11 ನೇ ತರಗತಿಯ ವಿದ್ಯಾರ್ಥಿಗಳಿಂದ ಪದವಿ ಹಂತದವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು (Laptop) ಒದಗಿಸುವ ಬಗ್ಗೆ ಸಂದೇಶವೊಂದು ಹರಿದಾಡುತ್ತಿದ್ದು ಇದು ಫೇಕ್ ಸಂದೇಶ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ (Fact Check) ಮಾಡಿದೆ.ಶಿಕ್ಷಣ ಸಚಿವಾಲಯವು ಲ್ಯಾಪ್‌ಟಾಪ್ ಒದಗಿಸಲು ಮೀಸಲಾದ ವೆಬ್ ಪೋರ್ಟಲ್ ‘ಪ್ರಧಾನ ಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆ 2022’ ಅನ್ನು ಸಹ ಪ್ರಾರಂಭಿಸಿದೆ, ಅದರ ಮೊತ್ತವನ್ನು 2022-23ರ ಶೈಕ್ಷಣಿಕ ಅವಧಿಯ ಅವಧಿಯಲ್ಲಿ ಒಂದೇ ಕಂತಿನಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದುದು, ವೆಬ್‌ಸೈಟ್ pmssgovt.online ನಕಲಿ ಎಂದು ಪಿಐಬಿ ಹೇಳಿದೆ.
pmssgovt.online ವೆಬ್‌ಸೈಟ್ 11 ನೇ ತರಗತಿಯಿಂದ ಹಿಡಿದು ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆ 2022 ಹೆಸರಿನಲ್ಲಿ ನೀಡುವುದಾಗಿ ಹೇಳುತ್ತಿದೆ. ಈ ವೆಬ್‌ಸೈಟ್ ನಕಲಿ. ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ ಎಂದು ಪಿಐಬಿ ಟ್ವೀಟ್ ಮಾಡಿದೆ.
ಭಾರತ ಸರ್ಕಾರವು ಈ ರಾಷ್ಟ್ರೀಯ ಲ್ಯಾಪ್‌ಟಾಪ್ ಸ್ಕೀಮ್ ಅನ್ನು ವಿಶೇಷವಾಗಿ ಎಲ್ಲಾ ಭಾರತೀಯ ರಾಜ್ಯಗಳಿಗೆ ಪ್ರಾರಂಭಿಸಿದೆ, ಎಲ್ಲಾ ಅರ್ಹ ವಿದ್ಯಾರ್ಥಿಗಳು ಪ್ರಧಾನಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಗೆ ಅಧಿಕೃತ ವೆಬ್‌ಸೈಟ್ www.pmssgovt.online ಮೂಲಕ ಅರ್ಜಿ ಸಲ್ಲಿಸಬಹುದು ಎಂದು ನಕಲಿ ವೆಬ್ ಸೈಟ್ pmssgovt.online ನಲ್ಲಿ ಹೇಳಿದೆ. XI, XII, B.A-1st, B.A-2nd, B.A-3rd, B.A-4th, B.A-5th ಮತ್ತು B.A-6th ಸೆಮಿಸ್ಟರ್‌ನ ಎಲ್ಲಾ ವಿದ್ಯಾರ್ಥಿಗಳು ಪ್ರಧಾನಮಂತ್ರಿ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.2022-23 ರ ಶೈಕ್ಷಣಿಕ ವರ್ಷಕ್ಕೆ ನೋಂದಣಿ ಫಾರ್ಮ್ ಅನ್ನು ಸಲ್ಲಿಸಬೇಕು . ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು. ಅಲ್ಲಿ ನೀವು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಲ್ಯಾಪ್‌ಟಾಪ್ ಯೋಜನೆಯ ಲಿಂಕ್ ಪಡೆಯಬಹುದು ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ.