ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಗುರುವಾರ ಹೇಳಿದ್ದಾರೆ. ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷದ ‘ಮೋದಿ ಹಠಾವೋ-ದೇಶ್ ಬಚಾವೋ‘ (Modi Hatao-Desh Bachao) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರವರು. ಪಂಜಾಬ್ ಸಿಎಂ ಭಗವಂತ್ ಮಾನ್, ದೆಹಲಿಯ ಸಚಿವರಾದ ಗೋಪಾಲ್ ರಾಯ್, ಸೌರಭ್ ಭಾರದ್ವಾಜ್, ಸಂಸದ ಸಂಜಯ್ ಸಿಂಗ್, ಸುಶೀಲ್ ಗುಪ್ತಾ ಮತ್ತು ಶಾಸಕ ರಾಖಿ ಬಿರ್ಲಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಹೀದ್ ದಿವಸ್ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾನು ಬಿಜೆಪಿ ಕಾರ್ಯಕರ್ತನೊಂದಿಗೆ ಮಾತನಾಡಿದ್ದೇನೆ. ಮೋದಿಜಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ, ಕೇವಲ ಮೂರು ಗಂಟೆ ಮಲಗುತ್ತಾರೆ ಎಂದು ಅವರು ಹೇಳುತ್ತಾರೆ. ಮೂರು ಗಂಟೆ ಮಾತ್ರ ನಿದ್ದೆ ಮಾಡಿದರೆ ಅವರು ಕೆಲಸ ಹೇಗೆ ಮಾಡುತ್ತಾರೆ ಎಂದು ನಾನು ಕೇಳಿದೆ, ಮೋದಿಜಿಗೆ ದೈವಿಕ ಶಕ್ತಿ ಇದೆ ಎಂದು ಅವರು ಹೇಳಿದರು.ಅದು ದೈವಿಕ ಶಕ್ತಿಯಲ್ಲ, ಇದು ನಿದ್ರಾಹೀನತೆ ಎಂದು ನಾನು ಹೇಳಿದೆ. ಪ್ರಧಾನಿ ದಿನವಿಡೀ ಸಿಟ್ಟಿನಿಂದ ಇರುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅದೇ ವೇಳೆ ಅದಾನಿ ವಿರುದ್ಧ ದೊಡ್ಡ ಆರೋಪವಿದೆ, ಮೋದಿಜಿ ಅವರ ವಿರುದ್ಧ ಸಿಬಿಐ-ಇಡಿ ಕಳುಹಿಸಿಲ್ಲ. ಹಾಗಾಗಿ ನನ್ನವನಾಗಿ ಭ್ರಷ್ಟಾಚಾರ ಮಾಡು, ಬಿಜೆಪಿಯಲ್ಲೇ ಇದ್ದು ಮಾಡು ಎಂಬ ಸಂದೇಶ ಸ್ಪಷ್ಟವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ‘ಮೋದಿ ಹಠಾವೋ-ದೇಶ್ ಬಚಾವೋ’ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಬ್ರಿಟಿಷ್ ಆಳ್ವಿಕೆಯಲ್ಲೂ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ 138 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಜನರನ್ನು ಬಂಧಿಸಲಾಗಿದೆ.
‘ಮೋದಿ ಹಠಾವೋ ದೇಶ್ ಬಚಾವೋ’ ಎಂಬ ಪೋಸ್ಟರ್ ಮಾತ್ರ ಇತ್ತು, ಅದು ದೊಡ್ಡ ವಿಷಯವಲ್ಲ. ಪ್ರಧಾನಿ ಏಕೆ ಅಭದ್ರತೆ ಹೊಂದಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದ್ದಾರೆ? ಪ್ರಧಾನಿಗೆ ನಿದ್ರೆ ಮಾಡಲು ಹೇಳಿ ಏಕೆಂದರೆ ಅವರು 3 ಗಂಟೆಗಳ ಕಾಲ ಮಲಗುತ್ತಾರೆ. ಅವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ, ಅವರು ನಿದ್ರಿಸಲು ಸಾಧ್ಯವಾಗದಿದ್ದರೆ ಉತ್ತಮ ವೈದ್ಯರನ್ನು ಸಂಪರ್ಕಿಸಬೇಕು. ಅವರು ಎಲ್ಲಾ ಸಮಯದಲ್ಲೂ ಕಿರಿಕಿರಿಗೊಳ್ಳುತ್ತಾರೆ ಮತ್ತು ಎಲ್ಲರನ್ನೂ ಜೈಲಿಗೆ ಹಾಕಲು ಬಯಸುತ್ತಾರೆ. ಪ್ರಧಾನಿ ಮೋದಿ ಆರೋಗ್ಯವಾಗಿರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Adani के ऊपर बड़े-बड़े आरोप लगे
Modi जी ने उसके खिलाफ़ CBI-ED नहीं भेजी!
Message साफ़ है, मेरे अपने बनकर भ्रष्टाचार करो, BJP में रहकर करो!
—CM @ArvindKejriwal #Modi_Hatao_Desh_Bachao pic.twitter.com/dK2GC6TxQn
— AAP (@AamAadmiParty) March 23, 2023
23 ವರ್ಷದ ಮೂವರು ಯುವಕರು ಸ್ವತಂತ್ರ ಭಾರತದ ಕನಸನ್ನು ಕಂಡರು. ಅಲ್ಲಿ ಎಲ್ಲರೂ ಉತ್ತಮ ಶಿಕ್ಷಣ ಪಡೆಯುತ್ತಾರೆ, ಪ್ರತಿಯೊಬ್ಬ ರೈತರು ಸಂತೋಷವಾಗಿರುತ್ತಾರೆ. ಎಲ್ಲರಿಗೂ ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಉದ್ಯೋಗಗಳು ಸಿಗುತ್ತವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ರಾಜಗುರು, ಸುಖದೇವ್, ಸುಭಾಷ್ ಚಂದ್ರ ಬೋಸ್ ಮತ್ತು ಚಂದ್ರಶೇಖರ ಆಜಾದ್ ಅವರು ಬ್ರಿಟಿಷರ ಕಾಲದಲ್ಲಿ ಅನೇಕ ಪೋಸ್ಟರ್‌ಗಳನ್ನು ಅಂಟಿಸಿದರು, ಆದರೆ ಬ್ರಿಟಿಷರು ಪೋಸ್ಟರ್ ಹಾಕಿದ್ದಕ್ಕಾಗಿ ಯಾರನ್ನೂ ಬಂಧಿಸಲಿಲ್ಲ.
ಬಿಜೆಪಿಯವರು ದೆಹಲಿಯಲ್ಲಿ ನನ್ನ ವಿರುದ್ಧ ಪೋಸ್ಟರ್‌ಗಳನ್ನು ಹಾಕಿದ್ದಾರೆ. ನನ್ನ ವಿರುದ್ಧ ಪೋಸ್ಟರ್‌ಗಳನ್ನು ಹಾಕುವವರನ್ನು ಬಂಧಿಸಬೇಡಿ ಎಂದು ನಾನು ಪೊಲೀಸರಿಗೆ ವಿನಂತಿಸುತ್ತೇನೆ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಸಾರ್ವಜನಿಕರಿಗೆ ತಮ್ಮ ನಾಯಕನ ಪರವಾಗಿ ಅಥವಾ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲ ಹಕ್ಕಿದೆ ಎಂದಿದ್ದಾರೆ ಕೇಜ್ರಿವಾಲ್.
ರಾಷ್ಟ್ರ ರಾಜಧಾನಿಯಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್‌ಗಳನ್ನು ಹಾಕಿದ್ದ ಆರೋಪದ ಮೇಲೆ ದೆಹಲಿ ಪೊಲೀಸರು ಬುಧವಾರದಂದು ಹಲವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್ ವಕೀಲ ಮನವಿ
ವಿರೂಪಗೊಳಿಸುವಿಕೆ ವಿರೋಧಿ ಅಭಿಯಾನ ಅಡಿಯಲ್ಲಿ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಆರು ಜನರನ್ನು ಬುಧವಾರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸುಮಾರು 2,000 ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಆರು ಜನರನ್ನು ಬಿಡುಗಡೆ ಮಾಡಿ ಎಂದು ಸಿಎಂ ಪ್ರಧಾನಿಗೆ ಮನವಿ ಮಾಡಿದರು.
ದೇಶದ ಮೂಲೆ ಮೂಲೆಗಳಲ್ಲಿ ಮೋದಿ ಹಠಾವೋ, ದೇಶ್ ಬಚಾವೋ ಪೋಸ್ಟರ್‌ಗಳನ್ನು ಹಾಕಲಾಗುವುದು ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದ್ದಾರೆ. ಅಲ್ಲದೆ ಬಂಧಿತ ಆರು ಮಂದಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ರಾತ್ರೋರಾತ್ರಿ ಜಿಎಸ್‌ಟಿ, ನೋಟು ಅಮಾನ್ಯೀಕರಣ ಜಾರಿಗೆ ತಂದಿದ್ದಾರೆ ಎಂದರು. “ಪ್ರಧಾನಿ ಮಧ್ಯರಾತ್ರಿಯಲ್ಲಿ ಇಂತಹ ಫೈಲ್‌ಗಳಿಗೆ ಸಹಿ ಹಾಕುತ್ತಾರೆ, ಅವರು ಸಹಿ ಮಾಡುವ ಮೊದಲು ಫೈಲ್ ಅನ್ನು ಸಂಪೂರ್ಣವಾಗಿ ಓದಬೇಕು. ಅವರು ದೇಶವನ್ನು ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ ಅವರು ಎಲ್ಲರನ್ನೂ ವಿಭಜಿಸುವಲ್ಲಿ ನಿರತರಾಗಿದ್ದಾರೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ