Fact Check ಸ್ನಾಪ್​​ಚಾಟ್​​ ಖರೀದಿಸಲು ಎಲಾನ್​​ ಮಸ್ಕ್​​​ ಚಿಂತನೆ ಎಂಬ ವೈರಲ್ ಸ್ಕ್ರೀನ್​​ಶಾಟ್ ಫೇಕ್

ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಸ್ನ್ಯಾಪ್‌ಚಾಟ್ ಖರೀದಿಸುವ ಉದ್ದೇಶವನ್ನು ಪ್ರಕಟಿಸಿದ್ದರೆ, ಅದು ಮುಖ್ಯವಾಹಿನಿಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಿತ್ತು.ಆದಾಗ್ಯೂ, ಪ್ರತಿಷ್ಠಿತ ಮಾಧ್ಯಮಗಳಲ್ಲಿ ಯಾವುದೇ ಸಂಬಂಧಿತ ವರದಿಗಳು ಕಂಡುಬಂದಿಲ್ಲ

Fact Check ಸ್ನಾಪ್​​ಚಾಟ್​​ ಖರೀದಿಸಲು ಎಲಾನ್​​ ಮಸ್ಕ್​​​ ಚಿಂತನೆ ಎಂಬ ವೈರಲ್ ಸ್ಕ್ರೀನ್​​ಶಾಟ್ ಫೇಕ್
ಎಲಾನ್ ಮಸ್ಕ್
Edited By:

Updated on: Nov 28, 2022 | 5:16 PM

ಎಲಾನ್ ಮಸ್ಕ್ (Elon Musk) ಸಾಮಾಜಿಕ ಮಾಧ್ಯಮ ಟ್ವಿಟರ್ (Twitter) ಖರೀದಿಸಿದಾಗಿನಿಂದ ಟ್ವಿಟರ್ ಸದಾ ಸುದ್ದಿಯಲ್ಲಿದೆ. ಮಸ್ಕ್‌ನ ನೀತಿ ಬದಲಾವಣೆಗಳನ್ನು ಮಾಜಿ ಉದ್ಯೋಗಿಗಳು, ಸೈಟ್‌ನ ಬಳಕೆದಾರರು, ರಾಜಕಾರಣಿಗಳು ಮತ್ತು ಹೆಚ್ಚಿನವರು ಟೀಕಿಸಿದ್ದಾರೆ. ಮಸ್ಕ್ ಈಗ ಮತ್ತೊಂದು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಸ್ನ್ಯಾಪ್‌ಚಾಟ್(Snapchat) ಖರೀದಿಸಲು ಎದುರು ನೋಡುತ್ತಿದ್ದಾರೆ ಎಂಬ ಟ್ವೀಟೊಂದು ಇತ್ತೀಚಿಗೆ ವೈರಲ್ ಆಗಿದೆ. ಎಲಾನ್ ಮಸ್ಕ್ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಲವು ನೆಟ್ಟಿಗರು ಹಂಚಿಕೊಂಡಿದ್ದಾರೆ. ಅದರಲ್ಲಿ ಮಸ್ಕ್, ಮುಂದೆ ನಾನು ಸ್ನ್ಯಾಪ್‌ಚಾಟ್ ಅನ್ನು ಖರೀದಿಸುತ್ತಿದ್ದೇನೆ ಮತ್ತು ಎಲ್ಲಾ ಫಿಲ್ಟರ್‌ಗಳನ್ನು ಅಳಿಸುತ್ತಿದ್ದೇನೆ. ಮಹಿಳೆಯರೇ, ವಾಸ್ತವಕ್ಕೆ ಮರಳಿ ಸ್ವಾಗತ ಎಂದು ಬರೆಯಲಾಗಿದೆ.ಈ ಸ್ಕ್ರೀನ್‌ಶಾಟ್ ಅನ್ನು ಅನೇಕರು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ಸ್ಕ್ರೀನ್‌ಶಾಟ್ ನಕಲಿ, ಮಸ್ಕ್ ಅಂಥಾ ಘೋಷಣೆ ಮಾಡಿಲ್ಲ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿ ವರದಿ ಮಾಡಿದೆ.

ಫ್ಯಾಕ್ಟ್ ಚೆಕ್

ಎಲಾನ್ ಮಸ್ಕ್ ಟ್ವಿಟರ್‌ನಲ್ಲಿ ಸ್ನ್ಯಾಪ್‌ಚಾಟ್ ಖರೀದಿಸುವ ಉದ್ದೇಶವನ್ನು ಪ್ರಕಟಿಸಿದ್ದರೆ, ಅದು ಮುಖ್ಯವಾಹಿನಿಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಿತ್ತು.ಆದಾಗ್ಯೂ, ಪ್ರತಿಷ್ಠಿತ ಮಾಧ್ಯಮಗಳಲ್ಲಿ ಯಾವುದೇ ಸಂಬಂಧಿತ ವರದಿಗಳು ಕಂಡುಬಂದಿಲ್ಲ. ಮಸ್ಕ್ ಅವರ ಟ್ವಿಟರ್ ಖಾತೆಯನ್ನು ಪರಿಶೀಲಿಸಲಾಯಿತು. ವೈರಲ್ ಸ್ಕ್ರೀನ್‌ಶಾಟ್ ಪ್ರಕಾರ, ನವೆಂಬರ್ 20 ರಂದು ಮಸ್ಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ನಾವು ಪರಿಶೀಲಿಸಿದಾಗ, ಆ ದಿನಾಂಕದಿಂದ ಅಂತಹ ಯಾವುದೇ ಟ್ವೀಟ್ ಅಲ್ಲಿಲ್ಲ. ನವೆಂಬರ್ 20 ರಂದು, ಮಸ್ಕ್ ಮೂರು ಟ್ವೀಟ್‌, ಎರಡು ವಿಡಿಯೊಗಳನ್ನು ರೀಟ್ವೀಟ್ ಮಾಡಿದ್ದಾರೆ.

ಎಲಾನ್ ಮಸ್ಕ್ ನವೆಂಬರ್ 20ರಂದು ಮಾಡಿದ ಟ್ವೀಟ್

ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್, ಟ್ವಿಟರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೆ ಅಧ್ಯಕ್ಷರಾಗಿಸುವ ಬಗ್ಗೆ  ಮತ್ತು ಒಂದು ಟ್ವಿಟರ್ ಬಗ್ಗೆ ಆಗಿದೆ. ನಾವು ನವೆಂಬರ್ 20 ರಂದು ಮಸ್ಕ್ ಅವರ ಟ್ವೀಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಸಹ ನೋಡಿದ್ದೇವೆ.ಆದರೆ ಅಲ್ಲಿ ಸ್ನ್ಯಾಪ್‌ಚಾಟ್‌ನಲ್ಲಿ ಅಥವಾ ಅದರ ಬಗ್ಗೆ ಏನೂ ಇಲ್ಲ. ಸ್ನಾಪ್ ಚಾಟ್ ಬಗ್ಗೆ ಮಸ್ಕ್ ಟ್ವೀಟ್ ಮಾಡಿದ್ದಾರಾ ಎಂದು ಸರ್ಚ್ ಮಾಡಿದಾಗ ಮಸ್ಕ್ ಮಾಡಿದ ಒಂದೇ ಒಂದು ಟ್ವೀಟ್ ಸಿಕ್ಕಿದೆ. ಅದರಲ್ಲಿ “Snapchat” ಪದವನ್ನು ಬಳಸಿದ್ದು, ಮೇ 22 ರಂದು, ಅವರು ಟ್ವಿಟ್ಟರ್ ಬಳಕೆದಾರರಿಗೆ ಪ್ರತಿಕ್ರಿಯೆಯಾಗಿ ಮಾಡಿದ ಟ್ವೀಟ್ ಆಗಿದೆ ಅದು. ಇದು ತುಂಬಾ ಕೆಟ್ಟ ಆಲೋಚನೆಯಾಗಿದೆ, ಏಕೆಂದರೆ ಷೇರುಗಳು ಒಂದು ದಿನದಿಂದ ಮುಂದಿನ ದಿನಕ್ಕೆ ಹುಚ್ಚುಚ್ಚಾಗಿ ಸ್ವಿಂಗ್ ಆಗಬಹುದು, ಉದಾಹರಣೆಗೆ ಸ್ನ್ಯಾಪ್‌ಚಾಟ್ 43% ಇಳಿಯುತ್ತದೆ. ಟೆಸ್ಲಾ ATH ಗಿಂತ ~40% ಕಡಿಮೆಯಾಗಿದೆ! ಆದಾಗ್ಯೂ, GRAT ಗಳಂತಹ ಎಸ್ಟೇಟ್ ತೆರಿಗೆ ತೆಗೆದುಹಾಕುವುದು ಒಳ್ಳೆಯದು, ಏಕೆಂದರೆ ಮಕ್ಕಳು ಬಂಡವಾಳದ ಪರಿಣಾಮಕಾರಿ ಮೇಲ್ವಿಚಾರಕರಾಗುವ ಸಂಭವನೀಯತೆ ಕಡಿಮೆಯಾಗಿದೆ.


ವೈರಲ್ ಸ್ಕ್ರೀನ್‌ಶಾಟ್ ಪರಿಶೀಲಿಸಿದಾಗ

ವೈರಲ್ ಸ್ಕ್ರೀನ್‌ಶಾಟ್ ನ್ನು ಮಸ್ಕ್ ಅವರ ಟ್ವೀಟ್ ಗೆ ಹೋಲಿಸಿದಾಗ ಅದರಲ್ಲಿ ಸುಮಾರು ವ್ಯತ್ಯಾಸ ಇದೆ. ಎಲಾನ್ ಮಸ್ಕ್ ಅವರ ಪ್ರೊಫೈಲ್ ಚಿತ್ರವನ್ನೇ ನೋಡಿ, ವೈರಲ್ ಟ್ವೀಟ್ ನಲ್ಲಿರುವ ಪ್ರೊಫೈಲ್ ಪಿಕ್ ಮತ್ತು ಎಲಾನ್ ಮಸ್ಕ್ ಒರಿಜಿನಲ್ ಖಾತೆಯಲ್ಲಿರುವ ಫೋಟೊ ವ್ಯತ್ಯಾಸವಿದೆ.ಅಷ್ಟೇ ಅಲ್ಲದೆ ಸಮಯ ಮತ್ತು ದಿನಾಂಕ ನೋಡಿದರೆ ಸಾಮಾನ್ಯ ಟ್ವೀಟ್‌ಗಳಲ್ಲಿ ಸಮಯ ಮತ್ತು ದಿನಾಂಕ ಫಾರ್ಮೆಟ್ ನಡುವೆ ಡಾಟ್ ಫೀಚರ್ ಹೊಂದಿದ್ದರೆ, ವೈರಲ್ ಸ್ಕ್ರೀನ್‌ಶಾಟ್ ನಲ್ಲಿ ಹೈಫನ್ ಇದೆ. ವೈರಲ್ ಪೋಸ್ಟ್‌ನಲ್ಲಿ ದಿನಾಂಕವು “NOV 20” ಎಂದು ಇದೆ. ಆದರೆ ಟ್ವಿಟರ್‌ನಲ್ಲಿ ತಿಂಗಳ ಹೆಸರು ಸಾಮಾನ್ಯವಾಗಿ ಅಪ್ಪರ್ ಕೇಸ್‌ನಲ್ಲಿರುವುದಿಲ್ಲ.

Published On - 5:14 pm, Mon, 28 November 22