ಉತ್ತರಾಖಂಡ್: ಹೆಲಿಕಾಪ್ಟರ್​ ಅಪಘಾತದಲ್ಲಿ ಮೃತಪಟ್ಟಿದ್ದ ಪೈಲಟ್​ ರಾಜ್​ವೀರ್ ತಾಯಿ ಹೃದಯಾಘಾತದಿಂದ ಸಾವು

ಕೇದಾರನಾಥದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದ ಪೈಲಟ್ ರಾಜ್​ವೀರ್ ಸಿಂಗ್ ಚೌಹಾಣ್ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದಾಗಿನಿಂದ ದುಃಖದಿಂದ ಒಳಗೊಳಗೆ ಕುಸಿದು ಹೋಗಿದ್ದ ತಾಯಿ ಮಗನ ಹಿಂದೆಯೇ ಪ್ರಯಾಣ ಬೆಳೆಸಿದ್ದಾರೆ. ಪೈಲಟ್ ರಾಜ್‌ವೀರ್ ಸಾವನ್ನಪ್ಪಿದ ಕೇವಲ 13 ದಿನಗಳ ನಂತರ, ಅವರ ತಾಯಿ ಕೂಡ ಮಗನ ಹಿಂದೆಯೇ ಹೋಗಿದ್ದಾರೆ.ಮಗನ ಸಾವಿನ ಆಘಾತದಿಂದ ರಾಜ್‌ವೀರ್ ಅವರ ತಾಯಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ರಾಜ್‌ವೀರ್ ನಿಧನದ ನಂತರ ಅವರ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಲಾಗುತ್ತಿದೆ. ಅವರು ಶನಿವಾರ (ಜೂನ್ 28) ನಿಧನರಾದರು.

ಉತ್ತರಾಖಂಡ್: ಹೆಲಿಕಾಪ್ಟರ್​ ಅಪಘಾತದಲ್ಲಿ ಮೃತಪಟ್ಟಿದ್ದ ಪೈಲಟ್​ ರಾಜ್​ವೀರ್ ತಾಯಿ ಹೃದಯಾಘಾತದಿಂದ ಸಾವು
ಉತ್ತರಾಖಂಡ್ ಪೈಲಟ್
Image Credit source: India Today

Updated on: Jun 29, 2025 | 2:13 PM

ಕೇದಾರನಾಥ, ಜೂನ್ 29: ಕೇದಾರನಾಥದಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತ(Helicopter Crash)ದಲ್ಲಿ ಸಾವನ್ನಪ್ಪಿದ್ದ ಪೈಲಟ್ ರಾಜ್​ವೀರ್ ಸಿಂಗ್ ಚೌಹಾಣ್ ಅವರ ತಾಯಿ ಇಹಲೋಕ ತ್ಯಜಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿದಾಗಿನಿಂದ ದುಃಖದಿಂದ ಒಳಗೊಳಗೆ ಕುಸಿದು ಹೋಗಿದ್ದ ತಾಯಿ ಮಗನ ಹಿಂದೆಯೇ ಪ್ರಯಾಣ ಬೆಳೆಸಿದ್ದಾರೆ. ಪೈಲಟ್ ರಾಜ್‌ವೀರ್ ಸಾವನ್ನಪ್ಪಿದ್ದ ಕೇವಲ 13 ದಿನಗಳ ನಂತರ ತಾಯಿ ಕೂಡ ಮೃತಪಟ್ಟಿದ್ದಾರೆ.

ಮಗನ ಸಾವಿನ ಆಘಾತದಿಂದ ರಾಜ್‌ವೀರ್ ಅವರ ತಾಯಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ರಾಜ್‌ವೀರ್ ನಿಧನದ ನಂತರ ಅವರ ಆರೋಗ್ಯ ಹದಗೆಡುತ್ತಿದೆ ಎಂದು ಹೇಳಲಾಗುತ್ತಿದೆ. ಅವರು ಶನಿವಾರ (ಜೂನ್ 28) ನಿಧನರಾದರು.

ವಾಸ್ತವವಾಗಿ, ಉತ್ತರಾಖಂಡ್ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ರಾಜ್‌ವೀರ್ ಸಿಂಗ್ ಪೃತಪಟ್ಟು 13ನೇ ದಿನಕ್ಕೆ ತಾಯಿ ವಿಜಯ್ ಲಕ್ಷ್ಮಿ ಚೌಹಾಣ್ ಹೃದಯಾಘಾತದಿಂದ ನಿಧನರಾಗದ್ದಾರೆ.ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು, ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತಾಯಿ ವಿಜಯ್ ಲಕ್ಷ್ಮಿ ಚೌಹಾಣ್ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಜೂನ್ 15 ರಂದು ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಜೈಪುರದ ಪೈಲಟ್ ರಾಜ್‌ವೀರ್ ಸಿಂಗ್ ಸೇರಿದಂತೆ 7 ಜನರು ಸಾವನ್ನಪ್ಪಿದ್ದರು.

ಮತ್ತಷ್ಟು ಓದಿ:

Helicopter Crash in Uttarkashi: ಉತ್ತರಾಖಂಡ: ಉತ್ತರಕಾಶಿ ಬಳಿ ಹೆಲಿಕಾಪ್ಟರ್ ಪತನ, 5 ಮಂದಿ ಸಾವು

 

ಖಾಸಗಿ ವಿಮಾನಯಾನ ಕಂಪನಿಯಲ್ಲಿ ಪೈಲಟ್
ರಾಜ್‌ವೀರ್ ಸಿಂಗ್ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತರಾದರು, ನಂತರ ಅವರು ಖಾಸಗಿ ವಿಮಾನಯಾನ ಕಂಪನಿಯಲ್ಲಿ ಪೈಲಟ್ ಆಗಿದ್ದರು. ಜೂನ್ 15 ರಂದು, ರಾಜ್‌ವೀರ್ ಸಿಂಗ್ ಹೆಲಿಕಾಪ್ಟರ್ ಚಲಾಯಿಸುತ್ತಿದ್ದಾಗ, ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅವರು ಇತರ ಏಳು ಜನರೊಂದಿಗೆ ಸಾವನ್ನಪ್ಪಿದರು. ಪೈಲಟ್ ರಾಜ್‌ವೀರ್ 4 ತಿಂಗಳ ಹಿಂದೆ ಅವಳಿ ಗಂಡು ಮಕ್ಕಳ ತಂದೆಯಾಗಿದ್ದರು.

ಮಾಹಿತಿಯ ಪ್ರಕಾರ, ಶನಿವಾರ ಬೆಳಗ್ಗೆ ಶಾಸ್ತ್ರಿ ನಗರ ಪ್ರದೇಶದ ರಾಣಾ ಕಾಲೋನಿಯಲ್ಲಿ ಮನೆಯ ಹೊರಗೆ ಕುಟುಂಬ ಸದಸ್ಯರೊಂದಿಗೆ ರಾಜವೀರ್ ಅವರ ತಾಯಿ ವಿಜಯ ಲಕ್ಷ್ಮಿ ಕುಳಿತಿದ್ದರು. ಈ ಸಮಯದಲ್ಲಿ, ಅವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು, ನಂತರ ಕುಟುಂಬ ಮತ್ತು ಕಾಲೋನಿ ಜನರು ಅವರನ್ನು ತಕ್ಷಣವೇ ಕಣ್ವಾಟಿಯಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:10 pm, Sun, 29 June 25