ಬೆಂಗಳೂರು: ಮಹಿಳೆಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮೋದಿ ನಮಸ್ಕರಿಸುತ್ತಿರುವ ಮಹಿಳೆ ಉದ್ಯಮಿ ಗೌತಮ್ ಅದಾನಿ ಅವರ ಪತ್ನಿ ಪ್ರೀತಿ ಅದಾನಿ ಎಂಬ ವಿವರಣೆಯೊಂದಿಗೆ ಹಲವಾರು ನೆಟ್ಟಿಗರು ಈ ಫೋಟೊ ಶೇರ್ ಮಾಡಿದ್ದಾರೆ.
ಕಿಸಾನ್ ಕಾಂಗ್ರೆಸ್ನ ರಾಷ್ಟ್ರೀಯ ಉಪಾಧ್ಯಕ್ಷ ಸುರೇಂದರ್ ಸೋಲಂಕಿ ಅವರು ಇದೇ ಫೋಟೊ ಮತ್ತು ನೀತಾ ಅಂಬಾನಿ ಜತೆ ಮೋದಿ ನಗುತ್ತಾ ಮಾತನಾಡುತ್ತಿರುವ ಫೋಟೊವನ್ನು ಶೇರ್ ಮಾಡಿ ಇದು ನಾಚಿಕೆಗೇಡಿನ ಸರ್ಕಾರ. ಚಳಿಯಲ್ಲಿ ರೈತರು ಉಸಿರುಗಟ್ಟುತ್ತಿರುವಾಗ ಮೋದಿ ಶಿರಬಾಗಿ ತಮ್ಮ ಮಾಲಕಿ ಪ್ರೀತಿ ಅದಾನಿ ಮತ್ತು ನೀತಾ ಅಂಬಾನಿಗಾಗಿ ತಟಸ್ಥರಾಗಿದ್ದರು ಎಂದು ಟ್ವೀಟಿಸಿದ್ದಾರೆ.
इस बेरहम सरकार और सर्दी के बीच जहां किसान घनघोर ठंढ़ मे प्रतिदिन दम तोड़ रहे है। वही मोदी जी की जिद्द नतमस्तक हो कर अपने माल्किन प्रिती अडानी और नीता अंबानी के लिये तटस्थ है। @LambaAlka @HansrajMeena @_garrywalia @gurdasmaan @capt_amarinder @sherryontopp @diljitdosanjh pic.twitter.com/a3DSlASaVe
— चौ० सुरेंद्र सोलंकी (@SurenderAICC) December 17, 2020
ಫ್ಯಾಕ್ಟ್ ಚೆಕ್
ಈ ಫೋಟೊವನ್ನು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದ್ದು, ಫೋಟೊದಲ್ಲಿರುವ ಮಹಿಳೆ ಅದಾನಿಯವರ ಪತ್ನಿ ಪ್ರೀತಿ ಅದಾನಿ ಅಲ್ಲ ಎಂದು ಹೇಳಿದೆ. ಫೋಟೊದ ಸತ್ಯಾಸತ್ಯತೆ ಅರಿಯಲು TinEyeನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2018ರಲ್ಲಿ ಒನ್ ಇಂಡಿಯಾ ಹಿಂದಿಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಈ ಫೋಟೊ ಬಳಸಿರುವುದು ಗಮನಕ್ಕೆ ಬಂದಿದೆ.
ಇದು 2015ರಲ್ಲಿ ಕ್ಲಿಕ್ಕಿಸಿದ ಫೋಟೊ. ಫೋಟೊದಲ್ಲಿರುವ ಮಹಿಳೆ ದೀಪಿಕಾ ಮಂಡೋಲ್. ಇವರು ದೆಹಲಿ ಮೂಲದ ಎನ್ಜಿಒ ದಿವ್ಯಜ್ಯೋತಿ ಕಲ್ಚರಲ್ ಆರ್ಗನೈಸೇಷನ್ ಮತ್ತು ಸೋಷ್ಯಲ್ ವೆಲ್ಫೇರ್ ಸೊಸೈಟಿಯ (DCOWS) ಸಿಎಫ್ಒ ಆಗಿದ್ದಾರೆ. 2018ರಲ್ಲಿ ಅಮರ್ ಉಜಾಲಾದಲ್ಲಿಯೂ ಇದೇ ಫೋಟೊ ಪ್ರಕಟವಾಗಿತ್ತು.
Fact Check | ಭಾರತೀಯ ರೈಲ್ವೆಯನ್ನು ಅದಾನಿ ಖರೀದಿಸಿದ್ದಾರೆ ಎಂಬ ವೈರಲ್ ವಿಡಿಯೊ ಹಿಂದಿನ ಮರ್ಮವೇನು?
Published On - 7:54 pm, Fri, 18 December 20