ಸಂಘ ಸಂಸ್ಥೆಗಳ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಣೆಯಲ್ಲಿ ತಿಳಿಸಿದೆ.

ಕೊವಿಡ್​ ವ್ಯಾಕ್ಸಿನ್​ ಉತ್ಪಾದನೆಯಲ್ಲಿ ತೊಡಗಿರುವ ಅಮೆರಿಕಾದ ನಾನಾ ಉದ್ಯಮಗಳು ಮತ್ತು ಸಂಸ್ಥೆಗಳ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ. ಈ ಸಂಸ್ಥೆಗಳಿಂದ ಭಾರತಕ್ಕೆ ಕೊವಿಡ್​ ವ್ಯಾಕ್ಸಿನ್​ ಪಡೆಯುವುದು ಈ ಭೇಟಿಯ ಪ್ರಧಾನ ಅಜೆಂಡಾ ಆಗಿದೆ. ತನ್ನ ಬಳಿ 80 ದಶಲಕ್ಷ ವ್ಯಾಕ್ಸಿನ್​​ ಹೆಚ್ಚುವರಿ ದಾಸ್ತಾನು ಇದ್ದು ಕೊರೊನಾ ಬಗ್ಗೆ ಹೆಚ್ಚು ವರಿ ಮಾಡಿಕೊಂಡಿರುವ ರಾಷ್ಟ್ರಗಳಿಗೆ ಸರಬರಾಜು ಮಾಡಲು ತಾನು ಸಿದ್ಧವಿರುವುದಾಗಿ ಅಮೆರಿಕಾ ಇತ್ತೀಚೆಗಷ್ಟೇ ಘೋಷಿಸಿರುವುದು ಗಮನಾರ್ಹ.

ಅಮೆರಿಕಾ ಈಗಾಗಲೇ ಆಸ್ಟ್ರಾ ಜೆನಿಕಾ​, ಫೈಜರ್, ಮಾಡೆರ್ನಾ ಮತ್ತು ಜಾನ್​ಸನ್​ ಅಂಡ್ ಜಾನ್​ಸನ್​​ ಕಂಪನಿಗಳು ಉತ್ಪಾದಿಸಿರುವ ಕೊವಿಡ್​ ಲಸಿಕೆಯನ್ನು 60 ದಶಲಕ್ಷ ಪ್ರಮಾಣದಲ್ಲಿ ದಾಸ್ತಾನು ಹೊಂದಿದೆ. ಭಾರತದಲ್ಲಿ ಕೊವಿಡ್​ ನಿಯತ್ರಣದಲ್ಲಿ ಅಮೆರಿಕಾ ಪ್ರಮುಖ ನೆರವುಗಳನ್ನು ನೀಡುತ್ತಿದೆ. ಅದಾಗಲೇ ಆಕ್ಸಿಜನ್ ಘಟಕಗಳು, ಆಕ್ಸಿಜನ್ ಕಾನ್ಸೆಂಟ್ರೇಟರ್​​ಗಳು ಮುಂತಾದ ಅಗತ್ಯ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಿದೆ. ಜೊತೆಗೆ, ಕೊವಿಶೀಲ್ಡ್​ ಲಸಿಕೆ ತಯಾರಿಸುತ್ತಿರುವ ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ ಕಂಪನಿಗೆ (Serum Institute of India -SII) ಕೊವಿಡ್​ ಲಸಿಕೆ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳನ್ನು ರಫ್ತು ಮಾಡಿದೆ.

ರಾಜ್ಯದಲ್ಲಿ ಮತ್ತೆ ಆಕ್ಸಿಜನ್ ಸಮಸ್ಯೆ, 2 ದಿನ ಆಕ್ಸಿಜನ್ ಉತ್ಪಾದನೆಯಾಗಲ್ಲ ಎಂದು ಸಂದೇಶ ರವಾನೆ (India EAM Dr. S. Jaishankar in New York, begin his 5 day US visit to seek COVID related cooperation)

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್