Telangana: ತೆಲಂಗಾಣದ ಆರು ಪ್ರಮುಖ ಮೆಡಿಕಲ್ ಗ್ರೂಪ್ ಮೇಲೆ ಇಡಿ ದಾಳಿ

|

Updated on: Jun 21, 2023 | 2:44 PM

ಮಹಬೂಬ್‌ನಗರ ಮತ್ತು ರಂಗಾರೆಡ್ಡಿ ಜಿಲ್ಲೆಗಳ ಎಸ್‌ವಿಎಸ್ ವೈದ್ಯಕೀಯ ಕಾಲೇಜಿನಲ್ಲಿಯೂ ಶೋಧ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ರಾಜ್ಯಾದ್ಯಂತ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.

Telangana: ತೆಲಂಗಾಣದ ಆರು ಪ್ರಮುಖ ಮೆಡಿಕಲ್ ಗ್ರೂಪ್ ಮೇಲೆ ಇಡಿ ದಾಳಿ
ಜಾರಿ ನಿರ್ದೇಶನಾಲಯ
Follow us on

ತೆಲಂಗಾಣದ (Telangana) ಆರು ಪ್ರಮುಖ ಮೆಡಿಕಲ್ ಗ್ರೂಪ್, ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ (Enforcement Directorate) ಬುಧವಾರ ದಾಳಿ ನಡೆಸಿದೆ. ಶಶಿಧರ್ ಕಾಮಿನೇನಿ, ವಸುಂಧರಾ ಕಾಮಿನೇನಿ, ಸೂರ್ಯನಾರಾಯಣ ಕಾಮಿನೇನಿ ಮತ್ತು ಗಾಯತ್ರಿ ಕಾಮಿನೇನಿ ಸೇರಿದಂತೆ ಕಾಮಿನೇನಿ ಸಮೂಹದ ಎಂಡಿ ಮತ್ತು ಅಧ್ಯಕ್ಷರ ನಿವಾಸಗಳನ್ನು ಶೋಧಿಸಲಾಗುತ್ತಿದೆ ಎಂದು ಟಿವಿ9 ತೆಲುಗು ವರದಿ ಮಾಡಿದೆ. ಮಹಬೂಬ್‌ನಗರ ಮತ್ತು ರಂಗಾರೆಡ್ಡಿ ಜಿಲ್ಲೆಗಳ ಎಸ್‌ವಿಎಸ್ ವೈದ್ಯಕೀಯ ಕಾಲೇಜಿನಲ್ಲಿಯೂ ಶೋಧ ನಡೆಯುತ್ತಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ರಾಜ್ಯಾದ್ಯಂತ ಒಟ್ಟು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಶಮೀರ್‌ಪೇಟೆಯ ಮೆಡಿಸಿಟಿ ಇನ್‌ಸ್ಟಿಟ್ಯೂಟ್‌ನಲ್ಲೂ ಇಡಿ ದಾಳಿ ನಡೆಯುತ್ತಿದೆ. ಇದಲ್ಲದೆ, ಫಿಲಂ ನಗರದಲ್ಲಿರುವ ಪ್ರತಿಮಾ ಕಾರ್ಪೊರೇಟ್ ಕಚೇರಿಯಲ್ಲಿ ತನಿಖೆ ನಡೆಯುತ್ತಿದೆ. ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಲು ಎರಡು ತಂಡಗಳಾಗಿ ಬಂದಿದ್ದು, ಪ್ರತಿಮಾ ಗ್ರೂಪ್‌ಗೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳನ್ನು ಅವರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ಜಾರಿ ನಿರ್ದೇಶನಾಲಯ ಹಲವು ಬಿಆರ್‌ಎಸ್ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ಅವರನ್ನು ವಿಚಾರಣೆಗೊಳಪಡಿಸಲು ಇಡಿ ನೋಟಿಸ್ ಜಾರಿ ಮಾಡಿದೆ. ಬುಧವಾರ ಬಶೀರ್ ಬಾಗ್‌ನಲ್ಲಿರುವ ಇಡಿ ಕಚೇರಿಯಿಂದ ಇಡಿ ಅಧಿಕಾರಿಗಳು 11 ತಂಡಗಳಲ್ಲಿ ಹೊರಟಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಹಾರ ಸಿಎಂಗೆ ಕೊಲೆ ಬೆದರಿಕೆಯೊಡ್ಡಿದ ವ್ಯಕ್ತಿ

ಹೈದರಾಬಾದ್ ಜೊತೆಗೆ ನಲ್ಗೊಂಡ, ರಂಗಾರೆಡ್ಡಿ, ಮಹೆಬೂಬ್‌ನಗರ, ಮೇಡ್ಚಲ್ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಇಡಿ ದಾಳಿ ನಡೆಯುವ ಸಾಧ್ಯತೆ ಇದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:38 pm, Wed, 21 June 23