ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಸೀಸ ಕಾರಣ: ಏಮ್ಸ್ ವರದಿ ಬಹಿರಂಗ

|

Updated on: Dec 08, 2020 | 1:29 PM

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ ಸೀಸ ಲೋಹ (ಲೆಡ್) ಕಾರಣ ಎಂದು ಏಮ್ಸ್ ವರದಿ ಹೇಳಿದೆ.

ಏಲೂರಿನಲ್ಲಿ ನಿಗೂಢ ಕಾಯಿಲೆಗೆ ಸೀಸ ಕಾರಣ: ಏಮ್ಸ್ ವರದಿ ಬಹಿರಂಗ
ಅಸ್ವಸ್ಥರಾದ ಮಹಿಳೆ (ಪಿಟಿಐ ಚಿತ್ರ)
Follow us on

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಕಾಣಿಸಿಕೊಂಡ ನಿಗೂಢ ಕಾಯಿಲೆಗೆ ಸೀಸ ಲೋಹ (ಲೆಡ್) ಕಾರಣ ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ. ರೋಗಿಗಳ ರಕ್ತದ ಮಾದರಿಯಲ್ಲಿ ಸೀಸ ಮತ್ತು ನಿಕಲ್ ಪತ್ತೆಯಾಗಿದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ವರದಿ ಹೇಳಿದೆ. ಮಂಗಲಗಿರಿ ಏಮ್ಸ್ ಮೂಲಕ ರಾಜ್ಯ ಸರ್ಕಾರಕ್ಕೆ ಈ ಮಾಹಿತಿ ಸಿಕ್ಕಿದೆ ಎಂದಿದ್ದಾರೆ ರಾವ್.

ಏಲೂರು ಪ್ರದೇಶದ ಸ್ಥಳೀಯರು ಕುಡಿಯುವ ನೀರು ಮತ್ತು ಹಾಲಿನ ಮಾದರಿಯನ್ನು ಕಳುಹಿಸಿಕೊಡುವಂತೆ ದೆಹಲಿ ಏಮ್ಸ್ ತಜ್ಞರು ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ಸೀಸ ಲೋಹ ದೇಹವನ್ನು ಹೊಕ್ಕರೆ ಅದು ನ್ಯುರೊ ಟಾಕ್ಸಿಕ್ ಲಕ್ಷಣವನ್ನುಂಟು ಮಾಡುತ್ತದೆ. ಬ್ಯಾಟರಿಗಳಲ್ಲಿ ಬಳಕೆಯಾಗುವ ಈ ಲೋಹವು ಕುಡಿಯುವ ನೀರು ಮತ್ತು ಹಾಲಿನ ಮೂಲಕ ಮನುಷ್ಯರ ದೇಹ ಪ್ರವೇಶಿಸುತ್ತದೆ ಎಂದು ಏಮ್ಸ್ ಹೇಳಿದೆ.

ಈ ಲೋಹಗಳು ಹೇಗೆ ಮನುಷ್ಯರ ದೇಹ ಪ್ರವೇಶಿಸಿದವು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ. ಲೋಹಗಳನ್ನು ಪತ್ತೆಹಚ್ಚಲು ದೆಹಲಿ ಏಮ್ಸ್​ನಲ್ಲಿ ಮಾತ್ರ ಆಧುನಿಕ ವ್ಯವಸ್ಥೆ ಇದೆ.

ಬಿಗಡಾಯಿಸುತ್ತಿದೆ ಏಲೂರು ಪರಿಸ್ಥಿತಿ: ಆಸ್ಪತ್ರೆಗೆ ಆಂಧ್ರ ಸಿಎಂ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಭೇಟಿ

ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆ; 227 ಮಂದಿ ಅಸ್ವಸ್ಥ