
ದೆಹಲಿ: ಸಾಮಾಜಿಕ ಜಾಲತಾಣದಲ್ಲೇ ಅತ್ಯಂತ ಜನಪ್ರಿಯ ಹೊಂದಿರುವ ಫೇಸ್‌ಬುಕ್ ಭಾರತದ ರಿಲಯನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ಮಾರ್ಕ್ ಜುಕರ್ಬರ್ಗ್ ಬಡೆತನದ ಫೇಸ್‌ಬುಕ್ ದೇಶದ ಸಿರಿವಂತ ಉದ್ಯಮಿ ಮುಖೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಭಾಗವಾಗಿರುವ ಜಿಯೋ ಲಿಮಿಟೆಡ್ನಲ್ಲಿ ಹೂಡಿಕೆ ಮಾಡಿದ್ದಾರೆ.
ಫೇಸ್‌ಬುಕ್ 5.7 ಬಿಲಿಯನ್ ಡಾಲರ್ (43,547 ಕೋಟಿ) ಹೂಡಿಕೆ ಮಾಡುವ ಮೂಲಕ ಜಿಯೋ ಕಂಪನಿಯಲ್ಲಿ ಶೇ 9.9ರಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿದೆ. ರಿಲಯನ್ಸ್ ಈ ಕುರಿತು ಮುಂಬೈ ಷೇರುಪೇಟೆಗೆ ಮಾಹಿತಿ ನೀಡಿದೆ.
Published On - 12:01 pm, Wed, 22 April 20