ಕೊತ್ತಂಬರಿ ಮತ್ತು ಮೆಂತ್ಯಗೆ ಇರುವ ವ್ಯತ್ಯಾಸ ಗುರುತಿಸಿ; ರಾಹುಲ್ ಗಾಂಧಿಗೆ ಸವಾಲೊಡ್ಡಿದ ಗುಜರಾತ್ ಸಿಎಂ
ನೂತನ ಕೃಷಿ ಕಾಯ್ದೆಯನ್ನು ವಿರೋಧಿಸುವ ಮೊದಲು ರಾಹುಲ್ ಗಾಂಧಿ ಕೊತ್ತಂಬರಿ ಮತ್ತು ಮೆಂತೆ ನಡುವಿನ ವ್ಯತ್ಯಾಸ ಗುರುತಿಸಲಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಲೇವಡಿ ಮಾಡಿದ್ದಾರೆ.
ಗಾಂಧಿನಗರ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್ ಅನ್ನು ರಾಹುಲ್ ಗಾಂಧಿ ಬೆಂಬಲಿಸಿಸಿದ್ದಾರೆ. ಆದ್ರೆ ಅದಕ್ಕೂ ಮೊದಲು ರಾಹುಲ್ ಗಾಧಿ ಕೊತ್ತಂಬರಿ ಮತ್ತು ಮೆಂತ್ಯ ಬೆಳೆಯ ನಡುವಿನ ವ್ಯತ್ಯಾಸ ಗುರುತಿಸಲಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಸಾವಲು ರೂಪದಲ್ಲಿ, ಲೇವಡಿ ಮಾಡಿದ್ದಾರೆ.
ಗುಜರಾತ್ನ ಮೆಹ್ಸಾನಾದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ರೂಪಾಣಿ, ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತಗೊಂಡು ಮೂಲೆ ಗುಂಪಾಗಿದೆ. ಈಗ ರೈತರ ಹೆಸರು ಹೇಳಿಕೊಂಡು ಪ್ರತಿಭಟನೆ ನಡೆಸಿ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಜ್ಞಾನದ ಬಗ್ಗೆ ಕುತೂಹಲವಿದೆ. ಅವರಿಗೆ ನಾನು ಸವಾಲೆಸೆಯುತ್ತೇನೆ. ರಾಹುಲ್, ಕೊತ್ತಂಬರಿ ಮತ್ತು ಮೆಂತ್ಯ ಬೆಳೆಯ ನಡುವಿನ ವ್ಯತ್ಯಾಸ ಗುರುತಿಸಿ ಎಂದು ಗುಜರಾತ್ ಮುಖ್ಯಮಂತ್ರಿ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
ತಾನೂ ಮಾಡಲ್ಲ, ಮಾಡುವವರಿಗೆ ಬಿಡಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಆದರೆ, ಅವರಿಗೆ ಅಧಿಕಾರವೇ ಸಿಗಲಿಲ್ಲ. ಈಗ ಮೋದಿ ಸರ್ಕಾರ ಅದನ್ನು ಜಾರಿಗೊಳಿಸಲು ಹೊರಟರೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಜಯ್ ರೂಪಾಣಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತರ ಬಗ್ಗೆ ಹುಸಿ ಕಾಳಜಿ ತೋರಿಸುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಗುಜರಾತ್ನಲ್ಲಿ ಶೇ. 18ರಷ್ಟು ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಬಾಯಿಯಲ್ಲಿ ಹೇಳುವುದು ಬಿಟ್ಟರೆ ಕೆಲಸ ಮಾಡಿ ತೋರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ರೈತರ ಗಳಿಕೆ ದುಪ್ಪಟ್ಟು ಅಲ್ಲ; ಅರ್ಧದಷ್ಟು ಇಳಿಕೆ! ಇದು ‘ಸೂಟ್ ಬೂಟ್ ಕೀ ಸರ್ಕಾರ್’ ಕೊಡುಗೆ ಎಂದ ರಾಹುಲ್ ಗಾಂಧಿ