12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಗಡುವು ವಿಸ್ತರಿಸಿದ ಚುನಾವಣಾ ಆಯೋಗ

ಹನ್ನೆರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚುನಾವಣಾ ಆಯೋಗವು ಗಡುವನ್ನು ವಿಸ್ತರಿಸಿದೆ. ಈ 12 ರಾಜ್ಯಗಳಲ್ಲಿ ಎಸ್​ಐಆರ್ ನಡೆಸಲು ಈಗ ಡಿಸೆಂಬರ್ 4ರ ಬದಲಾಗಿ ಡಿಸೆಂಬರ್ 11ರವರೆಗೂ ಕಾಲಾವಕಾಶ ನೀಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಭಾನುವಾರ ಪರಿಷ್ಕರಿಸಿದೆ.

12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಗಡುವು ವಿಸ್ತರಿಸಿದ ಚುನಾವಣಾ ಆಯೋಗ
ವೋಟರ್ ಐಡಿ

Updated on: Nov 30, 2025 | 1:10 PM

ನವದೆಹಲಿ, ನವೆಂಬರ್ 30: ಹನ್ನೆರಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚುನಾವಣಾ ಆಯೋಗವು ಗಡುವನ್ನು ವಿಸ್ತರಿಸಿದೆ. ಈ 12 ರಾಜ್ಯಗಳಲ್ಲಿ ಎಸ್​ಐಆರ್ ನಡೆಸಲು ಈಗ ಡಿಸೆಂಬರ್ 4ರ ಬದಲಾಗಿ ಡಿಸೆಂಬರ್ 11ರವರೆಗೂ ಕಾಲಾವಕಾಶ ನೀಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಭಾನುವಾರ ಪರಿಷ್ಕರಿಸಿದೆ.

ಅಧಿಕೃತ ಅಧಿಸೂಚನೆಯಲ್ಲಿ, ಭಾರತದ ಚುನಾವಣಾ ಆಯೋಗವು ಎಣಿಕೆಯ ಕೊನೆಯ ದಿನಾಂಕವನ್ನು ಡಿಸೆಂಬರ್ 4 ರಿಂದ ಡಿಸೆಂಬರ್ 11 ರವರೆಗೆ ವಿಸ್ತರಿಸಿದೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್ ಪ್ರಕ್ರಿಯೆಯು ಪ್ರಸ್ತುತ ನಡೆಯುತ್ತಿದೆ.

ಡಿಸೆಂಬರ್ 9, 2025 ರಂದು ಬಿಡುಗಡೆಯಾಗಬೇಕಿದ್ದ ಕರಡು ಮತದಾರರ ಪಟ್ಟಿಯನ್ನು ಈಗ ಒಂದು ವಾರ ಮುಂದೂಡಲಾಗಿದೆ. ಕರಡು ಪಟ್ಟಿಯನ್ನು ಈಗ ಡಿಸೆಂಬರ್ 16, 2025 ರಂದು ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳ ದಿನಾಂಕವನ್ನು ಈಗ ಡಿಸೆಂಬರ್ 9 ರಿಂದ ಜನವರಿ 8, 2026 ರವರೆಗೆ, ಡಿಸೆಂಬರ್ 16, 2025 ರಿಂದ ಜನವರಿ 15, 2026 ರವರೆಗೆ ವಿಸ್ತರಿಸಲಾಗಿದೆ. ಅಂತಿಮ ಪಟ್ಟಿಯನ್ನು ಫೆಬ್ರವರಿ 7, 2026 ರಂದು ಪ್ರಕಟಿಸಲು ನಿರ್ಧರಿಸಲಾಗಿತ್ತು.

ಆದರೆ ಈಗ ಫೆಬ್ರವರಿ 14, 2026 ರಂದು ಪ್ರಕಟಿಸಲಾಗುವುದು. ಬಿಎಲ್​ಒಗಳು ತುಂಬಾ ಒತ್ತಡದಲ್ಲಿದ್ದರು, ಹೃದಯಾಘಾತಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿದ್ದವು. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗೋವಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಕೇರಳ ಮತ್ತು ರಾಜಸ್ಥಾನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿಯಲ್ಲಿ ಎಸ್​ಐಆರ್ ನಡೆಯುತ್ತಿತ್ತು.

ಮತ್ತಷ್ಟು ಓದಿ: ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋದ ಡಿಎಂಕೆ

 

ಮೊದಲು ಚುನಾವಣಾ ಆಯೋಗ ಏನು ಹೇಳಿತ್ತು?
ಮುದ್ರಣ/ತರಬೇತಿ – 2025ರ ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೆ

ಮನೆ ಮನೆಗೆ ಗಣತಿ – ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ

ಕರಡು ಮತದಾರರ ಪಟ್ಟಿಯ ಪ್ರಕಟಣೆ – ಡಿಸೆಂಬರ್ 9

ಹಕ್ಕುಗಳು ಮತ್ತು ಆಕ್ಷೇಪಣೆಯ ಅವಧಿ – ಡಿಸೆಂಬರ್ 9ರಿಂದ 2026ರ ಜನವರಿ 8ರವರೆಗೆ

ಸೂಚನೆ ಹಂತ (ವಿಚಾರಣೆ ಮತ್ತು ಪರಿಶೀಲನೆ) – ಡಿಸೆಂಬರ್ 9ರಿಂದ 2026ರ ಜನವರಿ 31ರವರೆಗೆ

ಅಂತಿಮ ಮತದಾರರ ಪಟ್ಟಿಯ ಪ್ರಕಟಣೆ – 2026ರ ಫೆಬ್ರವರಿ 7

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ