Jammu-Kashmir Election Result 2024: ಜಮ್ಮು-ಕಾಶ್ಮೀರದ ಬಸೋಲಿಯಲ್ಲಿ ಬಿಜೆಪಿಗೆ ಆರಂಭಿಕ ಗೆಲುವು

|

Updated on: Oct 08, 2024 | 1:00 PM

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಕಥುವಾ ಜಿಲ್ಲೆಯ ಬಸೋಲಿಯಲ್ಲಿ ಬಿಜೆಪಿ ಮೊದಲ ಜಯಗಳಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ದರ್ಶನ್‌ಕುಮಾರ್‌ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಚೌಧರಿ ಲಾಲ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಇನ್ನು ಉಧಂಪುರದಲ್ಲಿ ರಣಬೀರ್​ ಸಿಂಗ್ ಗೆಲುವು ಸಾಧಿಸಿದ್ದಾರೆ.

Jammu-Kashmir Election Result 2024: ಜಮ್ಮು-ಕಾಶ್ಮೀರದ ಬಸೋಲಿಯಲ್ಲಿ ಬಿಜೆಪಿಗೆ ಆರಂಭಿಕ ಗೆಲುವು
ಬಿಜೆಪಿ
Image Credit source: Prokerala
Follow us on

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಕಥುವಾ ಜಿಲ್ಲೆಯ ಬಸೋಲಿಯಲ್ಲಿ ಬಿಜೆಪಿ ಮೊದಲ ಜಯಗಳಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ದರ್ಶನ್‌ಕುಮಾರ್‌ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್‌ನ ಚೌಧರಿ ಲಾಲ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಇನ್ನು ಉಧಂಪುರದಲ್ಲಿ ರಣಬೀರ್​ ಸಿಂಗ್ ಗೆಲುವು ಸಾಧಿಸಿದ್ದಾರೆ.

ಆರ್ಟಿಕಲ್ 370 ರದ್ದಾದ ನಂತರ ಇಲ್ಲಿ ಮೊದಲ ಬಾರಿಗೆ ಚುನಾವಣೆಗಳು ನಡೆದಿವೆ, ಅಂದರೆ ಸುಮಾರು 10 ವರ್ಷಗಳ ನಂತರ ಇಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ.ಮೂರು ಸ್ಥಾನಗಳ ಫಲಿತಾಂಶಗಳು ಬಂದಿದ್ದು, ಅದರಲ್ಲಿ ಎನ್‌ಸಿ ಒಂದು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದಿದೆ.

ಇಂಡಿಯಾ ಮೈತ್ರಿಕೂಟ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಜಮ್ಮುವಿನ ಸ್ಥಾನಗಳ ಆಧಾರದ ಮೇಲೆ ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಬ್ದುಲ್ಲಾ ಕುಟುಂಬದ ನ್ಯಾಷನಲ್ ಕಾನ್ಫರೆನ್ಸ್ ತನ್ನದೇ ಆದ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ವೇಳೆ ಕಳೆದ ಬಾರಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದ್ದ ಪಿಡಿಪಿ ಸ್ಥಿತಿ ಹದಗೆಟ್ಟಂತಿದೆ.

ಮತ್ತಷ್ಟು ಓದಿ: Assembly Election Results 2024: ಹರ್ಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ, ಮತ ಎಣಿಕೆ ಶುರು

ಆಗಸ್ಟ್ 5, 2019 ರಂದು, ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ತೆಗೆದುಹಾಕಿತು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಕಳೆದ ಚುನಾವಣೆಯಲ್ಲಿ ಪಿಡಿಪಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

ಆದರೆ ಬಿಜೆಪಿ 25 ಸ್ಥಾನ ಪಡೆದಿತ್ತು. ಫಾರೂಕ್ ಅಬ್ದುಲ್ಲಾ ನೇತೃತ್ವದ ಎಸ್‌ಸಿ 1 ಸ್ಥಾನ, ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದಿವೆ. ಇದಲ್ಲದೇ ಪೀಪಲ್ಸ್ ಕಾನ್ಫರೆನ್ಸ್ ಎರಡು ಸ್ಥಾನಗಳನ್ನು ಗೆದ್ದಿತ್ತು. ಮೂವರು ಪಕ್ಷೇತರರು ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.

ಭಾರತೀಯ ಜನತಾ ಪಕ್ಷದ ರಣವೀರ್ ಸಿಂಗ್ ಪಠಾನಿಯಾ ಅವರು ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಪೂರ್ವ ವಿಧಾನಸಭೆಯಿಂದ 2 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಅವರು ಸ್ವತಂತ್ರ ಅಭ್ಯರ್ಥಿ ಪವನ್ ಖಜುರಿಯಾ ಅವರನ್ನು ಸೋಲಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ