ನಮ್ಮ ಪಕ್ಷದ ಶೇ80 ನಾಯಕರನ್ನು ಬಂಧಿಸಲಾಗಿದೆ, ದೆಹಲಿಯಲ್ಲಿ ತುರ್ತು ಪರಿಸ್ಥಿತಿಯಂಥಾ ಸ್ಥಿತಿ ಇದೆ:ಎಎಪಿ

ಸಂಸತ್ ಸದಸ್ಯ ಸಂಜಯ್ ಸಿಂಗ್ ಮತ್ತು ಸಚಿವ ಗೋಪಾಲ್ ರೈ ಸೇರಿದಂತೆ ಸುಮಾರು 80% ಎಎಪಿ ನಾಯಕರು ಬಂಧನದಲ್ಲಿದ್ದಾರೆ. ಈ ಬಂಧನಗಳು ಕಾನೂನುಬಾಹಿರ. ಇದು ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದು ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ನಮ್ಮ ಪಕ್ಷದ ಶೇ80 ನಾಯಕರನ್ನು ಬಂಧಿಸಲಾಗಿದೆ, ದೆಹಲಿಯಲ್ಲಿ ತುರ್ತು ಪರಿಸ್ಥಿತಿಯಂಥಾ ಸ್ಥಿತಿ ಇದೆ:ಎಎಪಿ
ಎಎಪಿ ಪ್ರತಿಭಟನೆ

Updated on: Feb 27, 2023 | 5:15 PM

2021-22ರ ಮದ್ಯದ ನೀತಿಯಲ್ಲಿನ(liquor policy) ಅಕ್ರಮಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಬಂಧನದ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಸಲು ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತರು ಸೋಮವಾರ ಪಕ್ಷದ ಪ್ರಧಾನ ಕಚೇರಿ ಹೊರಗೆ ಜಮಾಯಿಸಿದ್ದರು. ಆದರೆಅದಕ್ಕೆ ಅವಕಾಶ ನೀಡುವ ಯಾವುದೇ ಯೋಜನೆ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಎಎಪಿ ಮತ್ತು ಬಿಜೆಪಿ ನಡುವಿನ ಜಗಳವನ್ನು ಹೆಚ್ಚಿಸಿದ ಬಂಧನದ ವಿರುದ್ಧ ಪ್ರತಿಭಟನೆಗಳಿಗೆ ಎಎಪಿ ಕರೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆಗಾಗಿ ಸುಮಾರು 1,500 ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿ ಅಥವಾ 12 ಕಂಪನಿಗಳನ್ನು ನಿಯೋಜಿಸಲಾಗಿದೆ.

ಸಂಸತ್ ಸದಸ್ಯ ಸಂಜಯ್ ಸಿಂಗ್ ಮತ್ತು ಸಚಿವ ಗೋಪಾಲ್ ರೈ ಸೇರಿದಂತೆ ಸುಮಾರು 80% ಎಎಪಿ ನಾಯಕರು ಬಂಧನದಲ್ಲಿದ್ದಾರೆ. ಈ ಬಂಧನಗಳು ಕಾನೂನುಬಾಹಿರ. ಇದು ತುರ್ತು ಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದು ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಮನೀಶ್ ಸಿಸೋಡಿಯಾ ಅವರನ್ನು ಹೊರತುಪಡಿಸಿ ಎಎಪಿಯ ಸುಮಾರು 80% ನಾಯಕರನ್ನು ಬಂಧಿಸಲಾಗಿದೆ. ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ವಶಕ್ಕೆ ತೆಗೆದುಕೊಳ್ಳುವುದು ಎಂದರೆ ಕೆಲವು ಗಂಟೆಗಳ ಕಾಲ ಮಾತ್ರ ಇರುತ್ತದೆ.ಆದರೆ ಎಎಪಿ ನಾಯಕರನ್ನು 24 ಗಂಟೆಗಳ ಕಾಲ ವಶದಲ್ಲಿರಿಸಲಾಗಿದೆ ಇದು ಕಾನೂನುಬಾಹಿರ ಎಂದಿದ್ದಾರೆ ಸೌರಭ್ ಭಾರದ್ವಾಜ್.


ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಯಾವ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ ಎಂದು ವಿವರಿಸಬೇಕು. ಎಎಪಿ ನಾಯಕರು ರಾತ್ರಿಯಿಡೀ ಪೊಲೀಸ್ ಕಸ್ಟಡಿಯಲ್ಲಿ ಕಳೆದರು. ನಮ್ಮ ಜಿಲ್ಲಾ ಉಸ್ತುವಾರಿ ಹಾಗೂ ಸ್ಥಳೀಯ ಮುಖಂಡರನ್ನೂ ಬಂಧಿಸಲಾಗಿದೆ. ಇದು ತುಂಬಾ ಅಪಾಯಕಾರಿ ಸಂಕೇತ. ಇದು ತುರ್ತುಪರಿಸ್ಥಿತಿಯ ಸಮಯದಲ್ಲಿ ಮಾಡಿದ್ದನ್ನು ಪ್ರತಿಬಿಂಬಿಸುತ್ತದೆ. ಯಾವ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ನಾವು ಕೇಂದ್ರ ಸರ್ಕಾರದಿಂದ ಉತ್ತರವನ್ನು ಕೇಳುತ್ತೇವೆ ಎಂದಿದ್ದಾರೆ ಭಾರದ್ವಾಜ್.

ಬಂಧನಕ್ಕೂ ಮುನ್ನ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದಂತೆ ಭಾನುವಾರ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಬಂಧನಕ್ಕೊಳಗಾದವರಲ್ಲಿ ಸಿಂಗ್ ಮತ್ತು ರಾಯ್ ಸೇರಿದ್ದಾರೆ. ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಎಎಪಿ ಹೇಳಿಕೊಂಡಿದೆ.


ದೆಹಲಿ ಪೊಲೀಸರಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: Road shows in Karnataka: ಬೆಳಗಾವಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರೆ ಸಿದ್ದರಾಮಯ್ಯ ಜಮಖಂಡಿಯಲ್ಲಿ ನಡೆಸಿದರು!

ಸಿಸೋಡಿಯಾ ರೌಸ್ ಅವೆನ್ಯೂ ನ್ಯಾಯಾಲಯವನ್ನು ತಲುಪಿದ್ದು ಮತ್ತು ನ್ಯಾಯಾಧೀಶ ಎಂಕೆ ನಾಗ್ಪಾಲ್ ಅವರ ಮುಂದೆ ಹಾಜರುಪಡಿಸಲಾಯಿತು. ಸಿಸೋಡಿಯಾ ಅವರನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಸಿಬಿಐ ಕೋರಿದ್ದು, ಶೀಘ್ರದಲ್ಲೇ ಆದೇಶ ನೀಡಲಾಗುವುದು.

ಬಿಜೆಪಿ ಪ್ರಧಾನ ಕಚೇರಿ ಮತ್ತು ಎಎಪಿ ಕಚೇರಿ ಇರುವ ಡಿಡಿಯು ಮಾರ್ಗ್‌ಗೆ ಹೋಗುವ ಹಲವು ರಸ್ತೆಗಳಲ್ಲಿ ದೆಹಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Mon, 27 February 23