Fact Check: ಕಾರ್ಮಿಕ ಸಚಿವಾಲಯ ಆನ್‌ಲೈನ್ ಮೂಲಕ ನೇಮಕಾತಿ ನಡೆಸುತ್ತಿದೆ ಎಂದು ವೈರಲ್ ಆಗಿರುವ ವೆಬ್‌ಸೈಟ್ ಲಿಂಕ್ ಫೇಕ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ವಾದ ನಕಲಿಯಾಗಿದೆ ಎಂದು ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ತನ್ನ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಮೂಲಕ ವೆಬ್‌ಸೈಟ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.
ವೆಬ್‌ಸೈಟ್‌ನೊಂದು ತಾನು ಕಾರ್ಮಿಕ ಸಚಿವಾಲಯಕ್ಕೆ (Labour Ministry )ಜನರನ್ನು ನೇಮಿಸಿಕೊಳ್ಳುವುದಾಗಿ ಮತ್ತು ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ವೆಬ್‌ಸೈಟ್ ಲಿಂಕ್ ಹೊಂದಿರುವ ಪೋಸ್ಟ್ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ (Social media) ಹರಿದಾಡುತ್ತಿದೆ.ಈಗಲೂ ಸಕ್ರಿಯವಾಗಿರುವ srbc.in.net ವೆಬ್‌ಸೈಟ್ ತನ್ನನ್ನು ಸರ್ಕಾರಿ ವೆಬ್‌ಸೈಟ್ ಎಂದು ಗುರುತಿಸಿಕೊಂಡಿದೆ. ರಾಜ್ಯ ಪ್ರಾದೇಶಿಕ ಉದ್ಯೋಗ ನಿಗಮ ಮಂಡಳಿ, ಜಂಟಿ ವಿಭಾಗೀಯ ಕಾರ್ಮಿಕ ಇಲಾಖೆ ಮತ್ತು ಉದ್ಯೋಗ ಆಯುಕ್ತರು, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ನಿರ್ದೇಶನಾಲಯವನ್ನು ಇದು ಒಳಗೊಂಡಿದೆ ಎಂದು ಹೇಳುತ್ತದೆ. ಮೇಲ್ನೋಟಕ್ಕೆ ಇದು ಇತರ ಸರ್ಕಾರಿ ವೆಬ್ಸೈಟ್ನ್ನು ಹೋಲುತ್ತದೆ. ಇಲ್ಲಿ ಅಧಿಸೂಚನೆಗಳು, ಸಕ್ರಿಯ ಲಿಂಕ್‌ಗಳು ಮತ್ತು ಇತರ ಸಂಬಂಧಿತ ಮಾಹಿತಿಯನ್ನೂ ಕಾಣಬಹುದು. ಹಾಗಾಗಿ ಜನರು ಇದನ್ನು ನಿಜವಾದ ಸರ್ಕಾರಿ ವೆಬ್ ಸೈಟ್ ಎಂದು ನಂಬುವ ಸಾಧ್ಯತೆ ಇದೆ.
ವೆಬ್‌ಸೈಟ್ ಅನ್ನು ಸ್ಟೇಟ್ ರೀಜನಲ್ ಬೋರ್ಡ್ ಆಫ್ ಎಂಪ್ಲಾಯ್‌ಮೆಂಟ್ ಕಾರ್ಪೊರೇಷನ್ (ಎಸ್‌ಆರ್‌ಬಿಸಿ) ಅಭಿವೃದ್ಧಿಪಡಿಸಿದೆ ಎಂದು ಅದು ಹೇಳುತ್ತದೆ.
ಫ್ಯಾಕ್ಟ್ ಚೆಕ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಈ ವಾದ ನಕಲಿಯಾಗಿದೆ ಎಂದು ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ತನ್ನ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಮೂಲಕ ವೆಬ್‌ಸೈಟ್ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.
A website https://t.co/qbVytM2tET claiming to be associated with @LabourMinistry is conducting online recruitment & providing unemployment allowance#PIBFactCheck
▶️ This Claim is #FAKE
▶️ This Website and Online Recruitment is not associated with the Government Of India pic.twitter.com/PYhxOqrYlI
— PIB Fact Check (@PIBFactCheck) March 23, 2023
ಈ ಬಗ್ಗೆ ಟ್ವೀಟ್ ಮಾಡಿದ ಪಿಐಬಿ, http://srbc.in.net ವೆಬ್‌ಸೈಟ್ ಕಾರ್ಮಿಕ ಸಚಿವಾಲಯದ ಜೊತೆಗೆ ಸಂಬಂಧ ಹೊಂದಿದೆ ಎಂದು ಹೇಳಿಕೊಂಡಿದ್ದು, ಆನ್‌ಲೈನ್ ನೇಮಕಾತಿ ನಡೆಸುತ್ತಿದೆ ಮತ್ತು ನಿರುದ್ಯೋಗ ಭತ್ಯೆ ನೀಡುತ್ತಿದೆ ಎಂದು ಹೇಳುತ್ತದೆ. ಈ ವಾದ ಸುಳ್ಳು. ಈ ವೆಬ್‌ಸೈಟ್ ಮತ್ತು ಆನ್‌ಲೈನ್ ನೇಮಕಾತಿಯು ಭಾರತ ಸರ್ಕಾರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸಂಸತ್ ಕಲಾಪಕ್ಕೆ ಅಡ್ಡಿ; ಹಿರಿಯ ಸಚಿವರ ಜತೆ ಲೋಕಸಭಾ ಸ್ಪೀಕರ್ನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧಿಕೃತ ವೆಬ್‌ಸೈಟ್ https://labour.gov.in/ ಆಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭಾರತ ಸರ್ಕಾರದ ಅತ್ಯಂತ ಹಳೆಯ ಮತ್ತು ಪ್ರಮುಖ ಸಚಿವಾಲಯಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಕಾರ್ಮಿಕರ ಮತ್ತು ಸಮಾಜದ ಬಡವರು, ವಂಚಿತರು ಮತ್ತು ಅನನುಕೂಲಕರ ವಿಭಾಗಗಳನ್ನು ಒಳಗೊಂಡಿರುವವರ ಹಿತಾಸಕ್ತಿಗಳನ್ನು ರಕ್ಷಿಸುವುದು. ನಿರ್ದಿಷ್ಟವಾಗಿ, ಹೆಚ್ಚಿನ ಉತ್ಪಾದನೆ ಮತ್ತು ಉತ್ಪಾದಕತೆಗಾಗಿ ಆರೋಗ್ಯಕರ ಕೆಲಸದ ವಾತಾವರಣವನ್ನು ಸೃಷ್ಟಿಸುವ ಕಾರಣದಿಂದಾಗಿ ಮತ್ತು ವೃತ್ತಿಪರ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಘಟಿಸುವುದು ಸಚಿವಾಲಯದ ಮುಖ್ಯ ಜವಾಬ್ದಾರಿಯಾಗಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Thu, 23 March 23