GST revenue collection: 2021ರ ಏಪ್ರಿಲ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಜಿಎಸ್​ಟಿ 1.41 ಲಕ್ಷ ಕೋಟಿ ರೂ. ಸಂಗ್ರಹ

2021ರ ಏಪ್ರಿಲ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮೊತ್ತದ ಜಿಎಸ್​ಟಿ ಆದಾಯ 1.41 ಲಕ್ಷ ಕೋಟಿ ರೂಪಾಯಿ ಸಂಗ್ರಹ ಸರ್ಕಾರಕ್ಕೆ ಆಗಿದೆ.

GST revenue collection: 2021ರ ಏಪ್ರಿಲ್​ನಲ್ಲಿ ಸಾರ್ವಕಾಲಿಕ ಗರಿಷ್ಠ ಜಿಎಸ್​ಟಿ 1.41 ಲಕ್ಷ ಕೋಟಿ ರೂ. ಸಂಗ್ರಹ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 01, 2021 | 5:36 PM

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಆದಾಯ ಸಂಗ್ರಹವು 2021ರ ಏಪ್ರಿಲ್​ನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಮಾಡಿದೆ. ಆ ಮೂಲಕ ಮತ್ತೊಂದು ಎತ್ತರವನ್ನು ತಲುಪಿಕೊಂಡಿದೆ. 1,41,384 ಕೋಟಿ ರೂಪಾಯಿ ಒಟ್ಟು ಮೊತ್ತ ಸಂಗ್ರಹ ಆಗಿದೆ. ಅದರಲ್ಲಿ ಸಿಜಿಎಸ್​ಟಿ 27,837 ಕೋಟಿ ರೂ., ಎಸ್​ಜಿಎಸ್​ಟಿ 35,621 ಕೋಟಿ ರೂ., ಐಜಿಎಸ್​ಟಿ 68,481 ಕೋಟಿ ರೂಪಾಯಿ ಸಂಗ್ರಹ ಆಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಿಂದ ತಿಳಿದುಬಂದಿದೆ. ಅಂದಹಾಗೆ 2021ರ ಏಪ್ರಿಲ್ ತಿಂಗಳ ಜಿಎಸ್​ಟಿ ಸಂಗ್ರಹ ಮೊತ್ತವು ಮಾರ್ಚ್​ ತಿಂಗಳ ದಾಖಲೆಯನ್ನೂ ಮೀರಿದೆ. “ಜಿಎಸ್​ಟಿ ಆದಾಯದ ಕಳೆದ ಆರು ತಿಂಗಳ ಚೇತರಿಕೆ ಟ್ರೆಂಡ್ ಗಮನಿಸುವುದಾದರೆ, 2021ರ ಮಾರ್ಚ್​ ತಿಂಗಳಿಗೆ ಹೋಲಿಸಿದರೆ ಏಪ್ರಿಲ್​ನಲ್ಲಿ ಶೇ 14ರಷ್ಟು ಹೆಚ್ಚು ಆದಾಯ ಬಂದಿದೆ,” ಎನ್ನಲಾಗಿದೆ.

ಏಪ್ರಿಲ್ ತಿಂಗಳಲ್ಲಿ ಸೇವೆಗಳ ಆಮದು ಸೇರಿಸಿಕೊಂಡು ದೇಶೀಯ ವಹಿವಾಟಿನಿಂದ ಕಳೆದ ತಿಂಗಳಿಗಿಂತ ಶೇ 21ರಷ್ಟು ಹೆಚ್ಚಿಗೆ ಆದಾಯ ಬಂದಿದೆ. ಕಳೆದ 7 ತಿಂಗಳಿಂದ ಸತತವಾಗಿ ಜಿಎಸ್​ಟಿ ಆದಾಯ 1 ಲಕ್ಷ ಕೋಟಿ ರೂಪಾಯಿ ದಾಟುತ್ತಿರುವುದು ಮಾತ್ರವಲ್ಲ, ಏರಿಕೆ ಕಾಣುತ್ತಲೇ ಸಾಗುತ್ತಿದೆ ಎಂದು ಸರ್ಕಾರವು ತಿಳಿಸಿದೆ. ಜಿಎಸ್​ಟಿ, ಆದಾಯತೆರಿಗೆ, ಕಸ್ಟಮ್ಸ್ ಐಟಿ ವ್ಯವಸ್ಥೆ ಹೀಗೆ ವಿವಿಧ ಮೂಲಗಳಿಂದ ತೀವ್ರವಾದ ಡೇಟಾ ವಿಶ್ಲೇಷಣೆ ಮಾಡಿರುವುದು, ನಕಲಿ ಬಿಲ್ಲಿಂಗ್​ಗಳ ಮೇಲೆ ಕಣ್ಗಾವಲು ಇಟ್ಟಿರುವುದು ಮತ್ತು ಪರಿಣಾಮಕಾರಿ ತೆರಿಗೆ ಆಡಳಿತದಿಂದ ಜಿಎಸ್​ಟಿ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ಏಳು ತಿಂಗಳಲ್ಲಿ ಜಿಎಸ್​ಟಿ ಆದಾಯ ಸಂಗ್ರಹ ಮಾಹಿತಿ ಹೀಗಿದೆ: 2020 ಅಕ್ಟೋಬರ್: 1,05,155 ಕೋಟಿ

2020 ನವೆಂಬರ್: 1,04,963 ಕೋಟಿ

2020 ಡಿಸೆಂಬರ್: 1,15,174 ಕೋಟಿ

2021 ಜನವರಿ: 1,19,875 ಕೋಟಿ

2021 ಫೆಬ್ರವರಿ: 1,13,148 ಕೋಟಿ

2021 ಮಾರ್ಚ್: 1,23,902 ಕೋಟಿ

2021 ಏಪ್ರಿಲ್: 1,41,384 ಕೋಟಿ

ಇದನ್ನೂ ಓದಿ: ಜಿಎಸ್​ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್

(2021 April month GST collection for government stands at 1.41 lakh crore rupees. By this made all time high collection record)

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್