ಕೊವಿಡ್-19 ಸಂಕಷ್ಟ: ಆದಾಯ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ನೀಡಿದ ಕೇಂದ್ರ ಸರ್ಕಾರ

ಕೊವಿಡ್​ 19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ಈ ಕ್ಷೇತ್ರದಲ್ಲಿರುವ ಇತರರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸಮಯ ವಿಸ್ತರಿಸಲಾಗಿದೆ.

ಕೊವಿಡ್-19 ಸಂಕಷ್ಟ: ಆದಾಯ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ನೀಡಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: May 01, 2021 | 5:37 PM

ದೆಹಲಿ: 2019-20ನೇ ಹಣಕಾಸು ವರ್ಷದ ವಿಳಂಬಿತ ಮತ್ತು ಪರಿಷ್ಕೃತ ತೆರಿಗೆ ಸಲ್ಲಿಕೆ ಸೇರಿ ವಿವಿಧ ರೀತಿಯ ಆದಾಯ ತೆರಿಗೆ ನಿಯಮ ಪಾಲನೆಯ ಸಮಯವನ್ನು ಮೇ 31ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೊವಿಡ್​ 19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪ್ರತಿಕೂಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಈಗಿರುವ ಸ್ಥಿತಿಯಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ನಿಗದಿಪಡಿಸಲಾದ ವಿವಿಧ ಕೊನೇ ದಿನಾಂಕವನ್ನ ಮುಂದೂಡಬೇಕು ಎಂದು ಹಲವು ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ಈ ಕ್ಷೇತ್ರದಲ್ಲಿರುವ ಇತರರು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ ಸಮಯ ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (Central Board of Direct Taxes- CBDT)ತಿಳಿಸಿದೆ.

2019-20ರ ಆರ್ಥಿಕ ವರ್ಷದ ವಿಳಂಬಿತ ಮತ್ತು ಪರಿಷ್ಕೃತ ತೆರಿಗೆಯನ್ನು ಮಾರ್ಚ್​ 31ರ ಒಳಗೆ ಸಲ್ಲಿಸಬೇಕಿತ್ತು. ಇದೀಗ ಕೇಂದ್ರ ಅದರ ಸಮಯವನ್ನು 2021ರ ಮೇ 31ರವರೆಗೆ ವಿಸ್ತರಿಸಿದೆ. ಹಾಗೇ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್​ 148ರ ಅಡಿಯಲ್ಲಿ ನೀಡಲಾದ ನೋಟಿಸ್​​ಗೆ ಉತ್ತರವಾಗಿ ಏಪ್ರಿಲ್ 1ರೊಳಗೆ ತೆರಿಗೆ ಸಲ್ಲಿಸಬೇಕು. ಅದಾಗದಿದ್ದರೆ ಆ ನೋಟಿಸ್​ನಲ್ಲಿ ನೀಡಲಾದ ಕೊನೇ ದಿನಾಂಕದೊಳಗೆ ಸಲ್ಲಿಸಬೇಕಾಗಿತ್ತು. ಅದೆರಡೂ ಆಗದೆ ಇದ್ದರೆ ಮೇ 31ರೊಳಗೆ ಸಲ್ಲಿಸಬಹುದು ಎಂದೂ ಹೇಳಲಾಗಿದೆ. 2019-20ರ ಹಣಕಾಸು ವರ್ಷದ ಆದಾಯ ತೆರಿಗೆ ಸಂಬಂಧ ವ್ಯವಹಾರಗಳು 2021ರ ಮಾರ್ಚ್​ 31ರೊಳಗೆ ಪೂರ್ಣಗೊಳ್ಳಲೇಬೇಕಾಗಿರುವುದು ನಿಯಮ. ಹೀಗಿದ್ದಾಗ್ಯೂ ಕೊವಿಡ್ 19 ಸಂಕಷ್ಟದ ನಡುವೆ ಕೇಂದ್ರ ಇದರಲ್ಲಿ ವಿನಾಯಿತಿ ನೀಡಿದೆ. ಈ ಮೂಲಕ ಅನೇಕ ಆದಾಯ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ನೀಡಿದೆ.

ಇದನ್ನೂ ಓದಿ: ಸನ್ನಿ ಲಿಯೋನ್​ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್​ ತೆರೆದಿಟ್ಟ ಮಾದಕ ನಟಿ

ಪಾಕ್ ಆಟಗಾರರಿಗಿಂತ ಭಾರತೀಯ ಬ್ಯಾಟ್ಸ್‌ಮನ್‌ಗಳು ತಾಂತ್ರಿಕವಾಗಿ ಉತ್ತಮರು; ಪಾಕ್ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್