Excise Policy Case: ದೆಹಲಿಯ 25 ಕಡೆಗಳಲ್ಲಿ ಇಡಿ ದಾಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2022 | 2:12 PM

ದೆಹಲಿ ಅಬಕಾರಿ ನೀತಿ ಸಂಬಂಧಿಸಿದಂತೆ ರಾಷ್ಟ್ರೀಯ ರಾಜಧಾನಿಯ 25 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಶೋಧದ ಅಡಿಯಲ್ಲಿ ದಾಳಿ ನಡೆಸಿದ ಆವರಣಗಳು ಮದ್ಯ ಮಾರಾಟಗಾರರಿಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ.

Excise Policy Case: ದೆಹಲಿಯ 25 ಕಡೆಗಳಲ್ಲಿ ಇಡಿ ದಾಳಿ
Follow us on

ದೆಹಲಿ: ಜಾರಿ ನಿರ್ದೇಶನಾಲಯ ಇಂದು ರಾಷ್ಟ್ರ ರಾಜಧಾನಿಯಲ್ಲಿ 25 ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯ ಬಗ್ಗೆ ನಡೆಯುತ್ತಿರುವ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯ ಅಡಿಯಲ್ಲಿ ಒಳಗೊಂಡಿರುವ ಆವರಣಗಳು ಮದ್ಯ ಮಾರಾಟಗಾರ ಮತ್ತು ವಿತರಕರಿಗೆ ಸಂಬಂಧಿಸಿರುವ ಖಾಸಗಿ ಸಂಸ್ಥೆಗಳಿಗೆ ಸೇರಿವೆ ಎಂದು ಅವರು ಹೇಳಿದರು.

ಫೆಡರಲ್ ಏಜೆನ್ಸಿ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಅನೇಕ ದಾಳಿಗಳನ್ನು ನಡೆಸಿದೆ ಮತ್ತು ಈ ಪ್ರಕರಣದಲ್ಲಿ ಕಳೆದ ತಿಂಗಳು ಮದ್ಯದ ಉದ್ಯಮಿ ಮತ್ತು ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿತ್ತು.

ಇದನ್ನು ಓದಿ; ಇಂದೋರ್: ಸಂಧಾನಕ್ಕೆ ಬಂದ ಬಿಜೆಪಿ ಕಾರ್ಪೊರೇಟರ್ ಪತಿಗೆ ಪೌರಕಾರ್ಮಿಕರಿಂದ ಥಳಿತ

ಮನಿ ಲಾಂಡರಿಂಗ್ ಪ್ರಕರಣದಿಂದ ಪ್ರಾರಂಭವಾದ ಈ ದಾಳಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವರೆಗೆ ಈ ದಾಳಿಯನ್ನು ನಡೆಸಲಾಗಿದೆ. ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿ ಅಪಾದಿತ ಅಕ್ರಮಗಳ ಕುರಿತು ದೆಹಲಿ ಎಲ್‌ಜಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಈ ಯೋಜನೆಯು ಸ್ಕ್ಯಾನರ್ ಅಡಿಯಲ್ಲಿ ಬಂದಿತು. ಈ ಸಂಬಂಧ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.