ದೆಹಲಿ ನವೆಂಬರ್ 25: ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ (Rajasthan Assembly Election) ಕಾಂಗ್ರೆಸ್ ಮತ್ತು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ(BJP) ಅಬ್ಬರದ ಪ್ರಚಾರ ನಡೆಸಿತ್ತು. ಈ ವೇಳೆ ಕಾಂಗ್ರೆಸ್ ರ‍್ಯಾಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರಾದ ರಿಷಿ ಬಾಗ್ರೀ “ರಾಜಸ್ಥಾನದ ಸಾರ್ವಜನಿಕರು ಮೋದಿ-ಮೋದಿ ಘೋಷಣೆಗಳೊಂದಿಗೆ ಸಿಎಂ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಸಿಎಂ ಗೆಹ್ಲೋಟ್ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಜನಸಮೂಹವು ‘ಮೋದಿ ಮೋದಿ’ ಎಂದು ಘೋಷಣೆ ಮಾಡುತ್ತಿರುವುದು ಕೇಳಿಸುತ್ತದೆ. ಅನೇಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಇದೇ ವಿಡಿಯೊ ಹಂಚಿಕೊಂಡು ಗೆಹ್ಲೋಟ್ ಚುನಾವಣಾ ರ‍್ಯಾಲಿಯಲ್ಲಿ ಮೊಳಗಿದ ಮೋದಿ ಪರ ಘೋಷಣೆ ಎಂಬ ಶೀರ್ಷಿಕೆ ನೀಡಿದ್ದಾರೆ.
Public in Rajasthan greeted CM Gehlot with Modi-Modi chants 😀 pic.twitter.com/03DCLYFrvk
— Rishi Bagree (@rishibagree) November 23, 2023
ಅಂದಹಾಗೆ ಈ ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ಎಬಿಪಿ ಲೈವ್, ಈ ವಿಡಿಯೊ ಎಡಿಟ್ ಮಾಡಿದ್ದು. ಗೆಹ್ಲೋಟ್ ಭಾಷಣ ವೇಳೆ ಮೋದಿ ಪರ ಘೋಷಣೆ ಕೂಗಲಾಗಿಲ್ಲ ಎಂದಿದೆ. ವೈರಲ್ ವಿಡಿಯೊದ ಕೀಫ್ರೇಮ್ ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾದ ವಿಡಿಯೊ ತುಣುಕು ನವೆಂಬರ್ 22 ರಂದು ಗೆಹ್ಲೋಟ್ ಮಾಡಿದ ಭಾಷಣದ್ದು ಎಂಬುದು ಗೊತ್ತಾಯಿತು. ಅಶೋಕ್ ಗೆಹ್ಲೋಟ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ಭಾಷಣದ ದೀರ್ಘ ಆವೃತ್ತಿ ಇದೆ. ವಿಡಿಯೊ ಶೀರ್ಷಿಕೆ ಮತ್ತು ವಿವರಣೆಯ ಪ್ರಕಾರ, ರಾಜಸ್ಥಾನದ ಟೋಂಕ್ ಜಿಲ್ಲೆಯ ಮಾಲ್ಪುರದಲ್ಲಿ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಗೆಹ್ಲೋಟ್ ಮಾತನಾಡುತ್ತಿದ್ದರು.
ತೋಡರೈಸಿಂಗ್-ಮಲ್ಪುರದ ಕಾಂಗ್ರೆಸ್ ಅಭ್ಯರ್ಥಿ ಘಾಸಿಲಾಲ್ ಚೌಧರಿ ಅವರನ್ನು ಬೆಂಬಲಿಸಲು ಗೆಹ್ಲೋಟ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಜಾನುವಾರು ಸಾಕಣೆದಾರರ ಮೇಲೆ ಕಾಂಗ್ರೆಸ್‌ನ ಖಾತರಿಗಳು, ಗೃಹ ಲಕ್ಷ್ಮಿ ಯೋಜನೆ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕಡಿತದ ಬಗ್ಗೆ ಮುಖ್ಯಮಂತ್ರಿ ಮಾತನಾಡಿದರು. ರ್ಯಾಲಿಯಲ್ಲಿ ರಾಜ್ಯಸಭಾ ಸಂಸದ ದೀಪೇಂದ್ರ ಸಿಂಗ್ ಹೂಡಾ ಕೂಡ ಉಪಸ್ಥಿತರಿದ್ದರು.
2:15 ಟೈಮ್‌ಸ್ಟ್ಯಾಂಪ್ ನಲ್ಲಿ ವೈರಲ್ ಕ್ಲಿಪ್‌ನ ದೃಶ್ಯವನ್ನು ಕಾಣಬಹುದು ಇಲ್ಲಿ, ಪ್ರತಿ ಕುಟುಂಬದ ಮಹಿಳೆಗೆ ವಾರ್ಷಿಕ ₹ 10,000 ನೀಡುವ ಕಾಂಗ್ರೆಸ್‌ನ ಭರವಸೆಯ ಬಗ್ಗೆ ಗೆಹ್ಲೋಟ್ ಮಾತನಾಡುತ್ತಿದ್ದಾರೆ. ವೇದಿಕೆಯಲ್ಲಿ ಅವರ ಪಕ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘಾಸಿಲಾಲ್ ಚೌಧರಿ ನಿಂತಿದ್ದಾರೆ. ಆದರೆ ವಿಡಿಯೊದಲ್ಲಿ ಎಲ್ಲಿಯೂ ಮೋದಿ ಪರ ಘೋಷಣೆ ಕೇಳಿಲ್ಲ.
ಗೆಹ್ಲೋಟ್ ಮಾತನಾಡುತ್ತಿದ್ದಂತೆ ಕೆಲವರು (ಫ್ರೇಮ್‌ನಲ್ಲಿ ಕಾಣಿಸದ) ಬಹುಶಃ ಕಿರುಚುತ್ತಿದ್ದರು ಎಂದು ವಿಡಿಯೊ ತೋರಿಸುತ್ತದೆ. ಕೂಗಾಟದಿಂದ ವಿಚಲಿತರಾದ ಗೆಹ್ಲೋಟ್ “ಅವರು ಯಾರು “ನೀವು ಅವನ ಬೆಂಬಲಕ್ಕೆ ಬಂದಿದ್ದೀರಾ ಅಥವಾ ಇಲ್ಲವೇ? ಎಂದು ಕೇಳುತ್ತಾ ಅವರಿಗೂ ಕುಳಿತುಕೊಳ್ಳುವಂತೆ ಸೂಚಿಸುತ್ತಾಕ. ಅವನ ಪಕ್ಕದಲ್ಲಿ, ಚೌಧರಿ ಕೂಡ ತನ್ನ ಕೈಯಿಂದ ಸನ್ನೆ ಮಾಡಿ, ಜನರಲ್ಲಿ ಕುಳಿತುಕೊಳ್ಳುವಂತೆ ಮನವಿ ಮಾಡುತ್ತಾರೆ. ಆದರೆ, ‘ಮೋದಿ ಮೋದಿ’ ಘೋಷಣೆಗಳು ಕೇಳಿಸಲಿಲ್ಲ.
ಇದನ್ನೂ ಓದಿ: ‘ಒಂದು ತಿಂಗಳೊಳಗೆ ಅವರು ನಗುತ್ತಾರೆ’; ರೋಹಿತ್ ಶರ್ಮಾ ಮಗಳ ವೈರಲ್ ವಿಡಿಯೊ ಇತ್ತೀಚಿನದ್ದು ಅಲ್ಲ
ಗೆಹ್ಲೋಟ್ ರ‍್ಯಾಲಿಯ ಲೈವ್‌ಸ್ಟ್ರೀಮ್ ಅನ್ನು ನವೆಂಬರ್ 22 ರಂದು ಕಾಂಗ್ರೆಸ್ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್ ‘INC TV’ ನಲ್ಲಿ ಸಹ ಹಂಚಿಕೊಳ್ಳಲಾಗಿದೆ. ಈಗ ವೈರಲ್ ಕ್ಲಿಪ್ ಸುಮಾರು 2:40 ಟೈಮ್‌ಸ್ಟ್ಯಾಂಪ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲೂ ಕೂಡ ನರೇಂದ್ರ ಮೋದಿ ಪರ ಘೋಷಣೆಗಳು ಕೇಳಿ ಬಂದಿಲ್ಲ.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Sat, 25 November 23