ದೆಹಲಿ ಡಿಸೆಂಬರ್ 01: ಉತ್ತರಕಾಶಿಯಲ್ಲಿ (Uttarkashi) ಕುಸಿದ ಸಿಲ್ಕ್ಯಾರಾ ಸುರಂಗದಿಂದ 41 ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ ನಂತರ ರಕ್ಷಣಾ ಕಾರ್ಯಕರ್ತರ ಗ್ರೂಪ್ ಫೋಟೊವೊಂದು ವೈರಲ್ ಆಗಿದೆ. ಹಲವಾರ ಸುದ್ದಿ ಮಾಧ್ಯಮಗಳು ಕೂಡಾ ಉತ್ತರಾಖಂಡದ(Uttarakhand )ಸುರಂಗದ ರಕ್ಷಣಾ ಕಾರ್ಯಾಚರಣೆಯ ಕುರಿತಾದ ತಮ್ಮ ಸುದ್ದಿ ಲೇಖನಗಳಲ್ಲಿ ಇದೇ ಫೋಟೊವನ್ನು ಬಳಸಿವೆ. ನವೆಂಬರ್ 12, 2023 ರಿಂದ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಭೂಕುಸಿತ ಸಂಭವಿಸಿದ ನಂತರ ಸಿಕ್ಕಿಬಿದ್ದ ನಲವತ್ತೊಂದು ಕಾರ್ಮಿಕರನ್ನ ಮಂಗಳವಾರ ರಕ್ಷಿಸಲಾಯಿತು. 17 ದಿನಗಳ ಕಾಲ ನಡೆದ ಬಹು-ಏಜೆನ್ಸಿ ರಕ್ಷಣಾ ಕಾರ್ಯಾಚರಣೆಯು (Rescue operation) ಹಲವಾರು ಹಿನ್ನಡೆಗಳನ್ನು ನಿವಾರಿಸಿದೆ. ಸಾಗರೋತ್ತರ ಸುರಂಗ ತಜ್ಞರನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯು ಭಾರತದಲ್ಲಿ ಜನರ ಗಮನವನ್ನು ಸೆಳೆದಿದೆ ಮತ್ತು ಜಾಗತಿಕವಾಗಿ ಸುದ್ದಿ ಮಾಡಿದೆ.
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ನ್ಯೂಸ್ 18, ಇಂಡಿಯಾ ಟುಡೆ, ಹಿಂದೂಸ್ತಾನ್ ಟೈಮ್ಸ್, ಲೋಕಸತ್ತಾ ಸೇರಿದಂತೆ ಸುದ್ದಿವಾಹಿನಿಗಳು ಕೂಡಾ ಎಐ ರಚಿತ ಫೋಟೊಗಳನ್ನೇ ಬಳಸಿ ಕೃಪೆ ಪಿಐಟಿ ಎಂದು ಉಲ್ಲೇಖಿಸಿದ್ದವು. ಈ ಫೋಟೋ X (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿದ್ದು ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಿದ ಸುದ್ದಿ ಹೊರಬಂದ ನಂತರ ಹಲವಾರು ಮಂದಿ ಇದೇ ಫೋಟೊಗಳನ್ನು ಶೇರ್ ಮಾಡಿದ್ದಾರೆ.
— Tajinder Bagga (@TajinderBagga) November 28, 2023
ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವಾರು ಮಂದಿ ಸುರಂಗ ರಕ್ಷಣಾ ಕಾರ್ಯಾಚರಣೆಯ ಇತರ ಫೋಟೋಗಳೊಂದಿಗೆ ಈ ಫೋಟೊ ಹಂಚಿಕೊಂಡಿದ್ದರು.
ಸುದ್ದಿವಾಹಿನಿಗಳು ಪ್ರಕಟಿಸಿದ ವೈರಲ್ ಫೋಟೋ AI- ರಚಿತವಾದ ಫೋಟೊ. ಇದು ಉತ್ತರಾಖಂಡದ ಕುಸಿದ ಸಿಲ್ಕ್ಯಾರಾ ಸುರಂಗದಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ನಂತರ ತೆಗೆದ ನಿಜವಾದ ಫೋಟೋ ಅಲ್ಲ ಎಂದು BOOM ವರದಿ ಮಾಡಿದೆ.
ಚಿತ್ರದಲ್ಲಿರುವ ಬೆರಳುಗಳು, ಕಣ್ಣುಗಳನ್ನು ಮತ್ತು ಸ್ಯಾಚುರೇಟೆಡ್ ಬಣ್ಣಗಳನ್ನು ಕೂಲಂಕಷವಾಗಿ ಗಮನಿಸಿದರೆ ಅಸಲಿ ಚಿತ್ರ ಮತ್ತು ಎಐ ರಚಿತ ಚಿತ್ರದಲ್ಲಿನ ವ್ಯತ್ಯಾಸಗಳನ್ನು ಕಾಣಬಹುದಾಗಿದೆ.
— Exclusive Minds (@Exclusive_Minds) November 28, 2023
ವೈರಲ್ ಫೋಟೋವನ್ನು X ಹ್ಯಾಂಡಲ್ @Exclusive_Minds ನಿಂದ ಪೋಸ್ಟ್ ಮಾಡಲಾಗಿದೆ. ಇದು ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿನ ಹಲವಾರು AI- ರಚಿತ ಫೋಟೋಗಳನ್ನು ಪೋಸ್ಟ್ ಮಾಡಿದೆ.
STORY | NDRF team kindled hopes of 41 labourers rescued from Uttarakhand tunnel
READ: https://t.co/N5t259C3mG pic.twitter.com/ZGcTAhE2Je
— Press Trust of India (@PTI_News) November 29, 2023
ಚಿತ್ರವನ್ನು ಪಿಟಿಐ ತನ್ನ ಸಿಂಡಿಕೇಟೆಡ್ ಪ್ರತಿಯ ಭಾಗವಾಗಿ ಅಪ್‌ಲೋಡ್ ಮಾಡಿದೆ. ಅಲ್ಲಿಂದಲೇ ಇತರ ಸುದ್ದಿವಾಹಿನಿಗಳು ಚಿತ್ರವನ್ನು ಬಳಸಿವೆ.
ಇದನ್ನೂ ಓದಿ: Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್ ಕೈಕುಲುಕದೇ ಹೋದರೆ ಮೋದಿ?
BOOM,ಪಿಟಿಐ ಮೂಲಗಳ ಜತೆ ಮಾತನಾಡಿದ್ದು, ಇದು ಅಚಾತುರ್ಯದ ತಪ್ಪು. ರಾಜ್ಯವರ್ಧನ್ ರಾಥೋಡ್ ಅವರು ಪೋಸ್ಟ್ ಮಾಡಿದ ನಂತರ ಸುದ್ದಿ ಸಂಸ್ಥೆಯು ಫೋಟೋವನ್ನು ತೆಗೆದುಹಾಕಿದೆ ಎಂದು ಹೇಳಿದೆ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ