Indian Railways: ರೈಲು ಸ್ವಲ್ಪವೂ ಕ್ಲೀನ್ ಇಲ್ಲ ಎಂದು ಇನ್ಮುಂದೆ ಹೇಳೋಹಾಗಿಲ್ಲ, ಏನೇನೆಲ್ಲಾ ಸೌಕರ್ಯಗಳನ್ನು ಕಲ್ಪಿಸಲಿದೆ ಗೊತ್ತೇ?

ರೈಲುಗಳು ಸ್ವಚ್ಛವಾಗಿರುವುದಿಲ್ಲ, ಶೌಚಾಲಯಕ್ಕಂತೂ ಮೂಗು ಮುಚ್ಚಿಕೊಂಡು ಹೋಗಬೇಕು, ರೈಲು ಪೂರ್ತಿ ಮೂತ್ರದ ವಾಸನೆ ಬರುತ್ತಿರುತ್ತದೆ ಹೀಗೆ ಹಲವು ದೂರುಗಳಿವೆ.

Indian Railways: ರೈಲು ಸ್ವಲ್ಪವೂ ಕ್ಲೀನ್ ಇಲ್ಲ ಎಂದು ಇನ್ಮುಂದೆ ಹೇಳೋಹಾಗಿಲ್ಲ, ಏನೇನೆಲ್ಲಾ ಸೌಕರ್ಯಗಳನ್ನು ಕಲ್ಪಿಸಲಿದೆ ಗೊತ್ತೇ?
ರೈಲು ಶೌಚಾಲಯ
Follow us
ನಯನಾ ರಾಜೀವ್
|

Updated on: Mar 12, 2023 | 7:46 AM

ರೈಲುಗಳು ಸ್ವಚ್ಛವಾಗಿರುವುದಿಲ್ಲ, ಶೌಚಾಲಯಕ್ಕಂತೂ ಮೂಗು ಮುಚ್ಚಿಕೊಂಡು ಹೋಗಬೇಕು, ರೈಲು ಪೂರ್ತಿ ಮೂತ್ರದ ವಾಸನೆ ಬರುತ್ತಿರುತ್ತದೆ ಹೀಗೆ ಹಲವು ದೂರುಗಳಿವೆ. ಆದರೆ ನಿಮ್ಮೆಲ್ಲಾ ದೂರುಗಳನ್ನು ದೂರ ಮಾಡಲು ಭಾರತೀಯ ರೈಲ್ವೆ ಸಿದ್ಧವಾಗಿದೆ. ವಾಸನೆ ನಿಯಂತ್ರಣ, ಸ್ವಯಂಚಾಲಿತ ನೈರ್ಮಲ್ಯ ವ್ಯವಸ್ಥೆಗಳೊಂದಿಗೆ ಉತ್ತಮ ಸೌಕರ್ಯಗಳನ್ನು ಪರಿಚಯಿಸಲಿದೆ. ಇತರೆ ಸಾರಿಗೆಗಳಿಗೆ ಹೋಲಿಸಿದರೆ ರೈಲಿನಲ್ಲಿ ದರ ಕಡಿಮೆ ಇರುವುದರಿಂದ ಎಲ್ಲರೂ ರೈಲ್ವೆ ಪ್ರಯಾಣವನ್ನು ಹೆಚ್ಚು ಆಶ್ರಯಿಸುತ್ತಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುವುದರಿಂದ ಇವುಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ, ಇಂತಹ ಸಮಸ್ಯೆ ನಿವಾರಣೆಗಾಗಿ ಭಾರತೀಯ ರೈಲ್ವೆ ಇಲಾಖೆ ಹೊಸ ಸೌಲಭ್ಯಗಳನ್ನು ಪರಿಚಯಿಸಲಿದೆ. ಈಗಿರುವ ಶೌಚಾಲಯಗಳನ್ನು ಉತ್ತಮ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಿದ ಜೈವಿಕ ಶೌಚಾಲಯಕ್ಕೆ ಬದಲಾಯಿಸಲಾಗುತ್ತದೆ.

ಮತ್ತಷ್ಟು ಓದಿ: Railway Travelling Ticket Examiner: ಆರು ತಿಂಗಳಿನಿಂದ ಅಸಲಿ ಟಿಟಿ ರೂಪದಲ್ಲಿ ವಾಕಿ ಟಾಕಿ ಹಿಡಿದು ಪ್ರಯಾಣಿಕರಿಂದ ಹಣ ವಸೂಲಿ ಮಾಡ್ತಿದ್ದ ನಕಲಿ ಟಿಟಿ ಅರೆಸ್ಟ್

ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿರುವ ಈ ಜೈವಿಕ ಶೌಚಾಲಯಗಳು ಸ್ವಯಂಚಾಲಿತ ನೈರ್ಮಲ್ಯ ಮತ್ತು ವಾಸನೆ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿವೆ. ರೈಲ್ವೆ ಪ್ರಯಾಣಿಕರು ಶೀಘ್ರವೇ ಉತ್ತಮ ಸೌಕರ್ಯಗಳನ್ನು ಆನಂದಿಸಲಿದ್ದಾರೆ. ರೈಲುಗಳಲ್ಲಿ ಅಸ್ತಿತ್ವದಲ್ಲಿರುವ ಶೌಚಾಲಯಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾಗುತ್ತಿದೆ ಮತ್ತು ಉತ್ತಮ ಸೌಕರ್ಯಗಳೊಂದಿಗೆ ನವೀಕರಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ರೈಲ್ವೆಯು ಪ್ರಾಯೋಗಿಕ ಯೋಜನೆಯಾಗಿ ರಾಂಚಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ನಾಲ್ಕು ಜೈವಿಕ ಶೌಚಾಲಯಗಳೊಂದಿಗೆ ಎಸಿ ಕೋಚ್ ಅನ್ನು ಪರಿಚಯಿಸಿದೆ. ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲೆ ನಿರ್ಧಾರ ನಿಂತಿದೆ, ನಂತರದ ದಿನಗಳಲ್ಲಿ ದೇಶದಲ್ಲಿರುವ ಎಲ್ಲಾ ರೈಲುಗಳಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.

ಈ ನವೀಕರಿಸಿದ ಶೌಚಾಲಯಗಳಲ್ಲಿ ಸ್ವಯಂಚಾಲಿತ ನೈರ್ಮಲ್ಯ ಮತ್ತು ವಾಸನೆ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ನೀರಿನ ಟ್ಯಾಪ್‌ಗಳು ಮತ್ತು ಸೋಪ್ ಡಿಸ್ಪೆನ್ಸರ್‌ಗಳು ಸಹ ಸ್ಪರ್ಶ-ಮುಕ್ತ ಮತ್ತು ಸಂವೇದಕ ಆಧಾರಿತವಾಗಿರುತ್ತವೆ.

ಎಕನಾಮಿಕ್ ಟೈಮ್ಸ್‌ಗೆ ವಿವರಗಳನ್ನು ನೀಡಿದ ರೈಲ್ವೆ ಅಧಿಕಾರಿಗಳು, ವಾಶ್‌ರೂಮ್‌ಗಳ ಹೊರತಾಗಿ, ರೈಲು ಪ್ರಯಾಣದ ಸಮಯದಲ್ಲಿ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ದ್ವಾರಗಳು ಮತ್ತು ಗ್ಯಾಂಗ್‌ವೇಗಳನ್ನು ಸಹ ಮರುರೂಪಿಸಲಾಗಿದೆ.

ಇದಕ್ಕೂ ಮುನ್ನ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಜನವರಿಯಲ್ಲಿ ದೆಹಲಿ ನಿಲ್ದಾಣಕ್ಕೆ ಭೇಟಿ ನೀಡಿ ಹೊಸ ಮೇಲ್ದರ್ಜೆಗೇರಿದ ಶೌಚಾಲಯಗಳ ಪರಿಶೀಲನೆ ನಡೆಸಿದ್ದರು ಮತ್ತು ಎಲ್ಲಾ ಕೋಚ್‌ಗಳಲ್ಲಿ ಈಗಿರುವ ಶೌಚಾಲಯಗಳನ್ನು ಆಧುನಿಕ ಶೌಚಾಲಯಗಳೊಂದಿಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ