ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮುನ್ನ ಎಚ್ಚೆತ್ತುಕೊಂಡ ಚುನಾವಣಾ ಆಯೋಗ; ವಿಜಯೋತ್ಸವಕ್ಕೆ ನಿಷೇಧ

|

Updated on: Apr 27, 2021 | 1:04 PM

ರಾಜಕಾರಣಿಗಳು ಪಂಚರಾಜ್ಯಗಳ ಚುನಾವಣೆ ನೆಪದಲ್ಲಿ ಜನರನ್ನು ಒಟ್ಟಾಗಿಸಿಕೊಂಡು ಭಾಷಣ ಮಾಡುತ್ತಿದ್ದಾಗ ಚುನಾವಣಾ ಆಯೋಗ ಸುಮ್ಮನಿತ್ತು. ದೇಶದಲ್ಲಿ ಕೊರೊನಾ 2ನೇ ಅಲೆ ಇಷ್ಟು ಹೆಚ್ಚಾಗಲು ಇದೇ ಕಾರಣ ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು.

ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೂ ಮುನ್ನ ಎಚ್ಚೆತ್ತುಕೊಂಡ ಚುನಾವಣಾ ಆಯೋಗ; ವಿಜಯೋತ್ಸವಕ್ಕೆ ನಿಷೇಧ
ಚುನಾವಣಾ ಆಯೋಗ
Follow us on

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮೇ 2ರಂದು ಹೊರಬೀಳಲಿದ್ದು, ಅದರ ಬೆನ್ನಲ್ಲೇ ಚುನಾವಣಾ ಆಯೋಗ ಒಂದು ಮಹತ್ವದ ಆದೇಶ ಹೊರಡಿಸಿದೆ. ಚುನಾವಣೆ ಫಲಿತಾಂಶದ ಬಳಿಕ ಗೆದ್ದ ಪಕ್ಷಗಳು ಎಲ್ಲಿಯೂ ವಿಜಯೋತ್ಸವ ಆಚರಿಸುವಂತಿಲ್ಲ. ಗೆಲುವಿನ ನೆಪದಲ್ಲಿ ಮೆರವಣಿಗೆ ಮಾಡುವಂತಿಲ್ಲ, ಗುಂಪುಗೂಡುವಂತಿಲ್ಲ ಎಂದು ಹೇಳಿದೆ.

ಇನ್ನು ಚುನಾವಣೆಗಳಲ್ಲಿ ಗೆದ್ದ ಅಭ್ಯರ್ಥಿಗಳು ತಮ್ಮ ಗೆಲುವಿನ ಪ್ರಮಾಣ ಪತ್ರ ಪಡೆಯಲು ಹೋಗುವಾಗ ಅವರೊಂದಿಗೆ ಇರಲು ಇಬ್ಬರಿಗೆ ಮಾತ್ರ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಪ್ರತಿದಿನ 3 ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗೇ ಒಂದು ದಿನದಲ್ಲಿ 2000ಕ್ಕೂ ಅಧಿಕ ಮಂದಿ ಸೋಂಕಿನಿಂದ ಸಾಯುತ್ತಿದ್ದಾರೆ. ಈ ಮಧ್ಯೆ ಚುನಾವಣೆ ಹೆಚ್ಚಲು ರಾಜಕಾರಣಿಗಳು ನಡೆಸಿದ ಚುನಾವಣಾ ಪ್ರಚಾರ ಮೆರವಣಿಗೆ, ಸಭೆಗಳು ಕಾರಣ ಎಂಬ ಆರೋಪ ಬಲವಾಗಿ ಕೇಳಿಬಂದಿದೆ. ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಚುನಾವಣಾ ರ್ಯಾಲಿಗಳಿಗೆ ಅದು ಹೇಗೆ ಅವಕಾಶ ಕೊಟ್ಟಿರಿ ಎಂದು ಮದ್ರಾಸ್ ಹೈಕೋರ್ಟ್ ಕೂಡ ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು.

ರಾಜಕಾರಣಿಗಳು ಪಂಚರಾಜ್ಯಗಳ ಚುನಾವಣೆ ನೆಪದಲ್ಲಿ ಜನರನ್ನು ಒಟ್ಟಾಗಿಸಿಕೊಂಡು ಭಾಷಣ ಮಾಡುತ್ತಿದ್ದಾಗ ಚುನಾವಣಾ ಆಯೋಗ ಸುಮ್ಮನಿತ್ತು. ದೇಶದಲ್ಲಿ ಕೊರೊನಾ 2ನೇ ಅಲೆ ಇಷ್ಟು ಹೆಚ್ಚಾಗಲು ಇದೇ ಕಾರಣ. ಹಾಗಾಗಿ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು. ರಾಜಕಾರಣಿಗಳ ವಿರುದ್ಧ ಕ್ರ ಯಾಕೆ ಕೈಗೊಳ್ಳುತ್ತಿಲ್ಲ ಎಂದೂ ಪ್ರಶ್ನಿಸಿತ್ತು. ಇದೀಗ ಫಲಿತಾಂಶಕ್ಕೂ ಮೊದಲು ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ. ಫಲಿತಾಂಶ ಬಂದ ನಂತರ ಎಲ್ಲಿಯೂ ವಿಜಯೋತ್ಸವ ಆಚರಣೆ ಮಾಡಲೇಬಾರದು ಎಂದು ಆದೇಶಿಸಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಬಗ್ಗೆ ಗೊಂದಲ ಬೇಡ, 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್

Covid Curfew: ಸಾರಿಗೆ ಬಸ್​ ಸ್ಥಗಿತ, ಸ್ವಗ್ರಾಮಕ್ಕೆ ಹಿಂದಿರುಗುತ್ತಿರುವ ಜನ: ಬಸ್​ ನಿಲ್ದಾಣಗಳೆಲ್ಲಾ ಫುಲ್​ ರಶ್​