ದೆಹಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಹಾರ ಸಿಎಂಗೆ ಕೊಲೆ ಬೆದರಿಕೆಯೊಡ್ಡಿದ ವ್ಯಕ್ತಿ
ಆರೋಪಿ ಮದ್ಯವ್ಯಸನಿಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಅವರ ಕುಟುಂಬವನ್ನು ಸಂಪರ್ಕಿಸಿದ್ದೇವೆ. ಮದ್ಯವ್ಯಸನಿಯಾಗಿರುವ ಈತ ನಿನ್ನೆ ರಾತ್ರಿಯಿಂದ ಮದ್ಯಪಾನ ಮಾಡುತ್ತಿದ್ದ...
ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ (Union Home Minister )ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನು ಕೊಲ್ಲುವುದಾಗಿ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ್ದಾನೆ. ದೆಹಲಿ ಪೊಲೀಸರ ಹೊರ ಜಿಲ್ಲಾ ಪೊಲೀಸರಿಗೆ ಬುಧವಾರ ಎರಡು ಪಿಸಿಆರ್ ಕರೆಗಳು ಬಂದಿದ್ದು, ಈ ವ್ಯಕ್ತಿ ಕೊಲೆ ಬೆದರಿಕೆಯೊಡ್ಡಿದ್ದಾನೆ. ಕರೆ ಮಾಡಿದವನ ಪತ್ತೆಗೆ ತಂಡವನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿದ್ದ ದೆಹಲಿಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಮದ್ಯವ್ಯಸನಿಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಅವರ ಕುಟುಂಬವನ್ನು ಸಂಪರ್ಕಿಸಿದ್ದೇವೆ. ಮದ್ಯವ್ಯಸನಿಯಾಗಿರುವ ಈತ ನಿನ್ನೆ ರಾತ್ರಿಯಿಂದ ಮದ್ಯಪಾನ ಮಾಡುತ್ತಿದ್ದ. ಸದ್ಯ ಆತ ಮನೆಯಲ್ಲಿಲ್ಲ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Delhi | The man who made threatening calls to kill the Prime Minister, Union Home Minister and Bihar CM has been identified as Sudheer Sharma, a resident of Madipur. The accused’s family says that he is a habitual drinker. The police are trying to locate him: Police
— ANI (@ANI) June 21, 2023
ಎಎನ್ಐ ಸುದ್ದಿಸಂಸ್ಥೆ ಪ್ರಕಾರ, ದೆಹಲಿ ಪೊಲೀಸರಿಗೆ ಎರಡು ಕರೆಗಳು ಬಂದಿವೆ. ಇದರಲ್ಲಿ ಮೊದಲ ಕರೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಎರಡನೇ ಕರೆಯಲ್ಲಿ ಕರೆ ಮಾಡಿದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಫೋನ್ ಕರೆ ನಂತರ ದೆಹಲಿ ಪೊಲೀಸರು ಸಂಪೂರ್ಣ ಅಲರ್ಟ್ ಮೋಡ್‌ನಲ್ಲಿ ಬಂದಿದ್ದಾರೆ.
ಇದನ್ನೂ ಓದಿ: Elon Musk: ಪ್ರಧಾನಿ ಮೋದಿಗೆ ಭಾರತದ ಬಗ್ಗೆ ಎಷ್ಟೊಂದು ಕಾಳಜಿ ಇದೆ, ನಾನು ಅವರ ಅಭಿಮಾನಿ ಎಂದ ಎಲಾನ್ ಮಸ್ಕ್
ಮಾರ್ಚ್ನಲ್ಲೂ ಬೆದರಿಕೆಗಳು ಬಂದಿದ್ದವು
ಮಾರ್ಚ್ 22 ರಂದು ನಿತೀಶ್ ಕುಮಾರ್ ಅವರಿಗೆ ವಾಟ್ಸಾಪ್ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಬೆದರಿಕೆ ಹಾಕಿದ್ದ ಆರೋಪಿಯನ್ನು ಅಂಕಿತ್ ಮಿಶ್ರಾ ಎಂದು ಗುರುತಿಸಲಾಗಿದೆ. ಬಿಹಾರ ಪೊಲೀಸರು ಮತ್ತು ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಈ ಪ್ರಕರಣದ ಆರೋಪಿ ಯುವಕನನ್ನು ಗುಜರಾತ್‌ನ ಸೂರತ್‌ನಿಂದ ಬಂಧಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)
Published On - 1:01 pm, Wed, 21 June 23