ESIC ಸದಸ್ಯರ ನಿರುದ್ಯೋಗ ಭತ್ಯೆ, ಮತ್ತಿತರ ಸವಲತ್ತಿನ ಬಗ್ಗೆ ನಿಮಗೆ ಮಾಹಿತಿ ಇದೆಯಾ?

|

Updated on: May 01, 2021 | 6:31 PM

ಕಾರ್ಮಿಕ ರಾಜ್ಯ ವಿಮಾ ನಿಗಮ (ESIC)ದಿಂದ ಚಂದಾದಾರರಿಗೆ ಕೋವಿಡ್-19 ಸಂದರ್ಭದ ಇನ್ಷೂರೆನ್ಸ್, ನಿರುದ್ಯೋಗ ಭತ್ಯೆ ಜತೆಗೆ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನಾ ಅಡಿಯಲ್ಲಿ ದೊರೆಯುವ ಪರಿಹಾರಗಳ ಬಗ್ಗೆ ತಿಳಿಯಿರಿ.

ESIC ಸದಸ್ಯರ ನಿರುದ್ಯೋಗ ಭತ್ಯೆ, ಮತ್ತಿತರ ಸವಲತ್ತಿನ ಬಗ್ಗೆ ನಿಮಗೆ ಮಾಹಿತಿ ಇದೆಯಾ?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೋವಿಡ್​-19 ಪಾಸಿಟಿವ್ ಬಂದು, ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದ ಪಕ್ಷದಲ್ಲಿ 91 ದಿನಗಳ ತನಕ ಅನಾರೋಗ್ಯದ ಅನುಕೂಲಗಳನ್ನು ಪಡೆಯಬಹುದು ಎಂದು ಕಾರ್ಮಿಕ ರಾಜ್ಯ ವಿಮಾ ನಿಗಮ (ESIC) ಚಂದಾದಾರರಿಗೆ ನೆನಪು ಮಾಡಿದೆ. “ಇನ್ಷೂರ್ಡ್ ಆದ ವ್ಯಕ್ತಿಗೆ ಕೋವಿಡ್​- 19 ಆಗಿ, ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲದ ಪಕ್ಷದಲ್ಲಿ ಆಯಾ ವ್ಯಕ್ತಿಗೆ ಇರುವ ಸವಲತ್ತಿನ ಪ್ರಕಾರ ಅನಾರೋಗ್ಯ ಅವಧಿಯ ಅನುಕೂಲಗಳನ್ನು ಪಡೆದುಕೊಳ್ಳಬಹುದು. ಅನಾರೋಗ್ಯದ ಅನುಕೂಲ ಎಂದು 91 ದಿನಗಳ ಅವಧಿಗೆ ಆ ಕಾರ್ಮಿಕ ಪಡೆಯುತ್ತಿದ್ದ ಸರಾಸರಿ ದಿನಗೂಲಿಯ ಶೇ 70ರಷ್ಟನ್ನು ಪಾವತಿ ಮಾಡಲಾಗುತ್ತದೆ, ” ಎಂದು ಕಾರ್ಮಿಕ ಸಚಿವಾಲಯದಿಂದ ನಡೆಯುವ ಇಎಸ್​ಐಸಿ ತಿಳಿಸಿದೆ.

ಅಂದಹಾಗೆ, ಇಎಸ್​ಐಸಿ ಚಂದಾದಾರರು ನಿರುದ್ಯೋಗ ಸಂದರ್ಭದಲ್ಲಿನ ಅನುಕೂಲಗಳನ್ನು ಸಹ ಪಡೆಯಬಹುದು. ಆ ವ್ಯಕ್ತಿಗೆ ಇದ್ದ ದಿನ ಗಳಿಕೆಯಲ್ಲಿ ಶೇ 50ರಷ್ಟನ್ನು ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನಾ (ABVKY) ಅಡಿಯಲ್ಲಿ ನೀಡಲಾಗುತ್ತದೆ. “ಒಂದು ವೇಳೆ ಗಾಯಾಳು ವ್ಯಕ್ತಿಯು ನಿರುದ್ಯೋಗಿಯಾದಲ್ಲಿ ಅಟಲ್ ಬೀಮಿತ್ ವ್ಯಕ್ತಿ ಕಲ್ಯಾಣ್ ಯೋಜನಾ (ABVKY) ಅಡಿಯಲ್ಲಿ ಪರಿಹಾರ ಪಡೆಯಬಹುದು. ಆತ ಅಥವಾ ಆಕೆ ಗಳಿಸುತ್ತಿದ್ದ ಸರಾಸರಿ ದಿನದ ಆದಾಯದ ಶೇ 50ರಷ್ಟನ್ನು ಗರಿಷ್ಠ 90 ದಿನಗಳ ತನಕ ನೀಡಲಾಗುತ್ತದೆ,” ಎಂದು ಇಎಸ್​ಐಸಿಯಿಂದ ತಿಳಿಸಲಾಗಿದೆ. ಈ ಸವಲತ್ತನ್ನು ಪಡೆದುಕೊಳ್ಳುವುದಕ್ಕೆ ಚಂದಾದಾರರಾದ ಇನ್ಷೂರ್ಡ್ ವ್ಯಕ್ತಿ ಆನ್​ಲೈನ್ ಮೂಲಕ ಕ್ಲೇಮ್ ಮಾಡಬೇಕಾಗುತ್ತದೆ.

ಇಎಸ್​ಐಸಿ ಅಡಿಯಲ್ಲಿ ಇನ್ಷೂರ್ಡ್ ಆದ ವ್ಯಕ್ತಿಯನ್ನು ಒಂದು ವೇಳೆ ಕೆಲಸದಿಂದ ತೆಗೆದಲ್ಲಿ ಅಥವಾ ಕೈಗಾರಿಕೆ/ಸಂಸ್ಥೆಯಲ್ಲಿ ಕೈಗಾರಿಕೆ ವ್ಯಾಜ್ಯ ಕಾಯ್ದೆ, 1947ರ ಅಡಿಯಲ್ಲಿ ಮುಚ್ಚಿದರೆ ಕೆಲವು ಷರತ್ತುಗಳ ಆಧಾರದ ಮೇಲೆ ಎರಡು ವರ್ಷಗಳ ಅವಧಿ ತನಕ ನಿರುದ್ಯೋಗ ಭತ್ಯೆಯನ್ನು ಪಡೆಯಬಹುದಾಗಿರುತ್ತದೆ. “ಇನ್ಷೂರ್ಡ್ ವ್ಯಕ್ತಿಯು ಮೃತಪಟ್ಟಲ್ಲಿ ಅಂತ್ಯಸಂಸ್ಕಾರದ ವೆಚ್ಚಕ್ಕಾಗಿ 15,000 ರೂಪಾಯಿಯನ್ನು ಕುಟುಂಬದ ಜೀವಂತ ಹಿರಿಯ ಸದಸ್ಯರಿಗೆ ನೀಡಲಾಗುತ್ತದೆ,” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಇಎಸ್​ಐ- ಆಯುಷ್ಮಾನ್ ಭಾರತ್ ಪಿಎಂಜೆಎವೈ ಒಗ್ಗೂಡಿಸಿದ ಕೇಂದ್ರ; 1.35 ಕೋಟಿ ಜನರಿಗೆ ಅನುಕೂಲ

(Employees State Insurance Corporation (ESIC) insurance, unemployment allowance and other benefits to it’s subscribers are mentioned here)