Viral Video: ಎಟಿಎಂ ಕೇಂದ್ರಕ್ಕೆ ಹಣ ತೆಗೆದುಕೊಳ್ಳಲು ಹೋದವ ಸ್ಯಾನಿಟೈಸರ್​ ಕದ್ದ; ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಈ ಘಟನೆ ನಡೆದಿದ್ದು ಏಪ್ರಿಲ್​ 24ರಂದು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ನೆಟ್ಟಿಗರೂ ಸಹ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Viral Video: ಎಟಿಎಂ ಕೇಂದ್ರಕ್ಕೆ ಹಣ ತೆಗೆದುಕೊಳ್ಳಲು ಹೋದವ ಸ್ಯಾನಿಟೈಸರ್​ ಕದ್ದ; ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ
ಸ್ಯಾನಿಟೈಸರ್ ಕದಿಯುತ್ತಿರುವ ದೃಶ್ಯ
Follow us
Lakshmi Hegde
|

Updated on:May 01, 2021 | 4:50 PM

ಫೇಸ್​ಮಾಸ್ಕ್​ ಮತ್ತು ಹ್ಯಾಂಡ್ ಸ್ಯಾನಿಟೈಸರ್​ಗಳು ಈಗಂತೂ ಅಗತ್ಯವಸ್ತುಗಳಾಗಿವೆ. ಯಾವುದೇ ಕಚೇರಿ ಇರಲಿ, ಮನೆ, ರೆಸ್ಟೋರೆಂಟ್, ಹೋಟೆಲ್​​ಗಳ ಪ್ರವೇಶದ್ವಾರದ ಬಳಿಯೇ ಸ್ಯಾನಿಟೈಸರ್ ಇರುತ್ತದೆ. ಬ್ಯಾಂಕ್​, ಎಟಿಎಂ ಕೇಂದ್ರಗಳಲ್ಲೂ ಇದು ಸಾಮಾನ್ಯ. ಆದರೆ ಕಳ್ಳರು ಇದನ್ನೂ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದು ವ್ಯಕ್ತಿಯೊಬ್ಬ ಎಟಿಎಂ ಕೇಂದ್ರದೊಳಗೆ ಇಡಲಾಗಿದ್ದ ಸ್ಯಾನಿಟೈಸರ್​​ನ್ನು ಕದಿಯುವ ವಿಡಿಯೋ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಎಂಬುವರು ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 33 ಸೆಕೆಂಡ್​ಗಳ ಫೂಟೇಜ್​ ಇದಾಗಿದೆ. ಬೆನ್ನಿಗೆ ದೊಡ್ಡ ಬ್ಯಾಗ್​ ಹಾಕಿಕೊಂಡು ಎಟಿಎಂ ಕೇಂದ್ರ ಪ್ರವೇಶಿಸುವ ಈತ ಎಟಿಎಂ ಮಶಿನ್​ನಿಂದ ಮೊದಲು ಹಣ ತೆಗೆಯುತ್ತಾನೆ. ನಂತರ ಕಾರ್ಡ್​ನ್ನು ಜೇಬಿನಲ್ಲಿ ಹಾಕುತ್ತಾನೆ. ಅಲ್ಲಿಂದ ಸುಮ್ಮನೆ ಹೊರಬರುವುದನ್ನು ಬಿಟ್ಟು, ಪಕ್ಕದಲ್ಲೇ ಇಡಲಾಗಿದ್ದ ಸ್ಯಾನಿಟೈಸರ್​ ಬಾಟಲನ್ನು ತೆಗೆದು ತನ್ನ ಬ್ಯಾಗ್​ಗೆ ಹಾಕಿಕೊಳ್ಳುವುದು ಈ ಸಿಸಿಟಿವ ಫೂಟೇಜ್​ನಲ್ಲಿ ಕಾಣಿಸುತ್ತದೆ.

ಈ ಘಟನೆ ನಡೆದಿದ್ದು ಏಪ್ರಿಲ್​ 24ರಂದು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ನೆಟ್ಟಿಗರೂ ಸಹ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಇಟ್ಟ ಸ್ಯಾನಿಟೈಸರ್ ಬಾಟಲನ್ನು ಹೀಗೆ ಹೊತ್ತೊಯ್ಯುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಖಿ ಸಾವಂತ್​ಗೆ ಮಂಗಳಾರತಿ; ಅವರು ಮಾಡಿದ ತಪ್ಪೇನು?

ಭಾರತೀಯ ನೌಕಾಪಡೆಯಿಂದ ಆಕ್ಸಿಜನ್‌ಗಾಗಿ ಆಪರೇಷನ್‌ ಸಮುದ್ರ ಸೇತು ಕಾರ್ಯಾಚರಣೆ

Published On - 4:44 pm, Sat, 1 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ