Video: ಬಜೆಟ್ ಅಧಿವೇಶನದ ಮೊದಲ ದಿನ ಮುಲಾಯಂ ಸಿಂಗ್ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದ ಸಚಿವೆ ಸ್ಮೃತಿ ಇರಾನಿ
ಇಂದು ಸಂಸತ್ತಿಗೆ ತಲುಪಿದ ಮುಲಾಯಂ ಸಿಂಗ್ ಯಾದವ್ ಹಾಲ್ನ್ನು ಪ್ರವೇಶಿಸುತ್ತಿದ್ದರು. ವಯಸ್ಸಾದ ಕಾರಣ ತುಂಬ ನಿಧಾನವಾಗಿ ಅಲ್ಲಿನ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಅವರನ್ನು ನೋಡುತ್ತಿದ್ದಂತೆ ಸ್ಮೃತಿ ಇರಾನಿ ಅವರ ಸಮೀಪ ತೆರಳಿದರು.
ರಾಜಕಾರಣಿಗಳು ಕೆಲವರು ಬೇರೆಬೇರೆ ಪಕ್ಷದಲ್ಲಿದ್ದರೂ, ಸೈದ್ಧಾಂತಿಕವಾಗಿ ಒಬ್ಬರನ್ನೊಬ್ಬರು, ಒಂದು ಪಕ್ಷವನ್ನು ಮತ್ತೊಂದು ಪಕ್ಷ ವಿರೋಧಿಸಿದರೂ ಕೂಡ ವೈಯಕ್ತಿಕವಾಗಿ ಸ್ನೇಹದಿಂದ ಇರುತ್ತಾರೆ. ಇನ್ನೊಂದು ಪಕ್ಷದ ಹಿರಿಯರನ್ನು ಗೌರವಿಸುತ್ತಾರೆ, ಎರಡು ಪಕ್ಷಗಳ ನಾಯಕರು ಪರಸ್ಪರ ಆದರಿಸಿಕೊಳ್ಳುತ್ತಾರೆ. ಇಂಥ ಅನೇಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಅದಕ್ಕೊಂದು ಸೇರ್ಪಡೆಯಾಗಿ ಇದೀಗ ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani )ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ರ (Mulayam Singh Yadav) ವಿಡಿಯೋವೊಂದು ವೈರಲ್ ಆಗುತ್ತಿದೆ. ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ(Budget Session) ಪ್ರಾರಂಭವಾಗಿದ್ದು, ಪರಸ್ಪರ ವಿವಿಧ ಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿ ಭೇಟಿಯಾದರು. ಹೀಗೆ ಮುಲಾಯಂ ಸಿಂಗ್ ಯಾದವ್ರನ್ನು ಭೇಟಿಯಾದ ಸ್ಮೃತಿ ಇರಾನಿ ಬಾಗಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮುಲಾಯಂ ಸಿಂಗ್ ಯಾದವ್ ಅವರು ಸ್ಮೃತಿ ಇರಾನಿ ತಲೆಯನ್ನು ಮುಟ್ಟಿ ಆಶೀರ್ವದಿಸಿದ್ದಾರೆ.
ಇಂದು ಸಂಸತ್ತಿಗೆ ತಲುಪಿದ ಮುಲಾಯಂ ಸಿಂಗ್ ಯಾದವ್ ಹಾಲ್ನ್ನು ಪ್ರವೇಶಿಸುತ್ತಿದ್ದರು. ವಯಸ್ಸಾದ ಕಾರಣ ತುಂಬ ನಿಧಾನವಾಗಿ ಅಲ್ಲಿನ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಅವರನ್ನು ನೋಡುತ್ತಿದ್ದಂತೆ ಸಮೀಪ ಧಾವಿಸಿದ ಸ್ಮೃತಿ ಇರಾನಿ ಬಾಗಿ ಮುಲಾಯಂ ಸಿಂಗ್ ಯಾದವ್ ಪಾದವನ್ನು ಸ್ಪರ್ಶಿಸಿ ಆಶೀರ್ವಾದ ಪಡೆದರು. ಅವರೂ ಕೂಡ ಅಷ್ಟೇ ಅಪ್ಯಾಯಮಾನದಿಂದ ಸ್ಮೃತಿ ತಲೆಯನ್ನು ಸವರಿದ್ದಾರೆ.
#WATCH | Samajwadi Party (SP) founder-patron and MP Mulayam Singh Yadav blesses Union Minister Smriti Irani, as she greets him at the Parliament. pic.twitter.com/3ti42DXkpa
— ANI (@ANI) January 31, 2022
ಇಂದಿನಿಂದ 2022-23ನೇ ಸಾಲಿನ ಬಜೆಟ್ ಅಧಿವೇಶನ ಶುರುವಾಗಿದ್ದು, ಮೊದಲ ದಿನ ಕೇಂದ್ರ ಹಣಕಾಸು ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ನಾಳೆ ಅವರು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಅವಧಿ ಇಂದಿನಿಂದ ಫೆ.11ರವರೆಗೆ ನಡೆಯಲಿದ್ದು, ಎರಡನೇ ಅವಧಿ ಮಾರ್ಚ್ 14ರಿಂದ ಏಪ್ರಿಲ್ 8ರ ತನಕ ಇರಲಿದೆ.
ಇದನ್ನೂ ಓದಿ: ‘ಹೃತಿಕ್ ರೋಷನ್ ಜತೆ ನೀವು ಡೇಟಿಂಗ್ ಮಾಡ್ತಾ ಇದ್ದೀರಾ?’; ನೇರ ಪ್ರಶ್ನೆಗೆ ಸಬಾ ಉತ್ತರ ಏನಿತ್ತು?