ಇಎಸ್​ಐ- ಆಯುಷ್ಮಾನ್ ಭಾರತ್ ಪಿಎಂಜೆಎವೈ ಒಗ್ಗೂಡಿಸಿದ ಕೇಂದ್ರ; 1.35 ಕೋಟಿ ಜನರಿಗೆ ಅನುಕೂಲ

ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಅನ್ನು ಆಯುಷ್ಮಾನ್ ಭಾರತ್ ಜತೆಗೆ ಒಗ್ಗೂಡಿಸಲಾಗಿದೆ. ಇದರಿಂದ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ 113 ಜಿಲ್ಲೆಗಳಲ್ಲಿ 1.35 ಲೋಟಿ ಜನರಿಗೆ ಅನುಕೂಲ ಆಗಲಿದೆ.

ಇಎಸ್​ಐ- ಆಯುಷ್ಮಾನ್ ಭಾರತ್ ಪಿಎಂಜೆಎವೈ ಒಗ್ಗೂಡಿಸಿದ ಕೇಂದ್ರ; 1.35 ಕೋಟಿ ಜನರಿಗೆ ಅನುಕೂಲ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Mar 12, 2021 | 2:51 PM

ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ (ಇಎಸ್​ಐ) ಅನ್ನು ಆಯುಷ್ಮಾನ್ ಭಾರತ್ ಪಿಎಂಜೆಎವೈ ಜತೆ ಒಟ್ಟು ಮಾಡುವುದಾಗಿ ಕೇಂದ್ರ ಕಾರ್ಮಿಕ ಇಲಾಖೆ ಘೋಷಣೆ ಮಾಡಿದೆ. ಇದರಿಂದ ನಾಲ್ಕು ರಾಜ್ಯಗಳ- ಕರ್ನಾಟಕ, ಛತ್ತೀಸ್​ಗಢ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ 113 ಜಿಲ್ಲೆಗಳ 1.35 ಕೋಟಿ ಜನರಿಗೆ ಇದರಿಂದ ಸಹಾಯ ಆಗುತ್ತದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ (ಕ್ಯಾಶ್​ಲೆಸ್) ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. “ಇಎಸ್​ಐಸಿ ಒಗ್ಗೂಡುವುದರಿಂದ ಇಂಥ ಜಿಲ್ಲೆಗಳಲ್ಲಿ ಇರುವ 1.35 ಕೋಟಿ ಇಎಸ್​ಐ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳ ಮೂಲಕ ನಗದುರಹಿತ ಚಿಕಿತ್ಸೆಯು ದೊರೆಯುತ್ತದೆ. ಇದಕ್ಕೆ ಯಾವ ರೆಫರಲ್ ಅಗತ್ಯ ಇಲ್ಲ,” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫಲಾನುಭವಿಗಳು ಇಎಸ್ಐಸಿ ಇ-ಪೆಹಚಾನ್ ಕಾರ್ಡ್ ಅಥವಾ ಹೆಲ್ತ್ ಪಾಸ್​ಬುಕ್ ಹಾಗೂ ಜತೆಗೆ ಆಧಾರ್ ಕಾರ್ಡ್ ಸಹ ತೆಗೆದುಕೊಂಡು ಹೋಗಬೇಕು. 113 ಜಿಲ್ಲೆಗಳಲ್ಲಿ ಯಾವ್ಆವ ಆಸ್ಪತ್ರೆಗಳು ಒಳಗೊಂಡಿವೆ ಎಂಬುದರ ಮಾಹಿತಿ ಇಎಸ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ. “ಪಿಎಂ- ಜೆಎವೈ ಫಲಾನುಭವಿಗಳು ಸಹ ಕಡಿಮೆ ಬಳಕೆ ಆಗುವ ಬಿಹಾರ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶದ 15 ಇಎಸ್​ಐಸಿ ಆಸ್ಪತ್ರೆ/ವೈದ್ಯಕೀಯ ಕಾಲೇಜುಗಳಲ್ಲಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ದೇಶದಲ್ಲಿ ಒಟ್ಟಾರೆಯಾಗಿ 1520 ಇಎಸ್​ಐ ಡಿಸ್ಪೆನ್ಸರಿಗಳು ಮತ್ತು 159 ಆಸ್ಪತ್ರೆಗಳು ಇವೆ. ಅವುಗಳಲ್ಲಿ 45 ಡಿಸ್ಪೆನ್ಸರಿಗಳನ್ನು ನೇರವಾಗಿ ಇಎಸ್​ಐಸಿ ನಡೆಸುತ್ತದೆ. ಉಳಿದವು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುತ್ತವೆ.

ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು 1. ಇಎಸ್​ಐ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಗಳು ದೊರೆಯುತ್ತವೆ. 2. ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಫಲಾನುಭವಿಗಳಿಗೆ ಇಎಸ್​ಐಸಿ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಆರೋಗ್ಯ ವ್ಯವಸ್ಥೆಗಳು ಸಿಗುತ್ತವೆ. 3. ಇಎಸ್​ಐಸಿ ಫಲಾನುಭವಿಗಳಿಗೆ ಇಎಸ್​ಐಎಸ್ ಕಾರ್ಡ್ ಮೂಲಕ ಮಾತ್ರ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ. 4. ಅದೇ ರೀತಿ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಫಲಾನುಭವಿಗಳು ಇಎಸ್​ಐಸಿ ಅಡಿಯಲ್ಲಿ ಬರುವ ಆಸ್ಪತ್ರೆಗಳು ಆರೋಗ್ಯ ವ್ಯವಸ್ಥೆ ಅನುಕೂಲಗಳನ್ನು ಪಡೆಯಬಹುದು.

ಈ ಎಲ್ಲ ಸೇವೆಗಳಿಗಾಗಿ ಇಎಸ್​ಐ ಇ-ಐಡಿ ಕಾರ್ಡ್ ಅಥವಾ ಹೆಲ್ತ್ ಕಾರ್ಡ್ ಅಥವಾ ಆಧಾರ್ ಅಗತ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಟೋಲ್ ಫ್ರೀ ಸಹಾಯವಾಣಿ 1800 112 526/1800 113 839 ಸಂಪರ್ಕಿಸಬಹುದು. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವರ್ ನವದೆಹಲಿಯಲ್ಲಿ ಈ ಯೋಜನೆಗಳ ಒಗ್ಗೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ಆಯುಷ್ಮಾನ್ ಭಾರತ್: 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ ಗುರಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್