ಛತ್ತೀಸ್‌ಗಢದಲ್ಲಿ (Chhattisgarh) ಜಾರಿ ನಿರ್ದೇಶನಾಲಯ (ED) ಗುರುವಾರ ಶೋಧ ಕಾರ್ಯಾಚರಣೆ ನಡೆಸಿದ್ದು ಲೆಕ್ಕಕ್ಕೆ ಸಿಗದ ನಗದು, ಚಿನ್ನ ಮತ್ತು ಚಿನ್ನಾಭರಣ ಇತ್ಯಾದಿಗಳ ರೂಪದಲ್ಲಿ ಸುಮಾರು 6.5 ಕೋಟಿಗಳನ್ನು ವಶಪಡಿಸಿಕೊಂಡಿರುವುದಾಗಿ ಇಡಿ ಹೇಳಿದೆ. ಕಲ್ಲಿದ್ದಲು ಹಗರಣದ ಪ್ರಕರಣದಲ್ಲಿ ಇಡಿ ಬಂಧಿಸಿರುವ ಒಬ್ಬರು ಐಎಎಸ್ ಅಧಿಕಾರಿ ಸೇರಿದಂತೆ 3 ವ್ಯಕ್ತಿಗಳನ್ನು ರಾಯ್‌ಪುರದ ವಿಶೇಷ ನ್ಯಾಯಾಲಯ 8 ದಿನಗಳ ಕಾಲ ಅಂದರೆ ಅಕ್ಟೋಬರ್ 21ರ ವರೆಗೆ ಕಸ್ಟಡಿಯಲ್ಲಿರಿಸಲು ಅನುಮತಿ ನೀಡಿದೆ.
ED says it has conducted search operations& seized approx Rs6.5 Cr in form of unaccounted cash,gold & bullion, etc in Chhattisgarh.Special Court,Raipur has granted custody of 3 persons (incl 1 IAS officer) arrested by ED for 8 days till Oct 21 in a coal scam case,says the agency. pic.twitter.com/ggctudjKtj
— ANI (@ANI) October 14, 2022
ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ವಾರದ ಆರಂಭದಲ್ಲಿ ರಾಜ್ಯದಲ್ಲಿ ಬಹು ನಗರ ದಾಳಿಗಳನ್ನು ಪ್ರಾರಂಭಿಸಿದ ನಂತರ ಜಾರಿ ನಿರ್ದೇಶನಾಲಯವು ಛತ್ತೀಸ್‌ಗಢ ಕೇಡರ್ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇತರ ಇಬ್ಬರನ್ನು ಗುರುವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದ್ರಮಣಿ ಗ್ರೂಪ್‌ನ ಉದ್ಯಮಿ ಸುನಿಲ್ ಅಗರವಾಲ್ ಮತ್ತು ತಲೆಮರೆಸಿಕೊಂಡಿರುವ ಉದ್ಯಮಿ ಸೂರ್ಯಕಾಂತ್ ತಿವಾರಿಯ ಚಿಕ್ಕಪ್ಪ ಲಕ್ಷ್ಮೀಕಾಂತ್ ತಿವಾರಿ ಅವರನ್ನು ಫೆಡರಲ್ ಏಜೆನ್ಸಿಯು ರಾಜ್ಯ ರಾಜಧಾನಿ ರಾಯ್‌ಪುರದಿಂದ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಮೂವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ .
2009 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾದ ವಿಷ್ಣೋಯ್ ಅವರು ಪ್ರಸ್ತುತ ಛತ್ತೀಸ್‌ಗಢ ಇನ್ಫೋಟೆಕ್ ಪ್ರಮೋಷನ್ ಸೊಸೈಟಿಯ CEO ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಯ ನ್ಯಾಯಾಲಯವು ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಇತರ ಇಬ್ಬರನ್ನು ಎಂಟು ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಕಳುಹಿಸಿತು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ವಿಷ್ಣೋಯ್, ಉದ್ಯಮಿ ಸುನಿಲ್ ಅಗರವಾಲ್ ಮತ್ತು ಒಬ್ಬ ಲಕ್ಷ್ಮೀಕಾಂತ್ ತಿವಾರಿ ಅವರನ್ನು ಕೇಂದ್ರ ಏಜೆನ್ಸಿಯ ವಶದಲ್ಲಿ ಕಳುಹಿಸಲಾಗಿದೆ ಎಂದು ತಿವಾರಿ ಪರ ವಕೀಲ ಫೈಜಲ್ ರಿಜ್ವಿ ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳ ಉದ್ದೇಶಪೂರ್ವಕ ಸಂಬಂಧದಿಂದ ರಾಜ್ಯದಲ್ಲಿ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಾಗಣೆದಾರರಿಂದ ಸುಲಿಗೆ ಮಾಡಿದ ಅಕ್ರಮ ಸುಲಿಗೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಸ್ಥೆಯು ಅಕ್ಟೋಬರ್ 11 ರಂದು ಛತ್ತೀಸ್‌ಗಢದಲ್ಲಿ ಅನೇಕ ದಾಳಿಗಳನ್ನು ಪ್ರಾರಂಭಿಸಿದ ನಂತರ ಈ ಬಂಧನಗಳು ನಡೆದಿವೆ.
ಮಂಗಳವಾರ ಆರಂಭವಾದ ದಾಳಿಯ ವೇಳೆ ಐಎಎಸ್ ಅಧಿಕಾರಿ ಮತ್ತು ರಾಯಗಢ ಜಿಲ್ಲಾಧಿಕಾರಿ ರಾನು ಸಾಹು ಅವರು ಸಿಗದೇ ಇರುವ ಕಾರಣ ಅವರ ನಿವಾಸಕ್ಕೂ ಸಂಸ್ಥೆ ಸೀಲ್ ಹಾಕಿದೆ. ಸಾಹು ಅವರು ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ ಎಂದು ಏಜೆನ್ಸಿಗೆ ತಿಳಿಸಿದ್ದಾರೆ.
Published On - 8:28 pm, Fri, 14 October 22