ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್​ ಶೋ, ಮೆರವಣಿಗೆಗೆ ಫೆ.11ರವರೆಗೂ ಇಲ್ಲ ಅವಕಾಶ; ಸ್ವಲ್ಪ ಮಟ್ಟಿಗೆ ಸಡಿಲಿಕೆ ನೀಡಿದ ಚುನಾವಣಾ ಆಯೋಗ

| Updated By: Lakshmi Hegde

Updated on: Jan 31, 2022 | 6:26 PM

ಹಾಗಿದ್ದಾಗ್ಯೂ ಕೆಲವು ನಿಗದಿ ಪಡಿಸಿದ ತೆರೆದ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಸ್ಪರ್ಧಿಸಲಿರುವ ಅಭ್ಯರ್ಥಿಗಳು ಸಾರ್ವಜನಿಕ ಪ್ರಚಾರ ಸಭೆ ನಡೆಸಬಹುದು. ಆದರೆ ಅದರಲ್ಲಿ1000 ಜನರು ಸೇರಬಹುದಾಗಿದೆ.

ಪಂಚರಾಜ್ಯಗಳಲ್ಲಿ ಚುನಾವಣಾ ರೋಡ್​ ಶೋ, ಮೆರವಣಿಗೆಗೆ ಫೆ.11ರವರೆಗೂ ಇಲ್ಲ ಅವಕಾಶ; ಸ್ವಲ್ಪ ಮಟ್ಟಿಗೆ ಸಡಿಲಿಕೆ ನೀಡಿದ ಚುನಾವಣಾ ಆಯೋಗ
ಚುನಾವಣಾ ಆಯೋಗ
Follow us on

ದೆಹಲಿ: ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ (Assembly Election Of Five States) ರೋಡ್​ಶೋ, ವಾಹನ ರ್ಯಾಲಿಗಳು ಮತ್ತು ಪ್ರಚಾರ ಮೆರವಣಿಗೆಗಳನ್ನು ನಡೆಸಲು ಹೇರಿದ್ದ ನಿರ್ಬಂಧವನ್ನು ಚುನಾವಣಾ ಆಯೋಗ ಫೆ.11ರವರೆಗೆ ಮುಂದೂಡಿದೆ.  ಇಂದು ಬೆಳಗ್ಗೆ ಸಭೆ ನಡೆಸಿದ ಬಳಿಕ, ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, 2022ರ ಫೆ.11ರವರೆಗೂ  ಯಾವುದೇ ರೀತಿಯ ರೋಡ್​ ಶೋ, ಪಾದಯಾತ್ರೆಗಳು, ಸೈಕಲ್​/ಬೈಕ್​/ ಇನ್ನಿತರ ವಾಹನಗಳ ರ್ಯಾಲಿಗಳಿಗೆ  ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. 

ಮೊದಲಬಾರಿಗೆ ಜನವರಿ 8ರಂದು ಸುದ್ದಿಗೋಷ್ಠಿ ನಡೆಸಿ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದ ಚುನಾವಣಾ ಆಯೋಗ, ಜನವರಿ 15ರವರೆಗೆ ರೋಡ್​ ಶೋ, ರ್ಯಾಲಿಗಳಿಗೆ ಅವಕಾಶ ಇಲ್ಲ ಎಂದಿತ್ತು.  ನಂತರ ಜನವರಿ 31ರವರೆಗೆ ಅದನ್ನು ವಿಸ್ತರಿಸಿತು. ಇಂದು ಮತ್ತೆ ದೇಶದ ಕೊವಿಡ್​ 19 ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುಶೀಲ್​ ಚಂದ್ರ ಮತ್ತು ಆಯುಕ್ತರಾದ ರಾಜೀವ್​ ಕುಮಾರ್​, ಅನೂಪ್​ ಚಂದ್ರ ಪಾಂಡೆ, ನಿರ್ಬಂಧ ಅವಧಿಯನ್ನು ಫೆ.11ರವರೆಗೆ ವಿಸ್ತರಿಸಿದ್ದಾರೆ.

ಹಾಗಿದ್ದಾಗ್ಯೂ ಕೆಲವು ನಿಗದಿ ಪಡಿಸಿದ ತೆರೆದ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಸ್ಪರ್ಧಿಸಲಿರುವ ಅಭ್ಯರ್ಥಿಗಳು ಸಾರ್ವಜನಿಕ ಪ್ರಚಾರ ಸಭೆ ನಡೆಸಬಹುದು. ಆದರೆ ಅದರಲ್ಲಿ1000 ಜನರು ಸೇರಬಹುದಾಗಿದೆ. ಈ ಹಿಂದೆ 500ರಷ್ಟು ಜನ ಅಂದರೆ ಮಾತ್ರ ಶೇ.50 ಸಾಮರ್ಥ್ಯದಲ್ಲಿ ಜನಮಿತಿ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಹಾಗೇ ಮನೆ-ಮನೆ ಪ್ರಚಾರದಲ್ಲಿ 10 ಜನರ ಬದಲು 20 ಜನ ಸೇರಬಹುದು ಎಂದೂ ಚುನಾವಣಾ ಆಯೋಗ ಅನುಮತಿ ನೀಡಿದೆ. ಅಂದರೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ 20 ಜನರು ಸೇರಬಹುದಾಗಿದೆ.ಇನ್ನುಳಿದಂತೆ ಕೊವಿಡ್ 19 ನಿಯಮ ಪಾಲನೆ ಮಾಡಬೇಕಾಗಿದೆ. ರಾಜಕೀಯ ಮುಖಂಡರು ಒಳಾಂಗಣ ಸಭೆ ನಡೆಸಿದರೆ 500 ಮಂದಿ ಸೇರಬಹುದು ಎಂದು ಎಲೆಕ್ಷನ್​ ಕಮಿಷನ್ ಹೇಳಿದೆ. ಈ ಹಿಂದೆ 300 ಮಂದಿಗೆ ಮಾತ್ರ ಅನುಮತಿ ಇತ್ತು.

ಇದನ್ನೂ ಓದಿ: ಶೀಘ್ರವೇ ಚಿತ್ರಮಂದಿರದಲ್ಲಿ ಹೌಸ್​ಫುಲ್​ಗೆ ಅವಕಾಶ?; ಸಭೆಯಲ್ಲಿ ಸಿಎಂ ಕಡೆಯಿಂದ ಸಕಾರಾತ್ಮಕ ಸ್ಪಂದನೆ

Published On - 6:25 pm, Mon, 31 January 22