ರೈಲು ಪ್ರಯಾಣಿಕರಿಂದ 1 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಮೊದಲ ಮಹಿಳಾ ಟಿಸಿ
ರೈಲು ಪ್ರಯಾಣಿಕರಿಂದ 1 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿಯನ್ನು ರೈಲ್ವೆ ಸಚಿವಾಲಯ ಶ್ಲಾಘಿಸಿದೆ .
ರೈಲು ಪ್ರಯಾಣಿಕರಿಂದ 1 ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ ಮೊದಲ ಮಹಿಳಾ ಟಿಕೆಟ್ ತಪಾಸಣೆ ಸಿಬ್ಬಂದಿಯನ್ನು (Woman Ticket Checker) ರೈಲ್ವೆ ಸಚಿವಾಲಯ ಶ್ಲಾಘಿಸಿದೆ . ದಕ್ಷಿಣ ರೈಲ್ವೆಯ ಮುಖ್ಯ ಟಿಕೆಟ್ ಪರಿವೀಕ್ಷಕಿ ರೋಸಲಿನ್ ಅರೋಕಿಯಾ ಮೇರಿ ಅವರು ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂ. ದಂಡವನ್ನು ಸಂಗ್ರಹಿಸಿದ್ದಾರೆ . ರೈಲ್ವೇ ಸಚಿವಾಲಯ ಟ್ವಿಟರ್ ಮೂಲಕ ಟಿಕೆಟ್ ಪರೀಕ್ಷಕನ ಸಿಬ್ಬಂದಿ ರೋಸಲಿನ್ ಅರೋಕಿಯಾ ಮೇರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇರಿ ಪ್ರಯಾಣಿಕರಿಂದ ದಂಡವನ್ನು ಸಂಗ್ರಹಿಸುತ್ತಿರುವುದನ್ನು ಮತ್ತು ಪ್ರಯಾಣಿಕರಿಂದ ಟಿಕೆಟ್‌ಗಳನ್ನು ಪರೀಕ್ಷಿಸುತ್ತಿರುವ ಫೋಟೋವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಈ ಹಂಚಿಕೊಂಡ ಪೋಸ್ಟ್‌ಗೆ ಶೀರ್ಷಿಕೆಯನ್ನು ಕೂಡ ನೀಡಲಾಗಿದೆ. ತನ್ನ ಕರ್ತವ್ಯದಲ್ಲಿ ದೃಢವಾದ ಬದ್ಧತೆಯನ್ನು ತೋರಿಸುತ್ತಾ, GMSRailway ನ CTI (ಚೀಫ್ ಟಿಕೆಟ್ ಇನ್ಸ್‌ಪೆಕ್ಟರ್) ಶ್ರೀಮತಿ ರೊಸಲಿನ್ ಅರೋಕಿಯಾ ಮೇರಿ, ಅವರು 1.03 ಕೋಟಿ ರೂ. ದಂಡ ಸಂಗ್ರಹಿಸುವ ಮೂಲಕ ಭಾರತೀಯ ರೈಲ್ವೆಯ ಟಿಕೆಟ್ ತಪಾಸಣೆ ಸಿಬ್ಬಂದಿಯಲ್ಲಿ ಮೊದಲ ಮಹಿಳೆಯಾಗಿದ್ದಾರೆ. ಅನಿಯಮಿತ/ಟಿಕೆಟ್ ಪಡೆಯದ ಪ್ರಯಾಣಿಕರಿಂದ 1.03 ಕೋಟಿ ರೂ. ದಂಡ ಸಂಗ್ರಹ ಮಾಡಿದ್ದಾರೆ.
ಈ ಫೋಟೋ ಈಗ ಎಲ್ಲ ಕಡೆಯಲ್ಲೂ ವೈರಲ್ ಆಗಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನಮ್ಮ ಭಾರತವನ್ನು ಸೂಪರ್ ಪವರ್ ಮಾಡಲು ಇಂತಹ ಸವಾಲಿನ ಮತ್ತು ಸಮರ್ಪಿತ ಮಹಿಳೆಯರ ಅಗತ್ಯವಿದೆ. ಅಭಿನಂದನೆಗಳು ರೊಸಾಲಿನ್ ಇಂತಹ ಕಾರ್ಯವನ್ನು ಮುಂದುವರಿಸಿ ಎಂದು ಹೇಳಿದ್ದಾರೆ.
Showing resolute commitment to her duties, Smt.Rosaline Arokia Mary, CTI (Chief Ticket Inspector) of @GMSRailway, becomes the first woman on the ticket-checking staff of Indian Railways to collect fines of Rs. 1.03 crore from irregular/non-ticketed travellers. pic.twitter.com/VxGJcjL9t5
— Ministry of Railways (@RailMinIndia) March 22, 2023
ಮತ್ತೊಬ್ಬ ಬಳಕೆದಾರ, ರೋಸಲಿನ್, ನಾನು ನಿಮ್ಮ ಸ್ನೇಹಿತೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನಿನ್ನನ್ನು ತಿಳಿದುಕೊಂಡು ಕಾರಣ ನಿನ್ನ ಸಾಧನೆಯಲ್ಲಿ ನನಗೆ ಆಶ್ಚರ್ಯವಿಲ್ಲ. ನಿನ್ನ ಸಮರ್ಪಣೆ, ಬದ್ಧತೆ ಮತ್ತು ನಿಮ್ಮ ಕರ್ತವ್ಯಗಳಿಗೆ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಮತ್ತೊಬ್ಬ ಬಳಕೆದಾರರು ಅಭಿನಂದನೆಗಳು, ಮೇಡಂ! ಕೆಲಸ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
Published On - 6:52 pm, Thu, 23 March 23